Advertisement

ಹುತಾತ್ಮರ ಕುಟುಂಬಕ್ಕೆ ಇನ್ನು ಏಕರೂಪದ ಪರಿಹಾರ ಮೊತ್ತ

11:54 PM Nov 23, 2021 | Team Udayavani |

ಹೊಸದಿಲ್ಲಿ: ಕಾರ್ಯಾಚರಣೆಯ ವೇಳೆ ಹುತಾತ್ಮರಾದ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ(ಸಿಎಪಿಎಫ್)ಯ ಯೋಧರ ಕುಟುಂ­ಬಕ್ಕೆ ನೀಡಲಾಗುವ ಆರ್ಥಿಕ ನೆರವಿನ ಮೊತ್ತ­ವನ್ನು ಹೆಚ್ಚಳ ಮಾಡುವ ಮಹತ್ವದ ನಿರ್ಧಾರ­ವನ್ನು ಕೇಂದ್ರ ಗೃಹ ಇಲಾಖೆ ಕೈಗೊಂಡಿದೆ.

Advertisement

ಹುತಾತ್ಮರಿಗೆ ಆರ್ಥಿಕ ನೆರವು ನೀಡುವ ವಿಚಾರದಲ್ಲಿ ಸೇನೆಯ ವಿವಿಧ ಪಡೆಗಳ ನಡುವೆ ಸಮಾನತೆಯ ಕೊರತೆಯಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕಾರ್ಯಾ­ಚರಣೆಯ ವೇಳೆ (ಎನ್‌ಕೌಂಟರ್‌, ಗುಂಡಿನ ಚಕಮಕಿ ಇತ್ಯಾದಿ) ಅಸುನೀಗಿದ ಎಲ್ಲ ಅರೆಸೇನಾಪಡೆಗಳ ಯೋಧರ ಕುಟುಂಬಗ­ಳಿಗೂ ತಲಾ 35 ಲಕ್ಷ ರೂ.ಗಳನ್ನು ಹಂತ ಹಂತ­ವಾಗಿ ನೀಡಲು ನಿರ್ಧರಿಸಲಾಗಿದೆ.

2021ರ ನವೆಂಬರ್‌ 1ರಿಂದಲೇ ಈ ನೆರವು ಅನ್ವಯ­ವಾಗಲಿದೆ. ಬೇರೆ ಕಾರಣಗಳಿಂದ ಅಸುನೀಗಿದ ಯೋಧರ ಕುಟುಂಬಕ್ಕೆ ನೀಡಲಾಗುವ ಪರಿಹಾರ ಮೊತ್ತದಲ್ಲಿ ಯಾವುದೇ ಬದಲಾ­ವಣೆ ಆಗಿಲ್ಲ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಇದನ್ನೂ ಓದಿ:ಬೆಂಗಳೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ: ಡಿಕೆಶಿ

Advertisement

ಪರಿಹಾರ ಮೊತ್ತದಲ್ಲಿನ ವ್ಯತ್ಯಾಸಗಳ ಬಗ್ಗೆ ಹುತಾತ್ಮರ ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರಕಾರವು ಎಲ್ಲರಿಗೂ ಏಕರೂಪದ ಮೊತ್ತವನ್ನು ಪರಿಹಾ­ರದ ರೂಪದಲ್ಲಿ ನೀಡುವ ನಿರ್ಧಾರ ಕೈಗೊಂ­ಡಿದೆ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆ ಎಲ್ಲ ಅರೆಸೇನಾಪಡೆಗಳ ರಿಸ್ಕ್ ಫಂಡ್ ಮೊತ್ತವು ಭಿನ್ನ ಭಿನ್ನವಾಗಿತ್ತು. ಸಿಆರ್‌ಪಿಎಫ್ ನಲ್ಲಿ ಈ ಮೊತ್ತವನ್ನು 21.5 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಅದೇ ರೀತಿ, ಸಿಐಎಸ್‌ಎಫ್ ಹುತಾತ್ಮರ ಕುಟುಂ­ಬಕ್ಕೆ ನೀಡುವ ಪರಿಹಾರ ಮೊತ್ತವನ್ನು 15 ಲಕ್ಷ ರೂ.ಗೆ, ಐಟಿಬಿಪಿ ಯೋಧರಿಗೆ 25 ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು.

ಒಟ್ಟಿನಲ್ಲಿ ಕಳೆದ 6 ವರ್ಷಗಳಲ್ಲಿ ಆರ್ಥಿಕ ನೆರವಿನ ಮೊತ್ತವನ್ನು ಶೇ.75ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next