Advertisement
ಅದರಲ್ಲೂ ಬಿಜೆಪಿ, ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ ಜೋರಾಗಿದೆ. ಟಿಕೆಟ್ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳಿಗೆ ಎಲ್ಲಿ ಟಿಕೆಟ್ ಕೈ ತಪ್ಪುವುದೋ ಎನ್ನುವ ಆತಂಕ ಹೆಚ್ಚಾಗುತ್ತಿದ್ದು, ಬೇರೆ ಪಕ್ಷಗಳ ಕಡೆ ಮುಖ ಮಾಡುತ್ತಿದ್ದಾರೆ. ಆದರೆ, ಈ ಹಿಂದೆ ನಗರಸಭೆಯಲ್ಲಿ ಯಾವುದೇ ಪಕ್ಷಗಳಿಗೂ ಸ್ಪಷ್ಟ ಬಹುಮತ ಸಿಗದ ಕಾರಣ ಕಾಂಗ್ರೆಸ್ ಜೆಡಿಎಸ್ ಸೇರಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದವು. ಆದರೆ, ಈ ಬಾರಿ ಮೂರೂ ಪಕ್ಷಗಳು ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸದಲ್ಲಿವೆ.
Related Articles
Advertisement
ಜಾತಿ ಲಾಬಿ ಜೋರು: ಟಿಕೆಟ್ ಕೇಳುತ್ತಿರುವ ಆಕಾಂಕ್ಷಿಗಳು ಕೇವಲ ಹಣ ಬಲ, ತೋಳ್ಬಲ ಮಾತ್ರವಲ್ಲದೇ ಜಾತಿ ಬಲವನ್ನೂ ಪ್ರದರ್ಶಿಸುತ್ತಿದ್ದಾರೆ. ನಮ್ಮ ಸಮಾಜದವರ ಜನಸಂಖ್ಯೆ ಹೆಚ್ಚಿದ್ದು, ಟಿಕೆಟ್ ಕೊಡಿ ಎಂದು ಕೇಳುತ್ತಿದ್ದಾರೆ. ಅಲ್ಲದೇ, ಕೆಲ ವಾರ್ಡಗಳಲ್ಲಿ ಹೆಚ್ಚು ಜನಸಂಖ್ಯೆ ಇರುವ ಜಾತಿ ಬಿಟ್ಟು ಬೇರೆ ಜಾತಿಯವರಿಗೆ ಮೀಸಲಾತಿ ಸಿಕ್ಕಿದೆ. ತಮ್ಮಜಾತಿ ಜನರಿರುವ ಕಡೆ ಮೀಸಲಾತಿ ಸಿಕ್ಕವರು ಮಾತ್ರ ಟಿಕೆಟ್‌ಗಾಗಿ ಬೆನ್ನು ಬಿದ್ದಿದ್ದಾರೆ. ಇನ್ನು ತಮ್ಮ ಜಾತಿ ಜನರಿಗೆ ಇನ್ನಿಲ್ಲದ ಆಮಿಷವೊಡ್ಡುತ್ತಿರುವ ಸ್ಪರ್ಧಾಕಾಂಕ್ಷಿಗಳು ಈಗಾಗಲೇ ಮುಂಗಡ ಹಣ ನೀಡಿ ನಿಷ್ಠೆ ಪ್ರದರ್ಶಿಸುತ್ತಿದ್ದಾರೆ.
ಅಂತಿಮಗೊಳ್ಳದ ಪಟ್ಟಿ: ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಮೂರು ಪಕ್ಷಗಳು, ನಾಮಪತ್ರ ಸಲ್ಲಿಕೆ ಅಂತಿಮ ದಿನವೇ ಬಿ ಫಾರಂ ನೀಡುವ ಯೋಚನೆಯಲ್ಲಿವೆ. ಇಲ್ಲವಾದರೆ ಅನಗತ್ಯ ಗೊಂದಲ ಸೃಷ್ಟಿಯಾಗಬಹದು ಎಂಬ ಕಾರಣಕ್ಕೆ ಟಿಕೆಟ್ ಆಕಾಂಕ್ಷಿಗಳನ್ನು ಸಮಾಧಾನಪಡಿಸುತ್ತಿದ್ದಾರೆ. ಪ್ರತಿ ವಾರ್ಡ್‌ನಿಂದ ಪ್ರತಿ ಪಕ್ಷಕ್ಕೆ 3-4 ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಬಿಜೆಪಿಯವರು ಆ.16ರಂದೇ ಬಿ ಫಾರಂ ನೀಡುವ ಚಿಂತನೆಯಲ್ಲಿದ್ದಾರೆ. ಜೆಡಿಎಸ್ ನವರು ಸೋಮವಾರ ಅಂತಿಮಗೊಳಿಸುವ ಸಾಧ್ಯತೆಗಳಿವೆ. ಈ ಬಾರಿ ಸ್ಥಳೀಯ ಸಂಸ್ಥೆಗಳ ಟಿಕೆಟ್‌ಗೆ ಭಾರೀ ಡಿಮಾಂಡ್ ಇದೆ. ಒಂದೊಂದು ವಾರ್ಡ್‌ಗೆ ಮೂರ್‍ನಾಲ್ಕು ಜನ ಆಕಾಂಕ್ಷಿಗಳಿದ್ದಾರೆ. ಎಲ್ಲರನ್ನು ಸಮಾಧಾನಪಡಿಸುತ್ತಿದ್ದೇವೆ. ಪಕ್ಷಕ್ಕಾಗಿ ಶ್ರಮಿಸಿದವರಿಗೆ ಆದ್ಯತೆ ಸಿಗಲಿದೆ. ಹೀಗಾಗಿ
ಆ.16ರಂದೇ ಎಲ್ಲರಿಗೂ ಬಿ ಫಾರಂ ನೀಡಲು ನಿರ್ಧರಿಸಲಾಗಿದೆ.
ಶರಣಪ್ಪಗೌಡ ಜಾಡಲದಿನ್ನಿ, ಬಿಜೆಪಿ ಜಿಲ್ಲಾಧ್ಯಕ್ಷಾ ಪ್ರತಿ ವಾರ್ಡ್‌ನಿಂದ ಕನಿಷ್ಠ ಮೂರ್‍ನಾಲ್ಕು ಜನ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಸಭೆ ನಡಸಿದ್ದು, ಅಭ್ಯರ್ಥಿಗಳನ್ನು
ಅಂತಿಮಗೊಳಿಸಲಾಗಿದೆ. ಸೋಮವಾರ ಅಧಿಕೃತವಾಗಿ ಪ್ರಕಟಿಸುವ ಉದ್ದೇಶವಿದೆ.
ಎಂ.ವಿರೂಪಾಕ್ಷಿ, ಜೆಡಿಎಸ್ ಜಿಲ್ಲಾಧ್ಯಕ್ಷಾ