Advertisement

ಕೋವಿಡ್ ದಿಗ್ಬಂಧನ; ವಾಹನ ಉತ್ಪಾದನಾ ಕ್ಷೇತ್ರಕ್ಕೆ ದಿಗ್ಭ್ರಾಂತಿ: ಚಲಿಸುತ್ತಿಲ್ಲ ವಾಹನಗಳು

12:17 PM May 02, 2020 | mahesh |

ಕೋವಿಡ್ ಹೊಡೆತಕ್ಕೆ ನಲುಗದ ಉದ್ಯಮರಂಗ ಯಾವುದಿದೆ? ಮಾ.25ರಿಂದ ಇಲ್ಲಿಯವರೆಗೆ ದೇಶದ ವಾಹನ ತಯಾರಿಕಾ ಕ್ಷೇತ್ರ ತಣ್ಣಗಾಗಿರುವುದರಿಂದ ಆಗಿರುವ ನಷ್ಟ ಸಣ್ಣಪುಟ್ಟದ್ದಲ್ಲ. ಅದರ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

Advertisement

43 ದಿನದಿಂದ ಕಾರ್ಯಾಚರಣೆ ಇಲ್ಲ
ದೇಶದಲ್ಲಿ ದಿಗ್ಬಂಧನ ಜಾರಿಯಾಗಿದ್ದು ಮಾ.25ರಿಂದ. ಆದರೆ ಬಹುತೇಕ ವಾಹನ ತಯಾರಿಕಾ ಕಂಪನಿಗಳು ಮಾ.20ರಿಂದಲೇ ತಮ್ಮ ಘಟಕಗಳನ್ನು ಮುಚ್ಚಿದ್ದವು. ಮೇ
1ನೇ ತಾರೀಕು ಕಳೆಯುವಾಗ ಬಾಗಿಲು ಹಾಕಿ 43 ದಿನ ಕಳೆದಿದೆ.

1 ಲಕ್ಷ ಕೋಟಿ ರೂ. ನಷ್ಟ
ಯಾವುದೇ ಕೆಲಸವಿಲ್ಲದೇ ಸಂಪೂರ್ಣ ಬಾಗಿಲು ಹಾಕಿದ್ದರಿಂದ ವಾಹನ ತಯಾರಿಕಾ ಕ್ಷೇತ್ರಕ್ಕೆ 1 ಲಕ್ಷ ಕೋಟಿ ರೂ. ಆದಾಯ ನಷ್ಟವಾಗಿದೆ. ಇದು ದೇಶದ ಜಿಡಿಪಿಯಲ್ಲಿ ಶೇ.0.5ರಷ್ಟಾಗುತ್ತದೆ. ಇದರಿಂದ ಕೇಂದ್ರ, ರಾಜ್ಯಸರ್ಕಾರಗಳಿಗೆ ಭಾರೀ ಪ್ರಮಾಣದ ತೆರಿಗೆ ನಷ್ಟವಾಗಿದೆ.

ಸರಣಿ ಸಂಬಂಧ
ಮಾರುತಿ ಸುಜುಕಿ, ಹೀರೊ ಮೊಟೊ ಕಾರ್ಪ್‌, ಹ್ಯುಂಡಾಯ್‌ ಮೊಟಾರ್‌ಗೆ ಸರ್ಕಾರ ಉತ್ಪಾದನೆ ಪುನಾರಂಭಿಸಲು ಅವಕಾಶ ನೀಡಿದೆ. ಇದರಿಂದ ಈ ಕಂಪನಿಗಳಿಗೆ ಉಪಯೋಗವಿಲ್ಲ. ಶೋರೂಂಗಳನ್ನು ತೆರೆಯುವುದು, ಸೇವಾಕೇಂದ್ರಗಳನ್ನು ಆರಂಭಿಸುವುದು, ಬಿಡಿಭಾಗಗಳ ಉತ್ಪಾದನೆಗೆ ಅವಕಾಶ ನೀಡುವುದು ಹೀಗೆ…ಒಟ್ಟಾರೆ ವ್ಯವಸ್ಥೆ ಸಿದ್ಧವಾಗದಿದ್ದರೆ ಯಾವ ಪ್ರಯೋಜನವೂ ಇಲ್ಲವಾಗುತ್ತದೆ.

ಬಹುಮುಖಿ ಪರಿಣಾಮ
ವಾಹನ ಕ್ಷೇತ್ರ ಬಂದಾಗಿರುವುದು ಬಹುಮುಖಿ ಹೊಡೆತಕ್ಕೆ ಕಾರಣವಾಗುತ್ತದೆ. ಕೇಂದ್ರಕ್ಕೆ ಆದಾಯ ನಷ್ಟ, ಸ್ವತಃ ಉದ್ಯಮಕ್ಕೂ ನಷ್ಟ, ಸಾವಿರಾರು ಉದ್ಯೋಗಿಗಳಿಗೆ ಕೆಲಸ ಹೋಗುತ್ತದೆ, ವೇತನ ಕಡಿತವಾಗುತ್ತದೆ.

Advertisement

2,300 ಕೋ.ರೂ.
ಉದ್ಯಮ ಬಂದ್‌ ಆಗಿರುವುದರಿಂದ ಪ್ರತೀ ದಿನ ಆಗುತ್ತಿರುವ ನಷ್ಟದ ಪ್ರಮಾಣ.  28,000 ಕೋ.ರೂ. ಇದುವರೆಗೆ ಕೇಂದ್ರಸರ್ಕಾರಕ್ಕೆ ಜಿಎಸ್‌ಟಿ ಸಂಗ್ರಹದಲ್ಲಿ ಆಗಿರುವ ನಷ್ಟ.
14,000 ಕೋ.ರೂ. ರಾಜ್ಯಸರ್ಕಾರಗಳ ಪರೋಕ್ಷ ತೆರಿಗೆ ಸಂಗ್ರಹಕ್ಕೆ ಆಗಿರುವ ಹೊಡೆತ. 15 ಶೇ. ಕೇಂದ್ರ ಸಂಗ್ರಹಿಸುವ ಜಿಎಸ್‌ಟಿಯಲ್ಲಿ ವಾಹನ ತಯಾರಿಕಾ ಕ್ಷೇತ್ರದ ಪಾಲು.
50 ಶೇ. ಜೂನ್‌ ತ್ತೈಮಾಸಿಕ ಅವಧಿಯಲ್ಲಿ ಮಾರಾಟದಲ್ಲಿ ಆಗುವ ಕುಸಿತದ ಪ್ರಮಾಣ.

Advertisement

Udayavani is now on Telegram. Click here to join our channel and stay updated with the latest news.

Next