Advertisement
ಚೀನದಲ್ಲಿ ಸಾಮೂಹಿಕವಾಗಿ ಜನ ಸಾಮಾನ್ಯರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಬ್ಬರು ಸೋಂಕಿಗೆ ಒಳಗಾದರೆ ಆ ಕಟ್ಟಡ, ಆಸುಪಾಸಿನಲ್ಲಿ ವಾಸಿಸುವ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಕಾರಣದಿಂದ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಕಂಡು ಬರುತ್ತಿವೆ. ಭಾರತದಲ್ಲಿ ಸದ್ಯ ಈ ಮಾದರಿಯ ಪರೀಕ್ಷಾ ಪದ್ಧತಿ ಇಲ್ಲ.
ಕೋವಿಡ್ ಸಂಬಂಧಿತ ಆಸ್ಪತ್ರೆ ದಾಖಲಾತಿ ವಿರಳವಾಗಿದ್ದು, ಮರಣವೂ ನಿಯಂತ್ರಣವಾಗಿದೆ. ಇಲ್ಲಿ ಯಾವುದೇ ನಿರ್ಬಂಧ ವಿಧಿಸುವುದಿಲ್ಲ. ತೀವ್ರ ಉಸಿರಾಟದ ಸಮಸ್ಯೆ (ಸಾರಿ), ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್ಐ) ರೋಗಿಗಳ ಮೇಲೆ ನಿಗಾ ಇಡಲಾಗಿದ್ದು, ಇಂತಹ ಮಾದರಿಯ ಪ್ರಕರಣಗಳೂ ಏರಿಕೆಯಾಗಿಲ್ಲ ಎಂದು ಹೇಳಿದ್ದಾರೆ.