Advertisement

“ಸೆಪ್ಟಂಬರ್‌ವರೆಗೆ ಲೋಕಲ್‌ ರೈಲು ಸೇವೆ ಬೇಡ’

05:28 PM Jul 27, 2020 | Suhan S |

ಮುಂಬಯಿ, ಜು. 26: ರಾಜ್ಯದಲ್ಲಿ ಕೋವಿಡ್ ಪ್ರಕೋಪ ಇನ್ನೂ ಹತೋಟಿಗೆ ಬರದಿರುವ ಹಿನ್ನೆಲೆ, ಸಾರ್ವಜನಿಕರಿಗೆ ಲೋಕಲ್‌ ರೈಲು ಸೇವೆಗಳನ್ನು ಸೆಪ್ಟಂಬರ್‌ವರೆಗೆ ಪುನರಾರಂಭಿಸಬಾರದು ಎಂದು ತಜ್ಞರು ಸೂಚಿಸಿದ್ದಾರೆ.

Advertisement

ಈ ಕುರಿತು ಮಾತನಾಡಿದ ರೈಲ್ವೇ ಹಿರಿಯ ಅಧಿಕಾರಿಯೊಬ್ಬರು, ಪ್ರಯಾಣಿಕರು ಲೋಕಲ್‌ ರೈಲುಗಳನ್ನು ಬಳಸಲು ಹೆಚ್ಚು ಸಮಯ ಕಾಯಬೇಕಾಗುತ್ತದೆ. ನಗರದಲ್ಲಿ ಸಾರ್ವಜನಿಕರಿಗಾಗಿ ಸ್ಥಳೀಯ ರೈಲು ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನಗರದಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿವೆ, ಆದರೆ ರೈಲು ಸೇವೆಗಳನ್ನು ಪುನರಾರಂಭಿಸುವ ಮೊದಲು ಮುಂಬಯಿಯ ಹೊರಗಿನ ಇತರ ಪ್ರದೇಶಗಳ ಪರಿಸ್ಥಿತಿಯೂ ಸ್ಥಿರವಾಗಬೇಕು ಎಂದು ಹೇಳಿದ್ದಾರೆ.

ಎಸಿ ಅಲ್ಲದ ರೈಲಿನಲ್ಲಿ ತಾಜಾ ಗಾಳಿ ಪ್ರಸರಣ ಅಧಿಕವಾಗಿರುತ್ತದೆ. ಆದ್ದರಿಂದ ವೈರಸ್‌ ಹರಡುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಸ್ಥಳೀಯ ರೈಲು ವಿಭಾಗಗಳ ಒಳಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ರೈಲ್ವೇಗಳು ರೈಲು ಸೇವೆಗಳನ್ನು ಸೆಪ್ಟಂಬರ್‌ವರೆಗೆ ಪುನರಾರಂಭಿಸಬಾರದು ಎಂದು ಮಾಜಿ ರೈಲ್ವೇ ಮಂಡಳಿ ಸದಸ್ಯ ಮತ್ತು ಕೇಂದ್ರ ರೈಲ್ವೇಯ ಮಾಜಿ ಜನರಲ್‌ ಮ್ಯಾನೇಜರ್‌ ಸುಬೋಧ್‌ ಜೈನ್‌ ಹೇಳಿದ್ದಾರೆ.

ಕಂಪಾರ್ಟ್‌ಮೆಂಟ್‌ಗಳ ಒಳಗೆ ವಾರಕ್ಕೆ ಒಬ್ಬ ವ್ಯಕ್ತಿಗೆ ಅವಕಾಶ ನೀಡುವ ಆಯ್ಕೆಯನ್ನು ರೈಲ್ವೇ ಅನ್ವೇಷಿಸಬಹುದು ಎಂದು ಸಾರಿಗೆ ತಜ್ಞರು ಸೂಚಿಸಿದ್ದಾರೆ. ರೈಲ್ವೇ ಪಾಸ್‌ ಹೊಂದಿರುವವರು ವಾರಕ್ಕೊಮ್ಮೆ ಮಾತ್ರ ಪ್ರಯಾಣಿಸಲು ಅವಕಾಶ ನೀಡುವ ಆಯ್ಕೆಯನ್ನು ರೈಲ್ವೇ ಬಳಸಬಹುದು. ಈ ರೀತಿಯಾಗಿ ಜನರು ತಮ್ಮ ಕೆಲಸಗಳನ್ನು ಪೂರ್ಣಗೊಳಿಸಬಹುದು. ಬೊರಿ ವಲಿ ಮತ್ತು ವಿರಾರ್‌ ನಡುವೆ ಸೇವೆಗಳೂ ಇರಬೇಕು ಎಂದು ಸಾರಿಗೆ ತಜ್ಞ ಎ. ವಿ. ಶೆನಾಯ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next