Advertisement

ಒಮಿಕ್ರಾನ್‌ ದಿನೇ ದಿನೆ ಅಧಿಕ: ಬ್ರಿಗೇಡ್‌ ರಸ್ತೆಯಲ್ಲಿ ಹೊಸ ವರ್ಷಾಚರಣೆ ಇಲ್ಲ

01:28 PM Dec 21, 2021 | Team Udayavani |

 ಬೆಂಗಳೂರು: ಒಮಿಕ್ರಾನ್‌ ಸೋಂಕಿನ ಪ್ರಕರಣಗಳು ದಿನೇ ದಿನೆ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬ್ರಿಗೇಡ್‌ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡದಂತೆ ಬ್ರಿಗೇಡ್‌ ಶಾಪ್ಸ್‌ ಅಂಡ್‌ ಎಸ್ಟಾಬ್ಲಿಷ್‌ಮೆಂಟ್‌ ಅಸೋಶಿಯೇಷನ್‌ (ಬಿಎಸ್‌ಇಎ) ನಿರ್ಬಂಧ ವಿಧಿಸಿದೆ.

Advertisement

ಈ ಬಗ್ಗೆ ಬಿಎಸ್‌ಇಎ ಸದಸ್ಯರೊಬ್ಬರು ಮಾಹಿತಿ ನೀಡಿದ್ದು,ನಗರದಲ್ಲಿ ಪ್ರತಿ ವರ್ಷ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಆಚರಣೆ ವೇಳೆ ಬ್ರಿಗೇಡ್‌ ರಸ್ತೆಯಲ್ಲಿ ಝಗಮಗಿಸುವ ಲೈಟಿಂಗ್ಸ್‌, ಸಂಗೀತ ಕಾರ್ಯಕ್ರಮಕ್ಕೆ ವೇದಿಕೆಗಳು ಹಾಗೂ ಜನರು ಸಂಭ್ರಮಕ್ಕಾಗಿ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಕೋವಿಡ್‌ನ‌ ಹೊಸ ರೂಪಾಂತರ ವೈರಾಣು ಸೋಂಕು ದ್ವಿಗುಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪೊಲೀಸ್‌ ಚೌಕಿ, ಸಿಸಿಟಿವಿ ಕ್ಯಾಮರಾ, ಭದ್ರತಾ ಸಿಬ್ಬಂದಿ ಸೇರಿಹಲವು ಮನರಂಜನಾ ಕಾರ್ಯಕ್ರಮಗಳನ್ನು ಆಯೋ ಜನೆ ಮಾಡಲಾಗುತ್ತಿತ್ತು. ನೂತನ ವರ್ಷದ ಸಂಭ್ರಮಕ್ಕಾಗಿ ಸಂಘಟನೆಯಿಂದ ವಾರ್ಷಿಕ 15 ಲಕ್ಷ ರೂ. ವೆಚ್ಚ ಮಾಡುತ್ತಿತ್ತು. ಆದರೆ ಈ ವರ್ಷ ಖರ್ಚು ವೆಚ್ಚಗಳಿಗೆ ಬ್ರೇಕ್‌ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಜನಸಂದಣಿ ಸೇರುವುದು ಬೇಡ: ಬ್ರಿಗೇಡ್‌ ರಸ್ತೆಯ ವೈಶಿಷ್ಟತೆ ತಿಳಿಸಲು ಪ್ರತಿವರ್ಷ ಡಿ.15ರಿಂದ ಜ.5ರವರೆಗೆ ಲೈಟಿಂಗ್ಸ್‌, ಕಾರ್ಯಕ್ರಮಕ್ಕೆ ವೇದಿಕೆ ಹಾಗೂ ಜನರು ಸೇರುವುದಕ್ಕೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಒಮಿಕ್ರಾನ್‌ ಹಿನ್ನೆಲೆಯಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳಬೇಕಿದೆ.ಆ ಹಿನ್ನೆಲೆಯಲ್ಲಿ ಬ್ರಿಗೇಡ್‌ ರಸ್ತೆಯಲ್ಲಿ ಜನಸಂದಣಿ ಸೇರುವುದು ಬೇಡವೆಂದು ಬ್ರಿಗೇಡ್‌ ಶಾಪ್ಸ್‌ ಅಂಡ್‌ ಎಸ್ಟಾಬ್ಲಿಷ್‌ಮೆಂಟ್‌ ಅಸೋಶಿಯೇಷನ್‌ ಅಧ್ಯಕ್ಷ ಸೋಹೆಲ್‌ ಯೂಸುಫ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next