Advertisement

ಕೋವಿಡ್ ಭೀತಿ : ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿದ ಉತ್ತರ ಪ್ರದೇಶ ಸರ್ಕಾರ  

02:44 PM Jul 18, 2021 | Team Udayavani |

ಲಕ್ನೋ :  ಕೋವಿಡ್ ಹಿನ್ನೆಲೆಯಲ್ಲಿ ಪ್ರತಿ ವರ್ಷ ನಡೆಯುವ ಕನ್ವರ್ ಯಾತ್ರೆಯನ್ನು ಉತ್ತರ ಪ್ರದೇಶ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.

Advertisement

ಕೊವಿಡ್ ಸೋಂಕಿನ ಎರಡನೇ ಅಲೆ ಸುಧಾರಿಸುತ್ತಿದ್ದರೂ ಕೂಡ ಸಂಭಾವ್ಯ ಮೂರನೇ ಅಲೆಯ ಭೀತಿಯಿಂದ ಅಲ್ಲಿನ ಸರ್ಕಾರ ಕಜನ್ವರ್ ಯಾತ್ರೆಯನ್ನು ಈ ವರ್ಷ ರದ್ದು ಮಾಡುವಂತೆ ಮನವಿ ಮಾಡಿಕೊಂಡಿತ್ತು, ಸರ್ಕಾರದ ಮನವಿಗೆ ಕನ್ವರ್ ಸಂಘಗಳು ಕನ್ವರ್ ಯಾತ್ರೆಯನ್ನು ರದ್ದುಗೊಳಿಸುವುದಕ್ಕೆ ಒಪ್ಪಿಗೆ ನೀಡಿವೆ.

ಇದನ್ನೂ ಓದಿ : ಭಾರತ-ಲಂಕಾ ಮೊದಲ ಏಕದಿನ: ಟಾಸ್ ಗೆದ್ದ ಲಂಕಾ, ಭಾರತ ತಂಡದಲ್ಲಿ ಇಬ್ಬರು ಪದಾರ್ಪಣೆ

ಈ ಬೆಳವಣಿಗೆಯ ಮುನ್ನಾ ಅಲ್ಲಿನ ಸರ್ಕಾರ ಯಾತ್ರೆ ಮಾಡಲು ಅನುಮತಿಯನ್ನು ನೀಡಿತ್ತು. ಆದರೇ, ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿತ್ತು.

ಧಾರ್ಮಿಕ ಆಚರಣೆಗಳಿಗಿಂತಲೂ ನಾಗರಿಕರ ಬದುಕುವ ಹಕ್ಕು ಮುಖ್ಯ. ಹಾಗಾಗಿ, ಕನ್ವರ್‌ ಯಾತ್ರೆಗೆ ಅನುಮತಿ ನೀಡಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು,’ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

Advertisement

ಈ ಹಿನ್ನೆಲೆಯಲ್ಲಿ ಕನ್ವರ್ ಸಂಘಗಳನ್ನು ಅಲ್ಲಿನ ಸರ್ಕಾರ ಮನವಿ ಮಾಡಿಕೊಂಡಿತ್ತು, ಸರ್ಕಾರ ಮನವಿಗೆ ಜುಲೈ 25ರಿಂದ ಆಗಸ್ಟ್‌ 6ರವರೆಗೆ ನಡೆಯಬೇಕಿದ್ದ ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿವೆ ಎಂದು ವರದಿಯಾಗಿವೆ.

ಇದನ್ನೂ ಓದಿ : ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ವಾರಂಬಳ್ಳಿ ಗ್ರಾಮದಲ್ಲಿ ಹಡಿಲು ಭೂಮಿ ಕೃಷಿ ನಾಟಿಗೆ ಚಾಲನೆ

Advertisement

Udayavani is now on Telegram. Click here to join our channel and stay updated with the latest news.

Next