Advertisement

ಗೃಹಲಕ್ಷ್ಮೀ ವಿರುದ್ಧದ ಕೇಸು ವಜಾ

09:30 AM Jun 22, 2018 | Team Udayavani |

ಎರ್ನಾಕುಳಂ: ಈ ವರ್ಷದ ಮಾರ್ಚ್‌ನಲ್ಲಿ ಮಲಯಾಳಂ ನಿಯತಕಾಲಿಕೆ ‘ಗೃಹಲಕ್ಷ್ಮೀ’ಯಲ್ಲಿ ಪ್ರಕಟವಾಗಿದ್ದ ಮುಖಪುಟ ಚಿತ್ರದ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ವಜಾ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಆ್ಯಂಟನಿ ಡೊಮಿನಿಕ್‌ ಮತ್ತು ನ್ಯಾ| ದಾಮ ಶೇಷಾದ್ರಿ ನಾಯ್ಡು ನೇತೃತ್ವದ ಪೀಠ, ‘ಒಬ್ಬ ವ್ಯಕ್ತಿಗೆ ಅಶ್ಲೀಲ ಎಂದು ಕಂಡುಬಂದಿರುವುದು ಮತ್ತೂಬ್ಬನಿಗೆ ಕಾಣಬೇಕಾಗಿಲ್ಲ’ ಎಂದು ಹೇಳಿದೆ.

Advertisement

ಭಾರತದ ಕಲಾ ಕ್ಷೇತ್ರವು ಮಾನವನ ದೇಹವನ್ನು ಗೌರವದಿಂದ ಕಾಣುತ್ತದೆ. ರಾಜಾ ರವಿವರ್ಮ, ಕಾಮಸೂತ್ರ, ಅಜಂತಾದ ಗುಹಾ ದೇವಾಲಯಗಳಲ್ಲಿರುವ ಚಿತ್ರಗಳಲ್ಲಿ ಈ ಅಂಶ ಎದ್ದು ಕಾಣುತ್ತದೆ ಎಂದು ನ್ಯಾಯಪೀಠ ಅಭಿ ಪ್ರಾಯ ಪಟ್ಟಿದೆ. ನಿಯತಕಾಲಿಕದ ಮುಖಪುಟ ಯಾವುದೇ ರೀತಿಯಾದ ಅಶ್ಲೀಲ ಅಂಶವನ್ನು ಹೊಂದಿಲ್ಲ. ಕಲೆಯನ್ನು ಆಸ್ವಾದಿಸುವ ನಿಟ್ಟಿನಲ್ಲಿ ಭಾರತದ ಜನರು ಅಶ್ಲೀಲ ಮನಃಸ್ಥಿತಿಯನ್ನು ಹೊಂದಿರುವುದರ ಬದಲು ಪ್ರೌಢಿಮೆಯನ್ನು ಹೊಂದಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next