Advertisement

ಡ್ರೆಜ್ಜರ್‌ನಲ್ಲಿ ತೈಲ ಸೋರಿಕೆಯಿಲ್ಲ: ಎನ್‌ಎಂಪಿಟಿ

03:15 AM Jul 07, 2020 | Sriram |

ಸುರತ್ಕಲ್‌: ನವಮಂಗಳೂರು ಬಂದರಿನ ಹೂಳೆತ್ತಲು ಗುತ್ತಿಗೆ ಪಡೆದು ಬಂದಿದ್ದ ಮುಂಬಯಿಯ ಮಾರ್ಕೇಟರ್‌ ಲಿಮಿಟೆಡ್‌ನ‌ ಭಗವತಿ ಪ್ರೇಮ್‌ ಡ್ರೆಜ್ಜರ್‌ ಕೆಟ್ಟು ಹೋದ ಪರಿಣಾಮ ಸುರತ್ಕಲ್‌ ಸಮೀಪದ ಗುಡ್ಡೆಕೊಪ್ಲದಲ್ಲಿ ಎನ್‌ಎಂಪಿಟಿ ಲಂಗರು ಹಾಕಿಸಿದ್ದು ಯಾವುದೇ ರೀತಿಯ ತೈಲ ಸೋರಿಕೆ ಆಗುತ್ತಿಲ್ಲ ಎಂದು ಮಂಡಳಿ ತಿಳಿಸಿದೆ.

Advertisement

ಮುಳುಗುವ ಸ್ಥಿತಿಯಲ್ಲಿದ್ದ ಈ ಡ್ರೆಜ್ಜರನ್ನು ಎನ್‌ಎಂಪಿಟಿ ಸಮುದ್ರ ಮಾಲಿನ್ಯವಾಗದಂತೆ ಎಲ್ಲ ಮುಂಜಾ ಗ್ರತಾ ಕ್ರಮ ಕೈಗೊಂಡಿತ್ತು. ಅದರಲ್ಲಿದ್ದ ಸಿಬಂದಿಯನ್ನು ರಕ್ಷಿಸಿ ಕಳೆದ ಡಿಸೆಂಬರ್‌ನಲ್ಲಿ ಅದರಲ್ಲಿದ್ದ ತೈಲ, ಕೀಲೆಣ್ಣೆಗಳನ್ನು ಅತ್ಯಾಧುನಿಕ ವ್ಯವಸ್ಥೆ ಬಳಸಿ ತೆಗೆಯಲಾಗಿತ್ತು. ಇದರ ನಿಗಾ ಕ್ಕಾಗಿ ಅಧಿ ಕಾರಿಗಳನ್ನು ನಿಯೋಜಿ ಸಲಾಗಿತ್ತು. ಬಂದರಿನ ಶುಲ್ಕ ಪಾವತಿಸಲು ವಿಫಲವಾದ ಬಳಿಕ ಬಂದರು ಮಂಡಳಿ ಇದನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಮುಂದಾಗಿದೆ. ಕಳೆದ ಜೂನ್‌ ತಿಂಗಳಲ್ಲಿ ಡ್ರೆಜ್ಜರ್‌ ವಾಲುತ್ತಿದ್ದು ಸಮುದ್ರ ಮಾಲಿನ್ಯದ ಭೀತಿಯಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ ಎಂದು ಮಂಡಳಿ ತಿಳಿಸಿದೆ.

ಕಳೆದ ಅ.28ರಂದು ಅರಬ್ಬಿ ಸಮುದ್ರದಲ್ಲಿ ಕ್ಯಾರ್‌ ಚಂಡ ಮಾರುತ ಉಂಟಾದಾಗ ಭಾರೀ ಅಲೆಗಳ ಹೊಡೆತಕ್ಕೆ ಚುಕ್ಕಾಣಿ ಮುರಿದು ಮುಳುಗುವ ಸಂದರ್ಭ ಎದುರಾದಾಗ ಅದರಲ್ಲಿದ್ದ 15ಕ್ಕೂ ಮಿಕ್ಕಿ ಕಾರ್ಮಿಕರನ್ನು ರಕ್ಷಿಸಲಾಗಿತ್ತು. ಬಳಿಕ ಗುಡ್ಡೆಕೊಪ್ಲ ಬಳಿ ತಂದಿರಿಸಲಾಗಿತ್ತು. ಇದೀಗ ಈ ಡ್ರೆಜ್ಜರ್‌ ಮರಳಲ್ಲಿ ಹೂತು ಹೋಗಿದ್ದು ಮೇಲೆತ್ತಲು ಭಾರೀ ವೆಚ್ಚವಾಗಲಿದೆ. ಹೀಗಾಗಿ ಇದ್ದ ಜಾಗದಲ್ಲಿಯೇ ಒಡೆಯುವ ಇಲ್ಲವೆ ಸ್ಥಳಾಂತರ ಮಾಡುವ ಎರಡೇ ಆಯ್ಕೆ ಬಂದರು ಮುಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next