Advertisement

ಜೀವಂತ ಪ್ರಾಣಿ ಮಾರುಕಟ್ಟೆಗಳನ್ನು ಮುಚ್ಚಬೇಕಿಲ್ಲ : WHO

03:35 PM May 10, 2020 | sudhir |

ಲಂಡನ್‌ : ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕೋವಿಡ್‌-19 ವೈರಸ್‌ ವುಹಾನ್‌ ಪ್ರಯೋಗಾಲಯಲ್ಲಿ ಹುಟ್ಟಿದ್ದಲ್ಲ ಎಂದು ಕೋವಿಡ್‌-19 ತವರೂರಾದ ಚೀನ ಪರವಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ನೀಡಿತ್ತು.

Advertisement

ಇದೀಗ ಮತ್ತೆ ಚೀನವನ್ನು ವಹಿಸಿಕೊಂಡಿದ್ದು, ಜೀವಂತ ಪ್ರಾಣಿ ಮಾರುಕಟ್ಟೆಗಳನ್ನು ಮುಚ್ಚಬಾರದು ಎಂದಿದೆ. ವಿಶ್ವದೆಲ್ಲೆಡೆ ಸೋಂಕು ಹರಡಲು ವುಹಾನ್‌ನಲ್ಲಿರುವ ಜೀವಂತ ಪ್ರಾಣಿ ಮಾರುಕಟ್ಟೆಯೇ ಕಾರಣ ಎಂದು ಹೇಳಲಾಗುತ್ತಿದ್ದು, ಇಂತಹ ಮಾರುಕಟ್ಟೆಗಳನ್ನು ಮುಚ್ಚಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಆದರೆ ಈ ಘಟನೆಯ ನಡುವೆಯೂ ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ಜಾಗತಿಕವಾಗಿ ಇರುವ ಜೀವಂತ ಪ್ರಾಣಿ ಮಾರುಕಟ್ಟೆಗಳನ್ನು ಮುಚ್ಚಬೇಕಿಲ್ಲ ಎಂದಿದೆ.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವಸಂಸ್ಥೆಯ ಆಹಾರ ಸುರಕ್ಷತೆ ಮತ್ತು ಪ್ರಾಣಿ ರೋಗತಜ್ಞ ಪೀಟರ್‌ಬೆನ್‌ ಎಂಬಾರೆಕ್‌ ಅವರು ಮಾತನಾಡಿ, ಪರಿಸರ ವ್ಯವಸ್ಥೆಯಲ್ಲಿ ಆಹಾರ ಸುರಕ್ಷತೆ ಮತ್ತು ನಿರ್ವಹಣೆ ಸುಲಭದ ಕೆಲಸವಲ್ಲ. ಈ ಹಿನ್ನೆಲೆೆಯಲ್ಲಿ ಮಾರುಕಟ್ಟೆಯ ಒಳ ಪ್ರದೇಶದಲ್ಲಿ ಕೆಲವೊಮ್ಮೆ ಇಂತಹ ಅವಘಡಗಳು ನಡೆಯುವುದರಲ್ಲಿ ಯಾವುದೇ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ.

ಕೆಲವೊಂದು ಸಮಯದಲ್ಲಿ ಮಾನವರಿಗೆ ಸಾಂಕ್ರಮಿಕ ಹರಡಿದರೂ ಸಹ ಮಾರುಕಟ್ಟೆಗಳನ್ನು ಮುಚ್ಚುವ ಬದಲು ಅದರ ಆಡಳಿತ ಸಿಬ್ಬಂದಿ ಸುಧಾರಣಾ ಕ್ರಮಗಳ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ವುಹಾನ್‌ ಮಾರುಕಟ್ಟೆಯಿಂದಲೇ ಸೋಂಕು ಜಾಗತಿಕವಾಗಿ​ ಹರಡಿದೆ ಎಂಬುದಕ್ಕೆ ಇನ್ನು ಯಾವುದೇ ಪುರಾವೆ ದೊರೆತಿಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next