Advertisement
ವಿದೇಶಗಳಿಂದ ವಿಮಾನದಲ್ಲಿ ಆಗಮಿಸಿದ ಬಳಿಕ ಆರ್‌ಟಿಪಿಸಿಆರ್ ಮಾದರಿ ಪರೀಕ್ಷೆ ಮಾಡಿಸಿಕೊಂಡ ಬಳಿಕವೇ ನಿಲ್ದಾಣದಿಂದ ಹೊರಡಬೇಕು. ಫಲಿತಾಂಶ ಬರುವವರೆಗೆ ಗೃಹ ನಿಗಾವಣೆಯಲ್ಲಿರಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಕೈಗಳ ನೈರ್ಮಲ್ಯ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ವೇಳೆ ಜ್ವರ, ಕೆಮ್ಮು, ನೆಗಡಿ, ದೇಹ ನೋವು, ತಲೆ ನೋವು, ರುಚಿ ಮತ್ತು ವಾಸನೆ ಇಲ್ಲದಿರುವುದು, ಉಸಿರಾಟದ ತೊಂದರೆ ಇತ್ಯಾದಿ ಲಕ್ಷಣ ಕಂಡುಬಂದಲ್ಲಿ ತತ್‌ಕ್ಷಣ ಸ್ಥಳೀಯ ಕಣ್ಗಾವಲು/ಆರೋಗ್ಯ ತಂಡಕ್ಕೆ ವರದಿ ಮಾಡಬೇಕು. ನಿರ್ವಹಣೆ ಮತ್ತು ಚಿಕಿತ್ಸೆಗಾಗಿ ವೈದ್ಯಕೀಯ ಸೌಲಭ್ಯ ಗುರುತಿಸಿಕೊಂಡಿರುವ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕು. ಆರ್‌ಟಿಪಿಸಿಆರ್ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಆಗಿದ್ದಲ್ಲಿ ಮಾದರಿಯನ್ನು ಡಬ್ಲೂ$Âಜಿಎಸ್ ಕಳುಹಿಸಲಾಗುತ್ತದೆ. ವರದಿಯಲ್ಲಿ ಬಿಎಫ್7 ಅಥವಾ ಹೊಸ ಉಪ ರೂಪಾಂತರ ಬಂದರೆ ಮತ್ತೂಂದು ಆರ್‌ಟಿಪಿಸಿಆರ್ ಮಾದರಿ ಪರೀಕ್ಷೆ ಮಾಡಬೇಕು. ಅದರ ಫಲಿತಾಂಶಗಳು ತಿಳಿಯುವವರೆಗೂ ಅಂತಹ ವ್ಯಕ್ತಿಯು ಕೋವಿಡ್ ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ಈಗಾಗಲೇ ನಿಗದಿಪಡಿಸಿದಂತೆ ಕೋವಿಡ್- 19 ಪರೀಕ್ಷೆಯ ದಿನದ ಗುರಿ ಸಾಧಿಸುವುದು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಪ್ರತಿದಿನ ಆದರ ನಿಗಾ ವಹಿಸಬೇಕು. ಪೂರೈಕೆಗಳಿಗೆ ಅನುಗುಣವಾಗಿ ಬೂಸ್ಟರ್ ಡೋನ್ ಲಸಿಕೆಗೆ ವೇಗ ನೀಡಬೇಕು ಎಂದು ತಿಳಿಸಿದ್ದಾರೆ.
Related Articles
ಹೊಸ ವರ್ಷದ ಹಿಂದಿನ ದಿನ (ಡಿ. 31) ಮತ್ತು ಹೊಸ ವರ್ಷಕ್ಕೆ (ಜ. 1) ಸಂಬಂಧಿಸಿದ ಎಲ್ಲ ಆಚರಣೆಗಳನ್ನು ಮಧ್ಯರಾತ್ರಿ 1 ಗಂಟೆಯೊಳಗೆ ಪೂರ್ಣಗೊಳಿಸಬೇಕು. ದೊಡ್ಡ ಮಟ್ಟದ ಸಭೆ ಸಮಾರಂಭಗಳನ್ನು ಕಡ್ಡಾಯವಾಗಿ ಹೊರಾಂಗಣದಲ್ಲಿ ಮಾಡಬೇಕು. ಸಾಧ್ಯವಾದಷ್ಟು ಹಗಲಿನಲ್ಲಿ ಆಯೋಜಿಸಿ, ತಡರಾತ್ರಿ ಮತ್ತು ಮುಂಜಾನೆಯ ಶೀತಗಾಳಿಯನ್ನು ತಪ್ಪಿಸಬೇಕು.
Advertisement
ಹೊಟೇಲ್‌ಗಳಂತಹ ಒಳಾಂಗಣ ಪ್ರದೇಶಗಳು (ಆಸನಗಳು), ಪಬ್‌ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು, ರೆಸಾರ್ಟ್‌ಗಳು ಇತ್ಯಾದಿಗಳಲ್ಲಿ ನಿಗದಿಪಡಿಸಿದ ಸಾಮರ್ಥ್ಯವನ್ನು ಮೀರಬಾರದು. 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಅಸ್ವಸ್ಥರು, ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರು ಅಂತ ಸಭೆಗಳನ್ನು ತಪ್ಪಿಸುವುದು ಸೂಕ್ತ. ಆಯೋಜಕರು, ವ್ಯವಸ್ಥಾಪಕರು ಮತ್ತು ಸಿಬಂದಿ ಆದ್ಯತೆ ಮೇಲೆ ಬೂಸ್ಟರ್ ಲಸಿಕೆ ಪಡೆಯಬೇಕು ಎಂದು ಹೇಳಿದ್ದಾರೆ.
ಪ್ರವೇಶ ದ್ವಾರದಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರವೇಶದ್ವಾರರ ಸಂಖ್ಯೆಯನ್ನು ಹೆಚ್ಚಿಸಬೇಕು. ಒಳಾಂಗಣ ಪ್ರದೇಶಗಳಲ್ಲಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಬೇಕು. “ನೋ ಮಾಸ್ಕ್ ನೋ ಎಂಟ್ರಿ’ ಎಂಬ ಫಲಕವನ್ನು ಪ್ರದರ್ಶಿಸುವುದು. ಎಲ್ಲರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಬೇಕು (ಜ್ವರ 100.5 ಡಿಗ್ರಿ ಫ್ಯಾರನ್ ಹೀಟ್, 38 ಡಿಗ್ರಿ ಸೆಲ್ಸಿಯಸ್) ಜ್ವರ ಅಥವಾ ಕೆಮ್ಮು ಇತ್ಯಾದಿ ಉಸಿರಾಟದ ಲಕ್ಷಣ ಹೊಂದಿರುವವರು ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಬೇಕು. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಎನ್-95 ಫೇಸ್ ಮಾಸ್ಕ್ ಧರಿಸಬೇಕು. ಪ್ರವೇಶ ಸಿಬಂದಿ ಕಡ್ಡಾಯವಾಗಿ ಖಚಿತ ಪಡಿಸಿಕೊಳ್ಳಬೇಕು ಎಂದಿದ್ದಾರೆ.