Advertisement

ಹಾಲಿನ ದರ ಕಡಿತ ಮಾಡಿಲ್ಲ: ಕಾಶಂಪೂರ್‌

06:40 AM Jun 12, 2018 | |

ಬೆಂಗಳೂರು: ರೈತರಿಗೆ ಸರ್ಕಾರ ನೀಡುವ ಹಾಲಿನ ಪ್ರೋತ್ಸಾಹ ಧನ ಕಡಿಮೆ ಮಾಡಿಲ್ಲ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್‌ ಹೇಳಿದ್ದಾರೆ.

Advertisement

ಸಚಿವರಾಗಿ ಮೊದಲ ದಿನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರತಿ ಲೀಟರ್‌ಗೆ ಐದು ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಅದರಲ್ಲಿ ಯಾವುದೇ ಕಡಿತ ಮಾಡಿಲ್ಲ. ಹಾಲು ಒಕ್ಕೂಟಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುತ್ತಿರುವ ಹಿನ್ನೆಲೆಯಲ್ಲಿ ದರ ಕಡಿತ ಮಾಡುತ್ತಿವೆ.

ಆದರೆ, ಬಹುತೇಕ ಹಾಲು ಒಕ್ಕೂಟಗಳು ದರ ಕಡಿಮೆ ಮಾಡಿಲ್ಲ ಎಂದು ಹೇಳಿದರು.ನಮ್ಮದು ರೈತರ ಪರ ಸರ್ಕಾರವಾಗಿದ್ದು, ಕೆಎಂಎಫ್ ಉತ್ತಮ ಕೆಲಸ ಮಾಡುತ್ತಿದೆ. ಕುಮಾರಸ್ವಾಮಿ ಮತ್ತು ದೇವೇಗೌಡರು ಜನಪರವಾಗಿ ಕೆಲಸ ಮಾಡುವ ಸಹಕಾರ ಖಾತೆ ನೀಡಿದ್ದಾರೆ. ಸರ್ಕಾರ ಈಗಾಗಲೇ ರೈತರ ಸಾಲ ಮನ್ನಾ ಮಾಡುವ ತೀರ್ಮಾನ ಮಾಡಿದೆ. 

ಹಿಂದಿನ ಸರ್ಕಾರ ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಪಡೆದಿದ್ದ 50 ಸಾವಿರವರೆಗಿನ ಸಾಲ ಮನ್ನಾ ಮಾಡಿದೆ. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆನ್ನುವುದು ನಮ್ಮ ಸರ್ಕಾರದ ನಿಲುವಾಗಿದೆ. ಅಲ್ಲದೇ ಹಿಂದಿನ ಸರ್ಕಾರದ
ಸಾಲ ಮನ್ನಾ ಬಾಕಿ 3 ಸಾವಿರ ಕೋಟಿ ಇದೆ.

ಎಲ್ಲ ಸಾಧಕ ಬಾಧಕಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದ್ದು, ಶೀಘ್ರವೇ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ ಎಂದು ಹೇಳಿದರು.

Advertisement

ಸಹಕಾರ ಕ್ಷೇತ್ರದ ಮೂಲಕ ರೈತರಿಗೆ ಹೇಗೆ ಕೆಲಸ ಮಾಡಬಹುದು ಎನ್ನುವುದನ್ನು ಇಸ್ರೇಲಿಗೆ ಹೋದಾಗ ನೋಡಿ ಬಂದಿದ್ದೇನೆ. ಎಪಿಎಂಸಿ ಮೂಲಕ ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಡಬೇಕಿದೆ. ಮಹಾರಾಷ್ಟ್ರ ಮತ್ತು
ಗುಜರಾತ್‌ನಲ್ಲಿ ಸಹಕಾರ ಕ್ಷೇತ್ರ ಸಾಕಷ್ಟು ಬೆಳೆದಿದೆ. ರೈತರಿಗೆ ಬೆಂಬಲ ಬೆಲೆ ಮತ್ತು ಉತ್ಪನ್ನ ಸಂಗ್ರಹಣೆಗೆ ಗೋದಾಮು ಸಿದ್ದಪಡಿಸಬೇಕಿದೆ ಎಂದು ಹೇಳಿದರು.

ಜಿ.ಟಿ. ದೇವೇಗೌಡರಿಗೆ ಖಾತೆ ಬಗ್ಗೆ ಅಸಮಾಧಾನ ಇರುವ ಬಗ್ಗೆ ಪ್ರತಿಕ್ರಿ ಯಿಸಿರುವ ಅವರು ಯಾರಿಗೆ ಯಾವ ಖಾತೆ
ನೀಡಬೇಕೆಂದು ಪಕ್ಷ ತೀರ್ಮಾನ ಮಾಡಿದೆ.ನಾನು ಬಯಸದೇ ಸಹಕಾರ ಖಾತೆ ನೀಡಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next