Advertisement

ಅಲ್ಪಸಂಖ್ಯಾತರಿಗಿಲ್ಲ ರಕ್ಷಣೆ: ವರ್ತೂರು

02:22 PM Nov 28, 2017 | |

ಮುದ್ದೇಬಿಹಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಿಪ್ಪು ಜಯಂತಿ ಬೇಕು. ಆದರೆ ಮೆರವಣಿಗೆ ಬೇಡ ಎಂದರೆ
ಹೇಗೆ? ಇದಕ್ಕಾಗಿ ಅವರು ತಲೆತಗ್ಗಿಸಬೇಕು. ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅಹಿಂದ
ಮುಖಂಡ, ಮಾಜಿ ಸಚಿವ, ಕೋಲಾರ ಶಾಸಕ ವರ್ತೂರು ಪ್ರಕಾಶ ಕಿಡಿಕಾರಿದರು.

Advertisement

ಇಲ್ಲಿನ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ ತಾಲೂಕು ಕುರುಬರ ಸಂಘ, ಅಹಿಂದ ಸಂಘಟನೆ ನೇತೃತ್ವದಲ್ಲಿ ಅಹಿಂದ ಸ್ವಾಭಿಮಾನಿ ಸಮಾವೇಶ, ಸಂತಕ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕುರುಬ ಸಮಾಜದ ನಾಯಕ ಸಿದ್ದರಾಮಯ್ಯ ಸಿಎಂ ಆಗುವ ಕನಸು ಕಂಡವರಲ್ಲಿ ನಾನೂ ಒಬ್ಬ. ಸಿದ್ದರಾಮಯ್ಯ
ಮುಖ್ಯಮಂತ್ರಿಯಾಗಲು ಕುರುಬ, ಅಹಿಂದ ಸಮಾಜ ಬಳಸಿಕೊಂಡು ಅಧಿಕಾರ ಸಿಕ್ಕ ಮೇಲೆ ಅವರನ್ನೆಲ್ಲಾ
ಕಡೆಗಣಿಸಿದ್ದಾರೆ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಪ್ರತಿನಿಧಿಸುವ ಕಾಂಗ್ರೆಸ್‌ ಪಕ್ಷಕ್ಕೆ ಪರ್ಯಾಯವಾಗಿ ಕುರುಬರ, ಅಹಿಂದ ವರ್ಗದ ನಾಯಕರನ್ನು ಒಗ್ಗೂಡಿಸಿ ನಮ್ಮ ಕಾಂಗ್ರೆಸ್‌ ಹೆಸರಿನ ನೂತನ ಪಕ್ಷ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಡಿ. 19ರಂದು ಬಾಗಲಕೋಟೆ ಜಿಲ್ಲೆ ಕೂಡಲ ಸಂಗಮದಲ್ಲಿ 5 ಲಕ್ಷ ಜನ ಸೇರಿಸಿ ಪಕ್ಷ ಉದ್ಘಾಟಿಸುತ್ತೇನೆ. 50-60 ಕ್ಷೇತ್ರಗಳಲ್ಲಿ ಅಹಿಂದ ವರ್ಗದವರಿಗೆ ಟಿಕೆಟ್‌ ಕೊಡುತ್ತೇನೆ. 2018ರ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ಹೆಚ್ಚು ಗೆಲ್ಲುತ್ತಾರೆ ಎಂದು ಘೋಷಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎಚ್‌.ಹಾಲಣ್ಣವರ ಮಾತನಾಡಿ, ಟಿಪ್ಪು ಜಯಂತಿ
ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್‌ಎಸ್‌ ಎಸ್‌, ಬಜರಂಗದಳದವರಿಗೆ ಹೆದರಿದರು. ಅವರು ಅಹಿಂದ
ಮರೆತಿದ್ದಾರೆ ಎಂದು ಟೀಕಿಸಿದರು. ಅಹಿಂದ ಸಂಘಟನೆ ತಾಲೂಕು ಅಧ್ಯಕ್ಷ ಕೃಷ್ಣಾ ಬಿಳೇಭಾವಿ, ದಲಿತ ಮುಖಂಡರಾದ
ಡಿ.ಬಿ. ಮುದೂರ, ಸಿ.ಜಿ. ವಿಜಯಕರ್‌, ಹರೀಶ ನಾಟಿಕಾರ, ಮಲಕೇಂದ್ರಗೌಡ ಪಾಟೀಲ ಮಾತನಾಡಿದರು. ತುಮಕೂರಿನ ನಿಕಿತ್‌ಕುಮಾರ್‌, ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ರಾಜ್ಯಾಧ್ಯಕ್ಷ ಹಾಸಿಂಪೀರ ವಾಲಿಕಾರ ಉಪನ್ಯಾಸ ನೀಡಿದರು. ಮಲ್ಲಾಲಿಂಗ ಶ್ರೀ, ಅಗತೀರ್ಥ ಸರೂರಿನ ಗುರು ಶ್ರೀ ಆಶೀರ್ವಚನ ನೀಡಿದರು.

Advertisement

ಮಾಜಿ ಶಾಸಕ ಎಂ.ಎಂ. ಸಜ್ಜನ, ಪ್ರಮುಖರಾದ ಡಾ| ಸಿ.ಎಚ್‌. ನಾಗರಬೆಟ್ಟ, ರಸೂಲ ದೇಸಾಯಿ, ನಿಂಗಪ್ಪಗೌಡ ಬಪ್ಪರಗಿ, ಬಿ.ಕೆ. ಬಿರಾದಾರ, ಮಲ್ಲಿಕಾರ್ಜುನ ಮದರಿ, ಚಿದಾನಂದ ಸೀತಿಮನಿ, ಸಾಯಬಣ್ಣ ಆಲ್ಯಾಳ, ಬಿ.ಜಿ.ಜಗ್ಗಲ್‌, ಎಸ್‌.ಟಿ.ಗೌಡರ, ಮೈಬೂಬ ಕುಂಟೋಜಿ, ಅಲ್ಲಾಭಕ್ಷ ನಮಾಜಕಟ್ಟಿ, ಪರಶುರಾಮ ನಾಲತವಾಡ, ಶೇಖು
ಅಂಬಿಗೇರ, ಬಸವರಾಜ ಗುಳಬಾಳ, ಮಲ್ಲು ಅಪರಾ, ಅಲ್ಲಅಭಕ್ಷ ಢವಳಗಿ, ರಕ್ಷಕ ಜಾನ್ವೇಕರ್‌, ಎಂ.ಎಸ್‌.
ಅಮಲ್ಯಾಳ, ಎಸ್‌.ಬಿ.ಬಾಚಿಹಾಳ, ಎಚ್‌.ವೈ.ಪಾಟೀಲ, ಎನ್‌.ಆರ್‌.ಮೊಕಾಶಿ, ಎಂ.ಆರ್‌.ಮುಲ್ಲಾ, ಅಶೋಕ ಇರಕಲ್ಲ,
ಮುತ್ತಣ್ಣ ಹುಂಡೇಕಾರ ವೇದಿಕೆಯಲ್ಲಿದ್ದರು. ಇದೇ ವೇಳೆ 15ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಎಸ್‌.ಕೆ.ಹರನಾಳ ಸ್ವಾಗತಿಸಿದರು. ಜಿ.ಎನ್‌.ಹೂಗಾರ, ಟಿ.ಡಿ.ಲಮಾಣಿ, ಎಂ.ಎ.ತಳ್ಳಿಕೇರಿ ನಿರೂಪಿಸಿದರು. ವಕೀಲ
ಎಸ್‌.ಎಸ್‌.ಬಿರಾದಾರ ವಂದಿಸಿದರು. 

ಅದ್ದೂರಿ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಬನಶಂಕರಿ ದೇವಸ್ಥಾನದಿಂದ ಸಂತ ಕನಕದಾಸರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next