Advertisement

ಕುಮಟಳ್ಳಿಗೆ ತಪ್ಪಿದ ಸಚಿವ ಸ್ಥಾನ; ಸಮಾಜಕ್ಕೆ ತಪ್ಪು ಸಂದೇಶ ರವಾನೆ ಎಂದ ಪಂಚಮಸಾಲಿ ಜಗದ್ಗುರು 

10:06 AM Feb 07, 2020 | keerthan |

ಬಾಗಲಕೋಟೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣರಾದವರಲ್ಲಿ ಒಬ್ಬರಾದ ನಮ್ಮ ಸಮಾಜದ ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ಇಡೀ ರಾಜ್ಯದ ಪಂಚಮಸಾಲಿ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಗೆದ್ದಿರುವ 10 ಜನ  ಶಾಸಕರಿಗೆ ಸಚಿವ ಸ್ಥಾನ ನೀಡಿ, ಕುಮಟಳ್ಳಿ ಒಬ್ಬರನ್ನೇ ಕೈ ಬಿಟ್ಟಿರುವುದು ಸರಿಯಲ್ಲ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಕುಮಟಳ್ಳಿ ಅವರು ಆರಂಭದಲ್ಲಿ ರಮೇಶ ಜಾರಕಿಹೋಳಿ ಅವರೊಂದಿಗೆ ಇದ್ದವರು. ನ್ಯಾಯ, ವಿಶ್ವಾಸ, ನಂಬಿಕೆ, ಸೈದ್ಧಾಂತಿಕ ರಾಜಕಾರಣ ಇರಬೇಕು ಎಂಬುದು ನಮ್ಮ ಬೇಡಿಕೆ. ಯಡಿಯೂರಪ್ಪ ಅವರು ಹೈಕಮಾಂಡ್ ಒತ್ತಡದಿಂದ ಕೈಬಿಟ್ಟಿದ್ದಾರೆ. ಆದರೆ ಆರಂಭದಲ್ಲೇ ಬಂದಿರುವ ಕುಮಟಳ್ಳಿ ಅವರನ್ನು ಕೈ ಬಿಡುತ್ತಿರುವುದು ಸರಿಯಲ್ಲ ಎಂದರು.

ಮುಖ್ಯಮಂತ್ರಿಗಳು ತಪ್ಪು ಸರಿಪಡಿಸಿಕೊಂಡು, ಕುಮಟಳ್ಳಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಪಂಚಮಸಾಲಿ ಸಮಾಜದ ಬಗ್ಗೆ ಯಾಕೆ ಕಾಳಜಿ ವಹಿಸುತ್ತಿಲ್ಲ ಎಂಬುದು ಬೇಸರ ತರಿಸಿದೆ. ಸರ್ಕಾರ ನಡೆಯಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next