ಯಾದಗಿರಿ: ಪಕ್ಷಕ್ಕೆ ಅದರದ್ದೇ ಆದ ನೀತಿ, ಚೌಕಟ್ಟಿದೆ. ಎಷ್ಟೇ ದೊಡ್ಡ ವ್ಯಕ್ತಿ ಆದರೂ ಅವರು ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತ. ಬಿ ಫಾರ್ಮ್ ಪಡೆದ ಮೇಲೆ ಪಕ್ಷದ ನೀತಿ ನಿಯಮದ ಒಳಗೆ ಮಾತಾಡಬೇಕು. ವ್ಯತ್ಯಾಸ ಆದರೆ ಮೇಲಿನಿಂದ ವಿವರಣೆ ಕೇಳೋದು ಸಹಜ. ವಿವರಣೆ ಕೇಳಿದ್ದಾರೆ. ಹಾಗಾಗಿ ವಿವರಣೆ ಕೊಡಬೇಕಾದದ್ದು ಎಲ್ಲರ ಜವಾಬ್ದಾರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಯಾದಗಿರಿ ನಗರದ ಸರ್ಕಿಟ್ ಹೌಸ್ ನಲ್ಲಿ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದಿಂದ ನೀಡಿದ ಶೋಕಾಸ್ ನೋಟಿಸ್ ಗೆ ಉತ್ತರ ನೀಡದ ಹಿನ್ನಲೆಯಲ್ಲಿ ಮಾತನಾಡಿದರು.
ನಾನು ರಾಜ್ಯದ್ಯಕ್ಷ. ಆದರೆ ನನ್ನಿಂದ ತಪ್ಪು ನಡೆದರೆ ವಿವರಣೆ ಕೇಳಿದಾಗ ವಿವರಣೆ ಕೊಡೋದು ನನ್ನ ಜವಾಬ್ದಾರಿ. ವ್ಯತ್ಯಾಸ ಇದ್ದರೆ ಹಿರಿಯರ ಜೊತೆ ಮಾತಾಡೋಣ ಅದರಲ್ಲಿ ಏನು ತಪ್ಪಿದೆ. ವಿವರಣೆ ಕೇಳಿದ ಉತ್ತರ ಕೊಡೋದು ಜವಾಬ್ದಾರಿಯಾಗುತ್ತದೆ. ಉತ್ತರ ಕೊಡದೆ ಹೊದರೆ ಅದು ಅಹಂಕಾರವಾಗುತ್ತದೆ ಎಂದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಯಡಿಯೂರಪ್ಪ ಹಾಗೂ ಕಟೀಲ್ ಬೆಂಬಲಿಗರ ಕಿತ್ತಾಟ ವಿಚಾರದಲ್ಲಿ ಮಾತನಾಡಿದ ಅವರು, ‘’ಈ ತರಹದ ಯಾವುದೆ ಘಟನೆಗಳು ನಡೆದಿಲ್ಲ. ಇದೆಲ್ಲ ಸೋಷಿಯಲ್ ಮಿಡಿಯಾದಲ್ಲಿ ಆದಂತ ತಪ್ಪು ಕಲ್ಪನೆಗಳು. ನನ್ನ ಮತ್ತು ಯಡಿಯೂರಪ್ಪ ಮಧ್ಯೆ ಸಣ್ಣ ವ್ಯತ್ಯಾಸ ಕೂಡಾ ಇಲ್ಲ. ನಾನು ಎಲ್ಲಾ ಮಾಹಿತಿಯನ್ನ ಯಡಿಯೂರಪ್ಪ ಮುಖಾಂತರ ತಿಳಿದುಕೊಳ್ಳುತ್ತಿದ್ದೆನೆ, ಈ ರಾಜ್ಯದ ಮಾರ್ಗದರ್ಶಕರೂ ಹಾಗೂ ರಾಜ್ಯದ ಸುಪ್ರೀಂ ಅವರೇ. ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೆನೆ ಎಂದರು.