Advertisement

ಚಿಕ್ಕಬಳ್ಳಾಪುರದ ಸೀಲ್ ಡೌನ್ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್

11:37 AM May 04, 2020 | keerthan |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮದ್ಯ‌ ಮಾರಾಟಕ್ಕೆ ಸರ್ಕಾರ ಆದೇಶಿಸಿ‌ದ್ದರು, ಜಿಲ್ಲೆಯ ಕೆಲವು ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಜಿಲ್ಲಾಡಳಿತ ಬೇಕ್ ಹಾಕಿದೆ.

Advertisement

ಹೌದು, ಜಿಲ್ಲೆಯ‌ ಕೊವಿಡ್-19 ಸೋಂಕಿತರು ಕಾಣಸಿಕೊಂಡಿರುವ ಗೌರಿಬಿದನೂರು, ಚಿಕ್ಕಬಳ್ಳಾಪುರ ನಗರದಲ್ಲಿ ಮದ್ಯ ಮಾರಾಟಕ್ಕೆ ಸಿದ್ದತೆ ನಡೆಸಿದ್ದ ಅಬಕಾರಿ‌ ಅಧಿಕಾರಿಗಳು, ಸೋಮವಾರ ಬೆಳಗ್ಗೆ ಮದ್ಯ ಮಾರಾಟ ಮಾಡದಂತೆ ಗೌರಿಬಿದನೂರು, ಚಿಕ್ಕಬಳ್ಳಾಪುರ ನಗರದ ಎಂಎಸ್ಐಎಲ್ ಮಳಿಗೆ ಮಾಲೀಕರಿಗೆ ಸೂಚಿಸಿದ್ದಾರೆ. ಹೀಗಾಗಿ ಮದ್ಯ‌ ಸಿಗುವ ಉತ್ಸಾಹದಲ್ಲಿದ್ದ ಮದ್ಯ ಪ್ರಿಯರಿಗೆ ಭಾರೀ‌ ನಿರಾಸೆ ಮೂಡಿದೆ.

ಜಿಲ್ಲೆಯಲ್ಲಿ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ಹೊರತುಪಡಿಸಿ ಉಳಿದ ಕಡೆಗೆ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. ಹೀಗಾಗಿ ಗೌರಿಬಿದನೂರು ಹಾಗೂ‌‌‌ ಚಿಕ್ಕಬಳ್ಳಾಪುರ ನಗರದ ಮದ್ಯ ಪ್ರಿಯರು ಬೇರೆ‌ ತಾಲೂಕುಗಳ ಕಡೆಗೆ‌ ಮುಖ ಮಾಡಬೇಕಿದೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ಮದ್ಯ ಮಾರಾಟಕ್ಕೆ ತಡೆ ನೀಡಲಾಗಿದೆಯೆಂದು ಅಬಕಾರಿ‌ ಆಯುಕ್ತ ನರೇಂದ್ರ ಕುಮಾರ್ ಉದಯವಾಣಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next