Advertisement

ಸಂಸತ್‌ ಕ್ಯಾಂಟೀನ್‌ನಲ್ಲಿನ್ನು ಕೇವಲ ವೆಜ್‌ ಊಟ!

09:16 AM Jan 16, 2020 | Hari Prasad |

ಹೊಸದಿಲ್ಲಿ: ಸಂಸತ್‌ ಕಟ್ಟಡದಲ್ಲಿರುವ ಐದು ಕ್ಯಾಂಟೀನುಗಳಲ್ಲಿ ಈವರೆಗೆ ಸಿಗುತ್ತಿದ್ದ ಮಾಂಸಾಹಾರದ ಊಟಕ್ಕೆ ಬ್ರೇಕ್‌ ಬೀಳಲಿದ್ದು, ಕೆಲವೇ ದಿನಗಳಲ್ಲಿ ಅಲ್ಲಿ ಕೇವಲ ಸಸ್ಯಾಹಾರ ಊಟ ಮಾತ್ರ ಸಿಗುವ ಸಾಧ್ಯತೆಗಳು ದಟ್ಟವಾಗಿದೆ. ಕ್ಯಾಂಟೀನ್‌ಗಳ ಕೇಟರಿಂಗ್‌ ಸೇವೆಯ ಉಸ್ತುವಾರಿ ಐಆರ್‌ಸಿಟಿಸಿ (ರೈಲ್ವೆ ಇಲಾಖೆಯ ಅಂಗ ಸಂಸ್ಥೆ) ಕಡೆಯಿಂದ ಹಲ್ದಿರಾಮ್ಸ್‌ ಅಥವಾ ಬಿಕಾನೇರ್‌ವಾಲಾ ಸಂಸ್ಥೆಯ ಪಾಲಾಗುತ್ತಿರುವುದೇ ಇದಕ್ಕೆ ಕಾರಣ.

Advertisement

ಸಂಸತ್ತಿನ ಐದೂ ಕ್ಯಾಂಟೀನ್‌ಗಳಲ್ಲಿ ಕೇಟರಿಂಗ್‌ ಸೇವೆ ನೀಡಲು ಕರೆಯಲಾಗಿದ್ದ ಟೆಂಡರ್‌ನ ಅಂತಿಮ ಸುತ್ತಿನಲ್ಲಿ ಸಿಹಿ ಹಾಗೂ ಕುರುಕಲು ತಿಂಡಿಗಳ ತಯಾರಕಾ ಸಂಸ್ಥೆಗಳಾದ ಹಲ್ದಿರಾಮ್ಸ್‌ ಹಾಗೂ ಬಿಕಾನೇರ್‌ವಾಲಾ ಕಂಪನಿಗಳು ಇವೆ.

ಇವೆರಡೂ ಸಂಸ್ಥೆಗಳು ಕೇವಲ ಸಸ್ಯಾಹಾರವನ್ನಷ್ಟೇ ಪೂರೈಸುತ್ತವಾದ್ದರಿಂದ ಇವುಗಳಲ್ಲಿ ಯಾವ ಸಂಸ್ಥೆಗೆ ಕೇಟರಿಂಗ್‌ ಅವಕಾಶ ಸಿಕ್ಕಿದರೂ ಸಂಸತ್ತಿನ ಕ್ಯಾಂಟೀನ್‌ಗಳಲ್ಲಿ ಸಸ್ಯಾಹಾರ ಮಾತ್ರ ಸಿಗುವುದು ಪಕ್ಕಾ. ಆದರೆ, ಇವರಲ್ಲಿ ಯಾರಿಗೆ ಕೇಟರಿಂಗ್‌ ಸಿಗಲಿದೆ ಎಂಬುದು ಮುಂಬರುವ ಬಜೆಟ್‌ ಅಧಿವೇಶನದ ವೇಳೆ ಸಂಸತ್ತಿನ ವ್ಯವಹಾರ ಸಲಹಾ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next