Advertisement

ಯಾವುದೇ ಮಠ-ಮಂದಿರ ಸರ್ಕಾರದ ವಶಕ್ಕಿಲ್ಲ: ಪೂಜಾರಿ

11:07 PM Feb 26, 2020 | Team Udayavani |

ದಾವಣಗೆರೆ: ರಾಜ್ಯದ ಯಾವುದೇ ಮಠ-ಮಂದಿರಗಳನ್ನು ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ವ್ಯಾಪ್ತಿಗೆ ಪಡೆಯುವ ಚಿಂತನೆ ಇಲ್ಲ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ರಾಜ್ಯದಲ್ಲಿರುವ ದೇವಸ್ಥಾನಗಳನ್ನು ಎ, ಬಿ, ಸಿ ಎಂದು ವರ್ಗೀಕರಿಸಿ ಅನುದಾನ ಕ್ರೋಢೀಕರಿಸಿ ಅಭಿವೃದ್ಧಿಗೆ ಗಮನ ನೀಡಲಾಗುವುದು.

Advertisement

ಯಾವುದೇ ಮಠ-ಮಂದಿರವನ್ನು ಸರ್ಕಾರ ಪಡೆಯುವುದಿಲ್ಲ. ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಅರ್ಚಕರ ನೇಮಕದ ಬಗ್ಗೆ ಯಾವುದೇ ಚರ್ಚೆ ಮಾಡುವುದಿಲ್ಲ. ಅನೇಕ ದೇವಾಲಯಗಳು ಪರಂಪರೆ, ಕಟ್ಟುಪಾಡುಗಳಿಂದ ನಡೆಯುತ್ತಿವೆ. ಹೀಗಾಗಿ, ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಬಂದಾಗ, ಯಾವುದಾದರೂ ಗೊಂದಲದ ವಾತಾವರಣ ಏರ್ಪಟ್ಟಾಗ ಮಾತ್ರ ಸರ್ಕಾರ ಮಧ್ಯ ಪ್ರವೇಶ ಮಾಡುತ್ತದೆ ಎಂದರು.

ಮೀನು ಮಾರಾಟ ಮಹಿಳೆಯರಿಗೆ ಶೇ.50 ವಾಹನ ಸಬ್ಸಿಡಿ: ಕರಾವಳಿ ಮತ್ತು ಒಳನಾಡು ಪ್ರದೇಶದಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಶೇ.50ರಷ್ಟು ಸಹಾಯಧನದಲ್ಲಿ ದ್ವಿಚಕ್ರ ವಾಹನ ಸೌಲಭ್ಯ ಒದಗಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಕರಾ ವಳಿ ಮತ್ತು ಒಳನಾಡು ಪ್ರದೇಶದಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮೀನು ಮಾರಾಟ ಮಾಡುತ್ತಾರೆ. ಶೇ.50ರಷ್ಟು ಸಹಾಯಧನದಲ್ಲಿ 1 ಸಾವಿರ ದ್ವಿಚಕ್ರ ವಾಹನ ಒದಗಿಸುವ ಪ್ರಸ್ತಾವನೆ ಇದೆ.

ಮತ್ಸದರ್ಶಿನಿ ಮೂಲಕ ಉತ್ತಮ ಗುಣಮಟ್ಟದ ಮೀನಿನ ಖಾದ್ಯಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಆಂಧ್ರಪ್ರದೇಶ ಸಮುದ್ರ ಕಿನಾರೆಯಿಂದ ಕೆಲವಾರು ಮೀನು ಗಳನ್ನು ರಾಜ್ಯಕ್ಕೆ ತರಿಸಿಕೊಳ್ಳಲಾಗುತ್ತಿದೆ. ಆ ಮೀನುಗಳನ್ನು ರಾಜ್ಯದಲ್ಲೇ ಉತ್ಪಾದನೆ ಮಾಡುವ ಯೋಜನೆ ಇದೆ. ಮೀನುಗಾರ ರಿಗೆ ಹರಿಗೋಲು, ಬಲೆ, ಮೀನು ಶೇಖರ ಣೆಗೆ ಶೀತಲೀಕರಣ ಘಟಕ, ಮಾರುಕಟ್ಟೆ, ಮಾರಾಟ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next