ನವದೆಹಲಿ : ಕಾನೂನು ಜಾರಿ ಸಂಸ್ಥೆಗಳು ದೇಶದಾದ್ಯಂತ ತೀವ್ರಗಾಮಿ ಸಂಘಟನೆ ಮತ್ತು ಅದರ ಅಂಗಸಂಸ್ಥೆಗಳ ಮೇಲೆ ದಾಳಿಯನ್ನು ಮುಂದುವರೆಸಿರುವ ಬೆನ್ನಲ್ಲೇ , ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಡುವೆ ಯಾವುದೇ ಸಂಬಂಧವಿಲ್ಲ ಎಂದು ಚುನಾವಣಾ ಆಯೋಗ ಕಂಡುಹಿಡಿದಿದೆ.
ಇದನ್ನೂ ಓದಿ: ಆಪ್ ನಿಂದ ದೆಹಲಿಯಾದ್ಯಂತ ಕಸದಿಂದ ಮಾಡಿದ ರಾವಣನ ಪ್ರತಿಕೃತಿಗಳ ದಹನ
ಸೆಪ್ಟಂಬರ್ 28 ರಂದು ಕೇಂದ್ರ ಸರಕಾರವು ಭದ್ರತೆ ಮತ್ತು ಭಯೋತ್ಪಾದಕ ಸಂಬಂಧಗಳಿಗೆ ಬೆದರಿಕೆಗಳನ್ನು ಉಲ್ಲೇಖಿಸಿ, ಮೂಲಭೂತ ಸಂಘಟನೆಯಾದ ಪಿಎಫ್‌ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿತ್ತು. ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಒಟ್ಟು ಒಂಬತ್ತು ಸಂಸ್ಥೆಗಳನ್ನು “ಕಾನೂನುಬಾಹಿರ” ಎಂದು ಘೋಷಿಸಲಾಗಿದೆ. ಆದರೆ ಪಿಎಫ್‌ಐನ ರಾಜಕೀಯ ಶಾಖೆ, ಎಸ್‌ಡಿಪಿಐ ನಿಷೇಧದಿಂದ ಪಾರಾಗಿದೆ.
ಎಸ್‌ಡಿಪಿಐ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದೆ ಮತ್ತು ಇಲ್ಲಿಯವರೆಗೆ ಪಿಎಫ್‌ಐ ಮತ್ತು ಎಸ್‌ಡಿಪಿಐ ನಡುವೆ ಯಾವುದೇ ನಂಟು ಸ್ಥಾಪಿಸಲಾಗಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
“ಪಿಎಫ್‌ಐ ವಿರುದ್ಧ ಕ್ರಮದ ಬಗ್ಗೆ ನಮಗೆ ತಿಳಿದಿದೆ. ಎಸ್‌ಡಿಪಿಐ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದೆ.ಅವರ ಕಡೆಯಿಂದ ಯಾವುದೇ ಲೋಪವಿಲ್ಲ ಎಂದು ಸಿಇಸಿ ರಾಜೀವ್ ಕುಮಾರ್ ಹೇಳಿದ್ದಾರೆ.