Advertisement

ಹೊಸ ಸಾಲ ಮನ್ನಾ ಇಲ್ಲ: ಬಿಎಸ್‌ವೈ

11:16 PM Oct 16, 2019 | Lakshmi GovindaRaju |

ಬೆಳಗಾವಿ: ಮತ್ತೆ ಹೊಸದಾಗಿ ಸಾಲ ಮನ್ನಾ ಮಾಡುವ ಯಾವುದೇ ಆಲೋಚನೆ ಸದ್ಯಕ್ಕೆ ಇಲ್ಲ. ಆದರೆ, ಹಿಂದಿನ ಸರ್ಕಾರ ಮಾಡಿದ ಸಾಲ ಮನ್ನಾ ಯೋಜನೆಯಲ್ಲಿ ಬಾಕಿ ಉಳಿದಿದ್ದರೆ ಅದನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ಈಗ ರಾಜ್ಯದಲ್ಲಿ ನೆರೆ ಹಾವಳಿಯಿಂದ ಅಪಾರ ಹಾನಿ ಉಂಟಾಗಿದೆ. ನೆರೆ ಸಂತ್ರಸ್ತರಿಗೆ ದೊಡ್ಡ ಮಟ್ಟದಲ್ಲಿ ಪರಿಹಾರ ನೀಡಲಾಗುತ್ತಿದೆ. ಮನೆ ಕಳೆದು ಕೊಂಡ ವರಿಗೆ 5 ಲಕ್ಷದವರೆಗೆ ಪರಿಹಾರ ನೀಡಲಾಗುತ್ತಿದೆ. ಹೀಗಾಗಿ, ಎಲ್ಲದಕ್ಕೂ ಹಣ ಸರಿದೂಗಿಸುವ ದೊಡ್ಡ ಜವಾಬ್ದಾರಿ ಸರ್ಕಾ ರದ ಮೇಲಿದೆ. ಹೀಗಾಗಿ, ಹೊಸ ಸಾಲ ಮನ್ನಾ ಯೋಜನೆ ಘೋಷಣೆ ವಿಚಾರ ಸರ್ಕಾರದ ಮುಂದಿಲ್ಲ ಎಂದರು.

15 ಕ್ಷೇತ್ರಗಳಲ್ಲೂ ಬಿಜೆಪಿಗೆ ಜಯ: ಡಿಸೆಂಬರ್‌ನಲ್ಲಿ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ಅ.22ರಂದು ತೀರ್ಪು ಬರುವ ನಿರೀಕ್ಷೆಯಿದೆ. ಅದು ಅನರ್ಹ ಶಾಸಕರ ಪರವಾಗಿ ಬರಲಿದೆ ಎಂಬ ವಿಶ್ವಾಸ ಇದೆ.

ಈ ತೀರ್ಪು ನೋಡಿಕೊಂಡು ನಂತರ ಪಕ್ಷದ ಟಿಕೆಟ್‌ ಬಗ್ಗೆ ನಿರ್ಧಾರ ಮಾಡಲಾಗುವುದು. ಈ ಉಪ ಚುನಾವಣೆ ನಮಗೆ ಬಹಳ ಮಹತ್ವದ್ದಾಗಿದ್ದು, ಪ್ರತಿ ಕ್ಷೇತ್ರಕ್ಕೆ ಸಚಿವರನ್ನು ಉಸ್ತುವಾರಿಯನ್ನಾಗಿ ನಿಯೋಜನೆ ಮಾಡಲಾಗುತ್ತಿದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಅಥವಾ ಗೊಂದಲ ಇಲ್ಲ. ಇದರಿಂದ ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದರು.

ಹೆಲಿಕಾಪ್ಟರ್‌ಗಾಗಿ ಹಲವು ತಾಸು ಕಾಯ್ದ ಸಿಎಂ: ಸವದಿ ವಿರುದ್ಧ ಗರಂ
ಬೆಳಗಾವಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ತೆರಳಲು ಬೆಳಗಾವಿಗೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ, ಬುಧವಾರ ಬೆಳಗ್ಗೆ ಹೆಲಿಕಾಪ್ಟರ್‌ ಬಾರದೇ ನಾಲ್ಕು ಗಂಟೆ ಕಾಯಬೇಕಾಯಿತು. 3 ಗಂಟೆಗಳ ಕಾಲ ಪ್ರವಾಸಿ ಮಂದಿರದಲ್ಲಿ ಕಾದು ಸುಸ್ತಾಗಿದ್ದ ಯಡಿಯೂರಪ್ಪ, ನಂತರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ 45 ನಿಮಿಷ ಕಾಯಬೇಕಾಯಿತು. ಇದರಿಂದ ಸಿಡಿಮಿಡಿಗೊಂಡು ಅಧಿಕಾರಿಗಳ ಮೇಲೆ ಹರಿಹಾಯ್ದರು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮೇಲೆ ಕೋಪ ವ್ಯಕ್ತಪಡಿಸಿದರು.

Advertisement

ಪೂರ್ವ ನಿಗದಿತ ಕಾರ್ಯಕ್ರಮದಂತೆ ಸಿಎಂ ಯಡಿಯೂರಪ್ಪ, ಬೆಳಗ್ಗೆ 8.50ಕ್ಕೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್‌ ಪಟ್ಟಣಕ್ಕೆ ಚುನಾವಣಾ ಪ್ರಚಾರಕ್ಕೆ ತೆರಳಬೇಕಿತ್ತು. ಆದರೆ, ಪುಣೆಯಿಂದ ಬರಬೇಕಿದ್ದ ಹೆಲಿಕಾಪ್ಟರ್‌ 11 ಗಂಟೆಯಾದರೂ ಬರಲಿಲ್ಲ. ಹೆಲಿಕಾಪ್ಟರ್‌ ಬರುವ ಸೂಚನೆಯೇ ಕಾಣದಾದಾಗ ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡರು.

ಸಮನ್ವಯದ ಕೊರತೆಯಿಂದ ಮುಖ್ಯಮಂತ್ರಿಗಳು ಇರುಸು ಮುರುಸು ಅನುಭವಿಸಬೇಕಾಯಿತು. ಈಗಾಗಲೇ ಬಹಳ ತಡವಾಯಿತು. ಅಲ್ಲಿಗೆ ಬಂದು ಏನು ಮಾಡಲಿ. ಮೊದಲೇ ನನಗೆ ಆರೋಗ್ಯ ಸರಿಯಿಲ್ಲ. ಕಾರ್ಯಕ್ರಮ ಕ್ಯಾನ್ಸಲ್‌ ಮಾಡಿ. ನಾನು ಬೆಂಗಳೂರಿಗೆ ಮರಳಿ ಹೋಗುತೇ¤ನೆ ಎಂದರು. ಅಲ್ಲೇ ಇದ್ದ ಶಾಸಕ ಉಮೇಶ ಕತ್ತಿ ಹಾಗೂ ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಅವರನ್ನು ಬೆಂಗಳೂರಿಗೆ ಎಷ್ಟು ಗಂಟೆಗೆ ವಿಮಾನ ಇದೆ ಎಂದು ವಿಚಾರಿಸಿದರು.

ಇದರಿಂದ ಗೊಂದಲಕ್ಕೊಳಗಾದ ಸವದಿ, ದಯವಿಟ್ಟು ಕ್ಷಮಿಸಿ. ಇನ್ನು ಸ್ವಲ್ಪ ಹೊತ್ತಿನಲ್ಲಿ ಬೆಳಗಾವಿಗೆ ಹೆಲಿಕಾಪ್ಟರ್‌ ಬರಲಿದೆ ಎಂದು ಸಮಜಾ ಯಿಷಿ ನೀಡಿದರು. ಆಗ ಅಲ್ಲೇ ಇದ್ದ ತಮ್ಮ ಸಲಹೆ ಗಾರರ ಕಡೆಗೆ ತಿರುಗಿ ಸಿಎಂ ಹೆಲಿಕಾಪ್ಟರ್‌ ಬರುತ್ತಾ ಇಲ್ವಾ ಹೇಳಿಬಿಡಪ್ಪ ಎಂದು ಪ್ರಶ್ನಿಸಿದರು. ಬರುತ್ತೆ ಸರ್‌, ಖಾತ್ರಿಯಾಗಿದೆ ಎಂದು ಉತ್ತರ ನೀಡಿದರು. ಇದರಿಂದ ಬೇಸರಗೊಂಡ ಸಿಎಂ, “ನನಗೆ ಮೊದಲೇ ಆರೋಗ್ಯ ಸಮಸ್ಯೆ ಇದೆ. ಬಹಳ ತಡವಾದರೆ ಅಲ್ಲಿ ಹೋಗಿ ಏನು ಮಾಡಲಿ’ ಎಂದು ಹೇಳಿ ಮತ್ತೆ ಪ್ರವಾಸಿ ಮಂದಿರದೊಳಗೆ ವಿಶ್ರಾಂತಿಗೆ ತೆರಳಿದರು.

ಇದರಿಂದ ಅಲ್ಲಿ ಸೇರಿದ್ದ ಬಿಜೆಪಿ ಮುಖಂಡರು ಹಾಗೂ ಅಧಿಕಾರಿಗಳು ಮುಜುಗರ ಅನುಭವಿಸಬೇಕಾಯಿತು. ನಂತರ 11.50ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಿಎಂ ತೆರಳಿದರು. ಅಲ್ಲಿ ಸಹ 45 ನಿಮಿಷಗಳ ಕಾಲ ಕಾಯಬೇಕಾಯಿತು. ಹೆಲಿ ಕಾಪ್ಟರ್‌ನಲ್ಲಿ ಇಂಧನ ಖಾಲಿಯಾಗಿದ್ದರಿಂದ ವಿಳಂಬ ವಾಯಿತು. ಕೊನೆಗೆ, ಮಧ್ಯಾಹ್ನ 12.45ಕ್ಕೆ ವಿಮಾನ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೊರಟಾಗ ಬಿಜೆಪಿ ಮುಖಂಡರು ಹಾಗೂ ಅಧಿಕಾರಿಗಳು ನಿಟ್ಟುಸಿರು ಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next