Advertisement

ಎಸ್.ಆರ್.ಪಾಟೀಲ್ ಗೆ ಟಿಕೆಟ್ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ: ಎಂ.ಬಿ.ಪಾಟೀಲ್

01:18 PM May 23, 2022 | Team Udayavani |

ಬೆಂಗಳೂರು: ಮೇಲ್ಮನೆ ಟಿಕೆಟ್ ವಿಚಾರದ ಬಗ್ಗೆ ಪಕ್ಷದ ಅಧ್ಯಕ್ಷರು, ವಿಧಾನಸಭೆಯ ವಿಪಕ್ಷ ನಾಯಕರ ಜೊತೆ ಚರ್ಚೆ ಮಾಡಿರುತ್ತಾರೆ. ಅವರಿಗೆ ಅದರ ಬಗ್ಗೆ ಗೊತ್ತಿರುತ್ತದೆ. ನನಗೆ ಅದರ ಬಗ್ಗೆ ಯಾವುದೂ ಗೊತ್ತಿಲ್ಲ. ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದರು.

Advertisement

ಎಸ್.ಆರ್.ಪಾಟೀಲ್ ಅವರಿಗೆ ಮೇಲ್ಮನೆ ಟಿಕೆಟ್ ನೀಡಲು ವಿರೋಧ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ವಿರೋಧ ಮಾಡುವ ಬಗ್ಗೆ ಪ್ರಶ್ನೆ ಉದ್ಬವಿಸುವುದಿಲ್ಲ. ಈ ಬಗ್ಗೆ ಸಭೆಗೆ ನನ್ನನ್ನು ಕರೆದು‌ ಚರ್ಚೆಯನ್ನೂ‌ ಮಾಡಿಲ್ಲ. ನಾನು ಪರವೂ ಇಲ್ಲ, ವಿರೋಧವೂ ಇಲ್ಲ ನಾನ್ಯಾಕೆ ಅವರನ್ನ ವಿರೋಧ ಮಾಡಲಿ ಎಂದರು.

ಇದನ್ನೂ ಓದಿ:ಸಿದ್ದರಾಮಯ್ಯ ಬೇಕಾದರೆ ಗೋ ಮಾಂಸ ತಿನ್ನಲಿ, ಆದರೆ ವಕೀಲಿಕೆ ಮಾಡಬೇಡಿ: ಛಲವಾದಿ ನಾರಾಯಣಸ್ವಾಮಿ

ಪಠ್ಯಪುಸ್ತಕದಲ್ಲಿ ಹೆಡಗೇವಾರ್ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎಂ.ಬಿ.ಪಾಟೀಲ್, ನಾರಾಯಣ ಗುರು, ಬಸವಣ್ಣ ಆದರ್ಶಪ್ರಾಯರು. ಮುಂದಿನ ಪೀಳಿಗೆಗೆ ಅವರ ತತ್ವಗಳ ಮೌಲ್ಯ ತಿಳಿಸಬೇಕು. ಪಠ್ಯದಲ್ಲಿ ಆರ್ ಎಸ್ಎಸ್ ತತ್ವ ಸೇರಿಸುವುದು ಸರಿಯಲ್ಲ. ನಾರಾಯಣ ಗುರು, ಪೆರಿಯಾರ್, ಭಗತ್ ಸಿಂಗ್ ಪಠ್ಯ ಇರಲಿ. ಅವರ ತತ್ವಗಳನ್ನು ಮಕ್ಕಳಿಗೆ ತಿಳಿಸಲಿ. ಈ ರೀತಿ ಆರ್ ಎಸ್ಎಸ್ ಸಿದ್ಧಾಂತ ಹೇರುವುದು ಸರಿಯಲ್ಲ. ಬಿಜೆಪಿಯವರು ಇದನ್ನೇ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next