Advertisement
ಕಳೆದ 3 ವರ್ಷಗಳ ಹಿಂದೆ ನಗರ ಸಭೆ ಅಧಿಕಾರಿಗಳು ಕಿರಿದಾದ ಆರ್‌ಎಂಸಿ ರಸ್ತೆಯನ್ನು ವಿಸ್ತರಣೆ ಮಾಡುವ ಸಲುವಾಗಿ ಎರಡು ರಸ್ತೆಯ ಬದಿಯಲ್ಲಿದ್ದ ಮನೆ ಅಂಗಡಿಗಳನ್ನು ತೆರವುಗೊಳಿಸಿ, 80 ಅಡಿಯ ಡಬಲ್ ರಸ್ತೆಯನ್ನಾಗಿ ನಿರ್ಮಿಸಿದ್ದರು. ರಸ್ತೆ ವಿಭಜಕದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದ್ದರೂ ದೀಪದ ಭಾಗ್ಯವಿಲ್ಲದೆ ಬಣಗುತ್ತಿದೆ.
Related Articles
Advertisement
ಅಪಘಾತ ಆಹ್ವಾನ: ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ತರಕಾರಿ, ಸೊಪ್ಪು ಇನ್ನಿತರ ಸಾಮಗ್ರಿಗಳನ್ನು ಆಟೋ, ಬೈಕ್, ಗೂಡ್ಸ್ ಸೇರಿ ದಂತೆ ವಿವಿಧ ವಾಹನಗಳಲ್ಲಿ ಸಾಗಣೆ ಮಾಡುವ ವೇಳೆ ರಸ್ತೆ ಕತ್ತಲಿನಿಂದ ಕೂಡಿರುವುದರಿಂದ ಅಪಘಾತಕ್ಕೆ ಆಹ್ವಾನಿಸುವಂತಾಗಿದೆ. ಈ ರಸ್ತೆಯಲ್ಲಿ ಪಾದಚಾರಿಗಳು ಪ್ರಾಣ ಭೀತಿಯಿಂದ ಸಂಚರಿಸುವಂತಾಗಿದೆ. ಅಪಘಾತಗಳು ಸಂಭವಿಸಿ, ಹಲವರು ಗಾಯ ಮಾಡಿಕೊಂಡಿರುವ ನಿದರ್ಶನಗಳು ಇವೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಪ್ರಕರಣಗಳು ದಾಖಲಾಗಿವೆ.
ಕುರುಬನಕಟ್ಟೆ ದೇಗುಲ: ಇದೇ ರಸ್ತೆ ಯಲ್ಲಿ ಕುರುಬನ ಕಟ್ಟೆ ದೇವಾಲಯಕ್ಕೆ ತೆರಳುವ ಭಕ್ತಾದಿಗಳು, ವಾಹನಗಳು ಸಂಚರಿಸುವುದರಿಂದ ಸದಾ ಜನಜಂಗುಳಿ ಇರುತ್ತದೆ. ರಾತ್ರಿ ವೇಳೆ, ಮುಂಜಾನೆ ಯಲ್ಲಿ ಕಗ್ಗತ್ತಲಿನಲ್ಲಿ ಓಡಾಡುತ್ತು ಈ ಅವ್ಯವಸ್ಥೆಗೆ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.
ನಾಯಿ ಉಪಟಳ: ಬೆಳ ಗಿನ ಜಾವ 4 ಗಂಟೆಗೆ ತರಕಾರಿ ಬೆಳೆದ ರೈತರು ಮತ್ತು ಮಹಿಳೆಯರು ನಡೆದು ಬರುವಾಗ ನಾಯಿಗಳ ಕಾಟ ಇರುವುದರಿಂದ ಭಯಪಡುತ್ತಿದ್ದಾರೆ. ಅಲ್ಲದೇ ವಾಹನ ಸಾವರರನ್ನು ನಾಯಿಗಳು ಅಟ್ಟಿಸಿಕೊಂಡು ಬರುವುದರಿಂದ ಭಯದ ವಾತಾವರಣ ಇರುತ್ತದೆ. ಕೂಡಲೇ ಈ ರಸ್ತೆಯಲ್ಲಿ ಬೀದಿ ದೀಪದ ವ್ಯವಸ್ಥೆ ಮಾಡಬೇಕು ಎಂದು ಮಾರುಕಟ್ಟೆಯ ತರಕಾರಿ ವ್ಯಾಪಾರಿ ಸೋಮ ಶೇಖರ್ ಮತ್ತಿತರರು ಆಗ್ರಹಿಸಿದ್ದಾರೆ.