Advertisement

Jagadish Shettar ಬಗ್ಗೆ ಹೆಚ್ಚು ಚರ್ಚಿಸುವ ಅವಶ್ಯವಿಲ್ಲ: ಸಚಿವ ಎಚ್‌.ಕೆ. ಪಾಟೀಲ

08:01 PM Jan 26, 2024 | Team Udayavani |

ಗದಗ: ಕಾಂಗ್ರೆಸ್‌ ಪಕ್ಷ ಎನ್ನುವುದು ಸಮುದ್ರ ಇದ್ದಂತೆ. ಶೆಟ್ಟರ್‌ ಬಂದಾಗ ಉಕ್ಕಲಿಲ್ಲ, ಹೋದಾಗ ಕಡಿಮೆಯಾಗಲ್ಲ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ನೂರಾರು ವರ್ಷಗಳ ಇತಿಹಾಸವಿದೆ. ತತ್ವ-ಸಿದ್ಧಾಂತ-ಜನಪರ ಕಾರ್ಯಕ್ರಮಗಳೇ ಕಾಂಗ್ರೆಸ್‌ ಸಂಘಟನೆ ಶಕ್ತಿಯಾಗಿದೆ. ಇದು ಕೇವಲ ಯಾರೊಬ್ಬರಿಂದ ಸಾಧ್ಯವಿಲ್ಲ. ನಮ್ಮದು ಕೋಟಿ ಕೋಟಿ ಕಾರ್ಯಕರ್ತರನ್ನು ಹೊಂದಿರುವ ಪಕ್ಷ. ಹಾಗಾಗಿ ಶೆಟ್ಟರ್‌ ಬಗ್ಗೆ ಹೆಚ್ಚು ಚರ್ಚಿಸುವುದು ಅವಶ್ಯವಿಲ್ಲ ಎಂದರು.

ಯಾರೋ ಒಬ್ಬರು ಹೋದರು ಅಂತಾ ಕಾಂಗ್ರೆಸ್‌ ಮೇಲೆ ಪರಿಣಾಮ ಬೀರಲ್ಲ. ಶೆಟ್ಟರ್‌ ಜೆಂಟಲ್‌ ಮ್ಯಾನ್ ಅಂತಾ ತಿಳಿದು ಸ್ವಾಗತಿಸಿದ್ದೆವು. ಅವರು ಸಿಎಂ ಆದವರು, ಅವರಿಗೆ ಎಂಎಲ್‌ಎ ಟಿಕೆಟ್‌ ಕೂಡ ನೀಡಲಾಗಿತ್ತು. ಅವರಿಗೆ ಸೋತಾಗ ಗೌರವಕ್ಕೆ ಚ್ಯುತಿ ಬರಬಾರದೆಂದು ಎಂಎಲ್‌ಸಿ ಕೂಡ ಮಾಡಲಾಗಿತ್ತು. ಅವರ ಜತೆಗೆ ನಮ್ಮ ಪಕ್ಷ ನಡೆದುಕೊಂಡ ರೀತಿ ಇದು. ಆದರೀಗ ಅವರೇ ಬಿಟ್ಟು ಹೋಗಿದ್ದಾರೆ, ಹೋಗಲಿ. ಕಾಂಗ್ರೆಸ್‌ಗೆ ಚಿಂತೆ ಮಾಡುವ ವಿಷಯ ಏನಿಲ್ಲ ಎಂದರು.

ಶೆಟ್ಟರ್‌ ಘರ್‌ವಾಪ್ಸಿಯಿಂದ ಲಿಂಗಾಯತ ಮತಗಳು ಮತ್ತೆ ಬಿಜೆಪಿ ಕಡೆಗೆ ಎಂಬ ವಿಶ್ಲೇಷಣೆ ಕುರಿತು ಮಾತನಾಡಿ, ಕೆಲ ಆಸಕ್ತ ವರ್ಗ ಮಾತ್ರ ಹೀಗೆ ಮಾತನಾಡುತ್ತದೆ ಅಷ್ಟೇ. ಯಾವುದೇ ವರ್ಗ-ಸಮೂಹ ಕಾಂಗ್ರೆಸ್‌ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ರಾಜ್ಯದ ಕೋಟ್ಯಂತರ ಬಡವರು ಒಟ್ಟಾಗಿ ಕಾಂಗ್ರೆಸ್‌ ಜತೆಗೆ ಬರುತ್ತಿದ್ದಾರೆ. ಈ ಕಾರಣಕ್ಕೆ ಹತಾಶರಾಗಿರುವ ರಾಜ್ಯ ಬಿಜೆಪಿ ಯಾರನ್ನಾದರೂ ಹಿಡಿದುಕೊಂಡು ಬಂದು ಪûಾಂತರ ಮಾಡಿಸುತ್ತಿದೆ. ಮೋದಿ ಅವರಿಗೆ ಸಾಧನೆ ಹೇಳ್ಳೋದಕ್ಕೆ ಏನೂ ಇಲ್ಲ. ಯುವಕರಿಗೆ ಉದ್ಯೋಗ ಕೊಡಲಿಲ್ಲ, ಜನ ಕಲ್ಯಾಣದ ಕೆಲಸ ಮಾಡಲಿಲ್ಲ. ಚುನಾವಣೆ ಬಂತಲ್ಲ ಎಂದು ಗಾಬರಿಯಾಗಿ ಅವರನ್ನ, ಇವರನ್ನ ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ಬಿಜೆಪಿ ಸೇರ್ಪಡೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕ ಸವದಿ ನಾನು ಅರಿತಿರುವಂತೆ ನಿಷ್ಠುರವಾದಿ, ಜಂಟಲ್‌ಮ್ಯಾನ್. ಯಾವುದೇ ಕೆಳಮಟ್ಟದ ಆಲೋಚನೆ ಕೂಡ ಮಾಡಲ್ಲ ಎನ್ನುವ ವಿಶ್ವಾಸವಿದೆ. ಪಕ್ಷ ಬಿಡುವ ಆಲೋಚನೆ ಮಾಡಲ್ಲ. ಅಷ್ಟೊಂದು ರಾಜಕೀಯ ಪ್ರಬುದ್ಧತೆ ಅವರಲ್ಲಿದೆ ಎಂದು ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬಸವಣ್ಣವರ ವಿಷಯದಲ್ಲಿ ನಮ್ಮ ಸರ್ಕಾರ ತೆಗೆದುಕೊಂಡ ನಿರ್ಣಯದ ಬಗ್ಗೆ ಅಂತಾರಾಷ್ಟ್ರೀಯ ಲಿಂಗಾಯತ ಸಮೂಹ ಅಭಿನಂದಿಸಿದೆ. ನಾಡಿನ ಹಲವಾರು ಮಠಾ ಧೀಶರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮಾಲೆ, ಶಾಲು ಹಾಕಿ ಸನ್ಮಾನಿಸುತ್ತಿದ್ದಾರೆ.
-ಎಚ್‌.ಕೆ. ಪಾಟೀಲ,
ಕಾನೂನು ಸಚಿವ

Advertisement

Udayavani is now on Telegram. Click here to join our channel and stay updated with the latest news.

Next