Advertisement
ಮಲಪ್ಪುರ ಜಿಲ್ಲೆಯಲ್ಲಿ ಮೂವರಿಗೆ, ವಯನಾಡು, ಪಾಲಾ^ಟ್ ಜಿಲ್ಲೆಗಳಲ್ಲಿ ತಲಾ ಇಬ್ಬರಿಗೆ, ಕೋಟ್ಟಯಂ, ಕಣ್ಣೂರು ಮತ್ತು ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗಲಿದೆ. ಅವರಲ್ಲಿ ನಾಲ್ವರು ದಿನಗಳ ಹಿಂದೆ ವಿದೇಶದಿಂದ ಬಂದವರು. ಇಬ್ಬರು ಚೆನ್ನೈಯಿಂದ ಬಂದವರು. ನಾಲ್ವರಿಗೆ ಸಂಪರ್ಕದಿಂದ ಸೋಂಕು ಹರಡಿದೆ.
ವಯನಾಡು ಜಿಲ್ಲೆಯ ಇಬ್ಬರಿಗೆ ಚೆನ್ನೈಯಿಂದ ಬಂದ ಟ್ರಕ್ ಚಾಲಕನ ಸಂಪರ್ಕದಿಂದ ಸೋಂಕು ಬಾಧಿಸಿದೆ. ಮಲಪ್ಪುರ, ಕಣ್ಣೂರು ಜಿಲ್ಲೆಯ ತಲಾ ಒಬ್ಬರು ವಯನಾಡಿನಲ್ಲಿ ಸೇವೆಯಲ್ಲಿದ್ದ ಪೊಲೀ ಸರು. ಹೀಗೆ ಟ್ರಕ್ ಚಾಲಕನ ಮೂಲಕ ಒಟ್ಟು 10 ಮಂದಿಗೆ ಸೋಂಕು ಹರಡಿದೆ. ಲಾಕ್‌ಡೌನ್ ಉಲ್ಲಂಸಿದ ಆರೋಪ ದಲ್ಲಿ ಜಿಲ್ಲೆಯಲ್ಲಿ 12 ಪ್ರಕರಣಗಳನ್ನು ಪೊಲೀಸರು ದಾಖಲಿಸಿ ಕೊಂಡಿದ್ದಾರೆ. 19 ಮಂದಿಯನ್ನು ಬಂಧಿಸಿ, ಏಳು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.