Advertisement
ಮುಂಬಯಿಯಲ್ಲಿ ನಡೆದ ಮೂರು ದಿನಗಳ ದ್ವೆ„ಮಾಸಿಕ ವಿತ್ತೀಯ ನೀತಿ ಪರಿಶೀಲನ ಸಭೆಯ ಮುಕ್ತಾಯದ ಬಳಿಕ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಮಾಹಿತಿ ನೀಡಿದ್ದಾರೆ. ಇದರ ಜತೆಗೆ ಪ್ರಸಕ್ತ ವಿತ್ತೀಯ ವಿರ್ಷದಲ್ಲಿ 3ನೇ ಬಾರಿಗೆ ರೆಪೋ ದರವನ್ನು ಯಥಾ ಸ್ಥಿತಿಯಲ್ಲಿ ಇರಿಸಲು ಕೂಡ ತೀರ್ಮಾನಿಸಲಾಗಿದೆ.
ಮಾಹಿತಿ ನೀಡದೆ ಇರುವ ಅಂಶ ಪರಿಹರಿಸಲು ಸೂಕ್ತ ಕಾರ್ಯಸೂಚಿ ಹೊಂದಲು ತೀರ್ಮಾನಿಸಲಾಗಿದೆ. ಜತೆಗೆ ಸಾಲ ಪಡೆದುಕೊಂಡವರ ಅನುಕೂಲಕ್ಕಾಗಿ ಫಿಕ್ಸೆಡ್ ಬಡ್ಡಿದರ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಬಡ್ಡಿದರ ಮತ್ತು ಇಎಂಐ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಫಿಕ್ಸೆಡ್ ಬಡ್ಡಿದರಕ್ಕೆ ಬದಲಾಯಿಸಿಕೊಳ್ಳುವ ಬಗ್ಗೆ, ಶೀಘ್ರ ಸಾಲ ಮುಗಿಸುವ ಬಗ್ಗೆ, ಗ್ರಾಹಕರಿಗೆ ವಿಧಿಸಲಾಗಿರುವ ಎಲ್ಲ ರೀತಿಯ ಶುಲ್ಕಗಳ ಬಗ್ಗೆ ಪಾರದರ್ಶಕ ಮಾಹಿತಿ ನೀಡಬೇಕು ಎಂದು ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.
Related Articles
ಯುಪಿಐ ಲೈಟ್ ಮೂಲಕ ಆಫ್ಲೈನ್ ಆಗಿ ಮಾಡಬಹುದಾದ ಕನಿಷ್ಠ ಪಾವತಿ ಮಿತಿಯನ್ನು 200 ರೂ.ಗಳಿಂದ 500 ರೂ.ಗಳಿಗೆ ಹೆಚ್ಚಿಸಲಾಗಿದೆ. ಗರಿಷ್ಠ ಮಿತಿಯನ್ನು 2 ಸಾವಿರ ರೂ.ಗಳಿಗೆ ಏರಿಸಲಾಗಿದೆ. ಇದು ಸಣ್ಣ ಪ್ರಮಾಣದಲ್ಲಿ ಪಾವತಿ ಮಾಡುವವರಿಗೆ ಅನುಕೂಲ ಮಾಡಿಕೊಡಲಿದೆ. ಇದರಿಂದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಉಂಟಾಗುವ ಸಾಧ್ಯತೆಗಳು ಇವೆ. ಹಲವು ಕಾಲದಿಂದ ಕನಿಷ್ಠ ಮಿತಿ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಈಗ ಈಡೇರಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
Advertisement
ಇದೇ ವೇಳೆ ದೇಶದ ಆರ್ಥಿಕ ಅಭಿವೃದ್ಧಿಯ ದರವನ್ನು ಪ್ರಸಕ್ತ ವಿತ್ತೀಯ ವರ್ಷಕ್ಕೆ ಸಂಬಂಧಿಸಿ ಶೇ. 6.5 ಎಂದು ಆರ್‌ಬಿಐ ನಿಗದಿ ಮಾಡಿದೆ.