Advertisement

ಒಂದು ಹೊತ್ತಿನ ಊಟಕ್ಕೂ ಹೆಣಗಾಡುತ್ತಿರುವ 600ಕ್ಕೂ ಹೆಚ್ಚು ಕೂಲಿ ಕಾರ್ಮಿಕರು

07:35 PM Apr 12, 2020 | mahesh |

ಮುಂಬಯಿ: ಘಾಟ್‌ಕೋಪರ್‌ ಪೂರ್ವದ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಒ) ಹಿಂಭಾಗದಲ್ಲಿರುವ ಕೊಳೆಗೇರಿ ಪ್ರದೇಶದ ಸುಮಾರು 600 ದೈನಂದಿನ ಕೂಲಿ ಕಾರ್ಮಿಕರು ಲಾಕ್‌ಡೌನ್‌ ಘೋಷಿಸಿದಾಗಿನಿಂದ ದಿನಕ್ಕೆ ಒಂದು ಹೊತ್ತಿನ ಊಟವನ್ನು ಸಹ ಪಡೆಯಲು ಹೆಣಗಾಡುತ್ತಿದ್ದಾರೆ. ಸ್ಥಳೀಯ ಶಾಸಕರ ಆಶ್ವಾಸನೆಗಳ ಹೊರತಾಗಿಯೂ ಕಾರ್ಮಿಕರು ಯಾವುದೇ ಸರಿಯಾದ ಆಹಾರ ಧಾನ್ಯಗಳನ್ನು ಹೊಂದಿರದ ಕಾರಣ ಸರಿಯಾಗಿ ಊಟ ಮಾಡದೆ ಎರಡು ವಾರಗಳಿಗಿಂತ ಹೆಚ್ಚು ಸಮಯವಾಗಿದೆ ಎಂದು ಕಾರ್ಮಿಕರು ಹೇಳುತ್ತಾರೆ.

Advertisement

ಪ್ರದೇಶದ ಸಾಮಾಜಿಕ ಕಾರ್ಯಕರ್ತೆ ರಜಿಯಾ ಅಖಾಡೆ ಅವರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕರ ಗಮನ ಸೆಳೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಗತ್ಯವಿರುವ ಜನರ ಪಟ್ಟಿಯನ್ನು ಶಾಸಕರ ಕಚೇರಿಗೆ ಕಳುಹಿಸಲು ನಮ್ಮನ್ನು ಕೇಳಲಾಯಿತು. ಪಟ್ಟಿಯನ್ನು ಕಳುಹಿಸಿದರೂ ಯಾವುದೇ ಪರಿಹಾರ ನಮಗೆ ತಲುಪಿಲ್ಲ. ಇತರ ಪ್ರದೇಶಗಳ ಜನರು ನಮ್ಮ ಕೋಟಾದಿಂದ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದಾರೆಂದು ನಾನು ತಿಳಿದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ದೈನಂದಿನ ಕೂಲಿ ಕಾರ್ಮಿಕ 37 ವರ್ಷದ ಅಹ್ಮದ್‌ ಹುಸೈನ್‌ ಅವರು ಮಾತನಾಡಿ ನಮ್ಮ ಪರಿಸ್ಥಿತಿ ಕಠಿಣವಾಗಿದೆ. ನಾವು ಬೆಳಗ್ಗೆ ಆಹಾರವನ್ನು ಪಡೆದರೆ ಮಧ್ಯಾಹ್ನ ಅಥವಾ ಸಂಜೆ ನಮಗೆ ಏನಾದರೂ ತಿನ್ನಲು ಸಿಗಬಹುದೆ ಎಂದು ನಮಗೆ ಖಚಿತವಿಲ್ಲ. ನನ್ನ ಕುಟುಂಬದಲ್ಲಿ ಐದು ಜನ ಸದಸ್ಯರಿದ್ದಾರೆ. ಎಲ್ಲರೂ ನನ್ನ ಮೇಲೆ ಅವಲಂಬಿತರಾಗಿದ್ದಾರೆ. ನಮ್ಮಲ್ಲಿ ಪಡಿತರ ಸಂಗ್ರಹವು ಮುಗಿದಿದೆ. ಮುಂದೆ ನಾವು ಹೇಗೆ ಬದುಕುಳಿಯುತ್ತೇವೆ ಎಂದು ನನಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ. ಕೆಲವರು ನಮ್ಮ ಸ್ಥಳದಿಂದ ಒಂದು ಅಥವಾ ಎರಡು ಕಿಲೋಮೀಟರ್‌ ದೂರದಲ್ಲಿ ಆಹಾರದೊಂದಿಗೆ ಬರುತ್ತಾರೆ. ಆದರೆ ಪೊಲೀಸರು ನಮ್ಮ ಪ್ರದೇಶದಿಂದ ಹೊರಗೆ ಹೋಗಲು ಅನುಮತಿ ನೀಡುವುದಿಲ್ಲ ಎಂದು ಅವರು ಹೇಳಿದರು.

ಆ ಪ್ರದೇಶದ ಇನ್ನೊಬ್ಬ ನಿವಾಸಿ ಮಂದಾ ಯೆಡೆ, ನಾನು ರಸ್ತೆ ಮತ್ತು ಕಸದ ರಾಶಿಯಿಂದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸು ಕಾರ್ಯದಲ್ಲಿ ತೊಡಗಿದ್ದೆನ್ನೆ. ನನ್ನ ಜೀವನೋಪಾಯವು ಅದರ ಮೇಲೆ ಅವಲಂಬಿತವಾಗಿದೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಅವರು ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್‌ಡೌನ್‌ ಆದಾಗಿನಿಂದ ನಾವೆಲ್ಲರೂ ಮನೆಯಲ್ಲಿ ಕುಳಿತಿದ್ದೇವೆ. ಅವರ ನಿಯಮಗಳನ್ನು ಅನುಸರಿಸಿ ಮತ್ತು ಎಲ್ಲಿಯೂ ಹೋಗದೆ ನಾವು ಸರ್ಕಾರದೊಂದಿಗೆ ಸಹಕರಿಸುತ್ತಿದ್ದೇವೆ, ಆದರೆ ಬದುಕಲು ನಮಗೆ ಆಹಾರ ಬೇಕು ಎಂದು ತಿಳಿಸಿದ್ದಾರೆ.

ಮಧ್ಯಾಹ್ನ ಸ್ಥಳೀಯ ಬಿಜೆಪಿ ಶಾಸಕ ಪರಾಗ್‌ ಷಾ ಅವರನ್ನು ಸಂಪರ್ಕಿಸಿದಾಗ, ನಾವು ಪ್ರತಿ ಮನೆಯನ್ನೂ ತಲುಪಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಾನು ಈಗಾಗಲೇ ಕೊಳೆಗೇರಿ ಪ್ರದೇಶಗಳಲ್ಲಿ 12,000 ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದ್ದೇವೆ.ಒಂದು ಲಕ್ಷಕ್ಕೂ ಹೆಚ್ಚು ಜನರು ಅಲ್ಲಿ ವಾಸಿಸುತ್ತಿರುವುದರಿಂದ ಕೊಳೆಗೇರಿ ಜನಸಂಖ್ಯೆ ತುಂಬಾ ದೊಡ್ಡದಾಗಿದೆ. ಆದ್ದರಿಂದ ಎಲ್ಲರಿಗೂ ತಲುಪುವುದು ಕಷ್ಟ. ಆದರೆ ರಾಜ್ಯ ಸರ್ಕಾರದ ಪರಿಹಾರ ಶೀಘ್ರದಲ್ಲೇ ಜನರನ್ನು ತಲುಪಲಿದೆ ಎಂದು ನನಗೆ ಖಾತ್ರಿಯಿದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next