Advertisement

ನಮ್ಮತ್ರನೂ ಸಾಕಷ್ಟು ಇವೆ:IT ಕೈಗೆ ಸಿಕ್ಕ ಡೈರಿ ಕುರಿತು ಡಿಕೆಶಿ ಕಿಡಿ!

12:08 PM Jun 20, 2018 | Team Udayavani |

ಬೆಂಗಳೂರು: ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ ಕುರಿತು ವೈದ್ಯಕೀಯ ಹಾಗೂ ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿವಕುಮಾರ್‌ ಅವರು ತೀವ್ರ ಆಶ್ಚರ್ಯ ವ್ಯಕ್ತ ಪಡಿಸಿ ಕಿಡಿ ಕಾರಿದ್ದಾರೆ. 

Advertisement

ಐಟಿ ದಾಳಿ ನಡೆದ ವೇಳೆ ಅಘೋಷಿತ ಆಸ್ತಿ ಪತ್ತೆಯಾದ ಕುರಿತು ತನಿಖೆ ವೇಳೆ  ಡಿಕೆಶಿ ಅವರ ಆಪ್ತ ದೆಹಲಿಯ ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಎನ್ ಅವರ ಬಳಿ ಡೈರಿಯೊಂದು ಪತ್ತೆಯಾಗಿದ್ದು, ಅದರಲ್ಲಿ ಹಲವು ಆಕ್ರಮ ಹಣಕಾಸು ವ್ಯವಹಾರಗಳ ವಿಚಾರಗಳನ್ನು  ಐಟಿ ಪತ್ತೆ ಹಚ್ಚಿರುವ ಕುರಿತು ವರದಿಯಾಗಿದೆ. ಡೈರಿಯಲ್ಲಿ ಹಲವು ಕೋಡ್‌ ವರ್ಡ್‌ಗಳು ಮತ್ತು ಯಾರ್ಯಾರಿಗೆ ಹಣ ಸಂದಾಯವಾಗಿದೆ ಎನ್ನುವ ಕುರಿತೂ ವಿವರಗಳಿವೆ ಎನ್ನಲಾಗಿದೆ. 

ಈ ಕುರಿತು ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ  ಸಚಿವ ಡಿ.ಕೆ.ಶಿವಕುಮಾರ್‌ ‘ಡೈರಿಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಬೇಕಾದಷ್ಟು ಕಾನೂನುಗಳು ಬಂದಿವೆ. ನಮ್ಮತ್ರನೂ ಡೈರಿಗಳು ಇವೆ. ನನಗೆ ಆಶ್ಚರ್ಯ ಆಗುತ್ತಿದೆ. ನಾನು ಅಂತಹ ತಪ್ಪುಗಳನ್ನು ಮಾಡಿಲ್ಲ’ಎಂದರು. 

‘ಅವರು ಎಲ್ಲವನ್ನೂ ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ನೀವೂ (ಮಾಧ್ಯಮಗಳು) ಯಾವಾಗ ಜೈಲೋ , ಯಾವಾಗ ಬೇಲೋ ಎಂದು ವರದಿ ಮಾಡುತ್ತಿದ್ದೀರಿ ನಿಮಗೆ ಸಂತೋಷ ಬಂದಂತೆ ಮಾಡಿ’ ಎಂದು ಕಿಡಿ ಕಾರಿದರು. 

‘ದೇಶ ಇದೆ,ನ್ಯಾಯಾಲಯ, ಕಾನೂನು,ಸಂವಿಧಾನ ಇದೆ ಎಲ್ಲದಕ್ಕೂ ನಾನು ಗೌರವ ಕೊಡುತ್ತೇನೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದನ ನಾನು ಹೆಚ್ಚಿಗೆ ಏನೂ ಮಾತನಾಡುವುದಿಲ್ಲ’ ಎಂದರು. 

Advertisement

‘ನಮ್ಮತ್ರವೂ ಹಲವು ಡೈರಿಗಳಿವೆ. ನನಗೆ, ನನ್ನ ಸಹೋದರ,ತಾಯಿಗೆ ಎಲ್ಲರಿಗೂ ನೊಟೀಸ್‌ಗಳನ್ನು ನೀಡಲಾಗುತ್ತಿದೆ. ನಾನೊಬ್ಬನೆ ಇರುವುದೆ? ಬೇರೆಯವರು ಇಲ್ಲವೆ?. ನನ್ನಷ್ಟು ಕಿರುಕುಳ ಯಾರಿಗೂ ನೀಡಿಲ್ಲ. ಬಹಳಷ್ಟು ಹೆಸರು ಕೇಳಿ ಬರುತ್ತವೆ, ನಮ್ಮ ಪಕ್ಷದ ಹೆಸರೂ ಬಂದಿದೆ. ನಾನು ಕೊನೆವರೆಗೆ ಕಾದು ನೋಡುತ್ತೇನೆ. ನನಗೆ ಎಲ್ಲಾ ಗೊತ್ತಿದೆ, ಅದರ ಮರ್ಮ ಎನೆಂದು ಕೊನೆಗೆ ಹೇಳುತ್ತೇನೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next