Advertisement

“ರಾಜ್ಯದಲ್ಲಿ ಆಷರೇಷನ್‌ ಕಮಲದ ಅಗತ್ಯವಿಲ್ಲ’

04:35 PM Jul 20, 2020 | Suhan S |

ಮುಂಬಯಿ, ಜು. 19: ರಾಜಸ್ಥಾನದ ರಾಜಕೀಯ ಬೆಳವಣಿಗೆಯ ಮಧ್ಯೆ, ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್‌ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಬೇಟಿ ಮಾಡಿದ್ದು ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

Advertisement

ರಾಜ್ಯದ ಸಕ್ಕರೆ ಕೈಗಾರಿಕೆಗಳಿಗೆ ಹಣಕಾಸಿನ ನೆರವು ಪಡೆಯುವ ಉದ್ದೇಶಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಫ‌ಡ್ನವೀಸ್‌ ಮಹಾರಾಷ್ಟ್ರದಲ್ಲಿ ಆಪರೇಷನ್‌ ಕಮಲದ ಅಗತ್ಯವಿಲ್ಲ. ಎಂವಿಎಂ ಸರಕಾರ ಒಳ ಜಗಳದಿಂದಲೇ ಕುಸಿಯಲಿದೆ ಎಂದು ಹೇಳಿದ್ದಾರೆ.

ರಾಜಕೀಯ ಚರ್ಚೆ ನಡೆದಿಲ್ಲ ನಾವು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಸಿದ್ಧರಿಲ್ಲ. ಕೋವಿಡ್‌-19 ವೈರಸ್‌ ವಿರುದ್ಧ ಹೋರಾಡುವ ಸಮಯ ಇದು. ಆಪರೇಷನ್‌ ಕಮಲ ಮಹಾರಾಷ್ಟ್ರದಲ್ಲಿ ಆಗುವುದಿಲ್ಲ. ರಾಜ್ಯ ರಾಜಕೀಯದಲ್ಲಿ ತನ್ನ ಪಾತ್ರದ ಬಗ್ಗೆ ನನಗೆ ಅರಿವಿದೆ. ನನಗೆ ರಾಜ್ಯದ ಅಭಿವೃದ್ಧಿ ಮುಖ್ಯ. ನಾನು ರಾಜ್ಯದ ಸಕ್ಕರೆ ಕೈಗಾರಿಕೆಗಳಿಗೆ ಹಣಕಾಸಿನ ನೆರವು ಪಡೆಯುವ ಮತ್ತು ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರು, ರೈತರೀಗೆ ವಿಶೇಷ ಫ್ಯಾಕೆಜ್‌ ನೀಡುವ ಸಲುವಾಗಿ ಶಾ ಮತ್ತು ಮೋದಿ ಅವರನ್ನು ಬೇಟಿಯಾದದ್ದು ಹೊರತು ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next