Advertisement
ಸರೂರು ಗ್ರಾಮದ ಗುರು ರೇವಣಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಡಾ|ಎಸ್.ರಾಧಾಕೃಷ್ಣನ್ ಜಯಂತಿ, ನಿವೃ ತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ನಡುವಿನಮನಿ, ಬಸಯ್ಯ ಹಿರೇಮಠ, ಕೆ.ಎಂ.ಇಬ್ರಾಹಿಂಪುರ, ಮುರುಗೇಶ ಹೊಕ್ರಾಣಿ, ಶಿವು ಬಿರಾದಾರ, ಕೆ.ಬಿ. ಸಜ್ಜನ, ಎಸ್.ಆರ್. ಸುಲ್ಪಿ, ಎನ್.ಎ. ತೊಂಡಿಹಾಳ, ಎಂ.ವೈ. ಗೌಂಡಿ, ಎಂ.ಎಸ್. ಬಿರಾದಾರ, ಬಿ.ಎಸ್. ಪಾಟೀಲ, ಟಿ.ಎಸ್. ಲಮಾಣಿ, ಅಶೋಕ ದಡ್ಡಿ ವೇದಿಕೆಯಲ್ಲಿದ್ದರು. ನಿವೃತ್ತ ಮುಖ್ಯಾಧ್ಯಾಪಕರಾದ ಅಶೋಕ ಮಣಿ, ಜಿ.ಎಸ್. ಅಥರ್ಗಾ, ಎಸ್.ಬಿ. ಕಿತ್ತೂರ, ಎಸ್.ಎ. ಹಾವರಗಿ, ವಿ.ಡಿ. ಐಹೊಳ್ಳಿ ಸೇರಿದಂತೆ ನಿವೃತ್ತ ಶಿಕ್ಷಕರನ್ನು, ದಾನಿಗಳನ್ನು ಸನ್ಮಾನಿಸಲಾಯಿತು.
ಸಂಗೀತ ಶಿಕ್ಷಕ ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿ ನಾಡಗೀತೆ ಹಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಂ. ಬೆಳಗಲ್ಲ ಸ್ವಾಗತಿಸಿದರು. ಸಿಆರ್‌ಪಿ ಟಿ.ಡಿ. ಲಮಾಣಿ ಮತ್ತು ಶಿಕ್ಷಕ ಸಿದ್ದನಗೌಡ ಬಿಜೂರ ನಿರೂಪಿಸಿದರು. ಕಾರ್ಯಕ್ರಮಕ್ಕೆ ಬರುವ ಶಿಕ್ಷಕರಿಗಾಗಿ ವಿವಿಧೆಡೆಯಿಂದ ಖಾಸಗಿ ಶಾಲೆಗಳ ಶಾಲಾ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಗ್ರಾಮದ ಪ್ರಮುಖ ರಸ್ತೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಕಾರ್ಯಕ್ರಮ ಸ್ಥಳದಲ್ಲಿ ಶಿಕ್ಷಕರು ಮತ್ತು ಶಿಕ್ಷಕ ವೃತ್ತಿಯ ಮಹತ್ವ ಸಾರುವ ಬರಹಗಳಿದ್ದ ಫಲಕಗಳನ್ನು ಪ್ರದರ್ಶಿಸಲಾಗಿತ್ತು.
ಕೆಲ ಶಾಲೆಗಳಿಗೆ ನೋಟಿಸ್: ಮುದ್ದೇಬಿಹಾಳ ಪಟ್ಟಣದ ಸಂತ ಕನಕದಾಸ ಸೇರಿದಂತೆ ಕೆಲ ಖಾಸಗಿ ಶಾಲೆಗಳು ಬಿಇಒ ಕಚೇರಿ ಆದೇಶ ಉಲ್ಲಂಘಿಸಿವೆ. ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಶಿಕ್ಷಕರನ್ನೂ ಕಳಿಸಿಲ್ಲ, ಶಾಲೆಗೆ ರಜೆಯನ್ನೂ ಕೊಟ್ಟಿಲ್ಲ. ಇಂಥ ಶಾಲೆಗಳ ಪಟ್ಟಿ ಮಾಡಿ ಆಯಾ ಶಾಲೆಗಳ ಮುಖ್ಯಾಧ್ಯಾಪಕರಿಗೆ ನೋಟಿಸ್ ಜಾರಿಗೊಳಸಲಾಗುತ್ತದೆ ಎಂದು ಬಿಇಒ ಎಸ್.ಡಿ. ಗಾಂಜಿ ತಿಳಿಸಿದ್ದಾರೆ.
ತಾಲೂಕಿನ ಹಲವು ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿವೆ. ಮಕ್ಕಳಿಗೆ ಮೂಲಸೌಕರ್ಯ ಕೊರತೆ ಇದೆ. ಇವೆಲ್ಲವುಗಳ ಪರಿಹಾರಕ್ಕೆ 12.74 ಕೋಟಿ ರೂ. ಮೊತ್ತದ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಬೇಡಿಕೆ ಮಂಡಿಸಿದ್ದು ಶಿಕ್ಷಣ ಸಚಿವರನ್ನೂ ಭೇಟಿ ಮಾಡಿ ಚರ್ಚಿಸಲಾಗಿದೆ. ಈ ಬಗ್ಗೆ ಇನ್ಸ್‌ಪೆಕ್ಷನ್ ನಡೆಸುವಂತೆ ಸಚಿವರಿಗೆ ಆಹ್ವಾನ ನೀಡಲಾಗಿದೆ. ಸಚಿವರು ಮುಂದಿನ ತಿಂಗಳು ಈ ತಾಲೂಕಿಗೆ ಬರುವ ನಿರೀಕ್ಷೆಯಿದೆ. ಎ.ಎಸ್. ಪಾಟೀಲ ನಡಹಳ್ಳಿ, ಶಾಸಕ