Advertisement

RTO: ಇನ್ನು ಡ್ರೈವಿಂಗ್‌ ಲೈಸೆನ್ಸ್‌ ಟೆಸ್ಟ್‌ಗಾಗಿ ಆರ್‌ಟಿಒ ಕಚೇರಿಗೆ ಹೋಗ್ಬೇಕಿಲ್ಲ!

08:55 PM May 21, 2024 | Team Udayavani |

ನವದೆಹಲಿ: ಇನ್ನು ಮುಂದೆ ಚಾಲನಾ ಪರವಾನಗಿ (ಡ್ರೈವಿಂಗ್‌ ಲೈಸೆನ್ಸ್‌) ಪಡೆಯಲು ಜನರು ಸರ್ಕಾರಿ ಪ್ರಾದೇಶಿಕ ಸಾರಿಗೆ ಕೇಂದ್ರ (ಆರ್‌ಟಿಒ) ಗಳಿಗೆ ಹೋಗಿ ಪರೀಕ್ಷೆ ನೀಡಬೇಕಾದ ಅಗತ್ಯವಿಲ್ಲ. ಈ ಸಂಬಂಧ ಹೊಸ ನಿಯಮಗಳು ಜೂನ್‌ 1ರಿಂದ ಜಾರಿಯಾಗಲಿವೆ.

Advertisement

ಹೊಸ ನಿಯಮಗಳ ಪ್ರಕಾರ, ಆರ್‌ಟಿಒಗಳ ಬದಲಿಗೆ ಅಧಿಕೃತ ಖಾಸಗಿ ಚಾಲನಾ ತರಬೇತಿ ಕೇಂದ್ರಗಳೇ ಚಾಲನೆಯ ಪರೀಕ್ಷೆ ನಡೆಸಿ, ಪರವಾನಗಿ ಅರ್ಹತಾ ಪ್ರಮಾಣ ಪತ್ರಗಳನ್ನು ನೀಡಲಿವೆ.

ಚಾಲನಾ ಪರವಾನಗಿ ಮಾತ್ರವಲ್ಲದೇ ಇನ್ನೂ ಅನೇಕ ನಿಯಮಗಳು ಜೂ.1ರಿಂದ ಜಾರಿಯಾಗಲಿವೆ. ಹೊಸ ಲೈಸೆನ್ಸ್‌ ಪಡೆಯಲು ಬೇಕಾದ  ಪ್ರಕ್ರಿಯೆಗಳನ್ನು ಸರ್ಕಾರ ಮತ್ತಷ್ಟು ಸರಳಗೊಳಿಸಿದೆ. ಈ ಮೂಲಕ ಆರ್‌ಟಿಒಗಳಿಗೆ ಭೌತಿಕವಾಗಿ ಭೇಟಿ ನೀಡುವುದನ್ನು ಕಡಿಮೆ ಮಾಡಲಿದೆ.

ಚಾಲನಾ ಪರವಾನಗಿ ಅರ್ಹತಾ ಪ್ರಮಾಣಪತ್ರಗಳನ್ನು ಒದಗಿಸಲಿರುವ ಸಂಸ್ಥೆಗಳಿಗೆ ನಿಯಮಗಳನ್ನು ರೂಪಿಸಲಾಗಿದೆ. ಡ್ರೈವಿಂಗ್‌ ಟ್ರೈನಿಂಗ್‌ ಸೆಂಟರ್‌ಗಳು ಕನಿಷ್ಠ 1 ಎಕರೆ ಭೂಮಿ ಹೊಂದಿರಬೇಕಾಗುತ್ತದೆ. ಸೂಕ್ತ ಟೆಸ್ಟಿಂಗ್‌ ಸೌಲಭ್ಯಗಳನ್ನು ಒದಗಿಸಬೇಕು. ಡ್ರೈವಿಂಗ್‌ ತರಬೇತಿ ನೀಡುವವರು ಕನಿಷ್ಠ 5 ವರ್ಷ ಅನುಭವದ ಜತೆಗೆ ಹೈಸ್ಕೂಲ್‌, ಡಿಪ್ಲೋಮಾ ಶೈಕ್ಷಣಿಕ ಅರ್ಹತೆ ಹೊಂದಿರಬೇಕು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ. ಲಘು ಮೋಟಾರ್‌ ವಾಹನ ಚಾಲನೆಗಾಗಿ ವಾರದಲ್ಲಿ 29 ಗಂಟೆ ಮತ್ತು ಭಾರ ಮೋಟಾರ ವಾಹನ ಚಾಲನೆಗಾಗಿ ವಾರದಲ್ಲಿ 38 ಗಂಟೆಗಳ ಕಾಲ ತರಬೇತಿಯನ್ನು ನೀಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next