ಕೋಲ್ಕತಾ: ಒಂದು ವೇಳೆ ಈ ವರ್ಷವೇ ಐಪಿಎಲ್ ನಡೆಸುವು ದಾದರೆ ಇದರಲ್ಲಿ ಯಾವುದೇ ಪ್ರಯೋಗವಾಗಲಿ, ಬದಲಾವಣೆಯ ನ್ನಾಗಲಿ ಮಾಡಕೂಡದು ಎಂಬುದಾಗಿ ಕೆಕೆಆರ್ ಫ್ರಾಂಚೈಸಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೆಂಕಿ ಮೈಸೂರ್ ಹೇಳಿದ್ದಾರೆ. ಇದು ಎಂದಿನ ಮಾದರಿಯಲ್ಲೇ ನಡೆಯಬೇಕು ಅಪೇಕ್ಷಿಸಿದ್ದಾರೆ.
“ಯಾವತ್ತೂ ವಸ್ತುವಿನ ಗುಣಮಟ್ಟ ವನ್ನು ಕೆಡದಂತೆ ನೋಡಿಕೊಳ್ಳಬೇಕು. ಇದು ಕ್ರೀಡೆಗೂ ಅನ್ವಯಿಸುವ ಮಾತು. ಹೀಗಾಗಿ ಐಪಿಎಲ್ ಪೂರ್ಣ ಪ್ರಮಾಣದಲ್ಲೇ ನಡೆಯಬೇಕು, ಪಂದ್ಯಗಳ ಸಂಖ್ಯೆಯನ್ನು ಕಡಿತಗೊಳಿಸ ಬಾರದು, ವಿದೇಶಿ ಕ್ರಿಕೆಟಿಗರೆಲ್ಲರೂ ಪಾಲ್ಗೊಳ್ಳಬೇಕು’ ಎಂದು ವೆಂಕಿ ಮೈಸೂರ್ ಹೇಳಿದರು.
ಈ ಬಾರಿಯ ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಭಾಗವಹಿಸುವುದಿಲ್ಲ, ಸೀಮಿತ ಕಾಲಾವಕಾಶ ದೊರಕುವು ದಾದರೆ ಪಂದ್ಯಗಳ ಸಂಖ್ಯೆಯನ್ನು ಕಡಿತಗೊಳಿಸಲಾಗುತ್ತದೆ, ಸೀಮಿತ ಸ್ಟೇಡಿಯಂಗಳಲ್ಲಷ್ಟೇ ಪಂದ್ಯಗಳು ನಡೆಯುತ್ತವೆ… ಎಂಬ ಸುದ್ದಿಗಳು ಹಬ್ಬಿದ ಹಿನ್ನೆಲೆಯಲ್ಲಿ ವೆಂಕಿ ಈ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಎಲ್ಲ ಫ್ರಾಂಚೈಸಿ ಗಳೂ ಏಕರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರು.
“ಐಪಿಎಲ್‌ಗೆ ತವರಿನ ಆಟಗಾರರೇ ಬೆನ್ನೆಲುಬು. ವಿದೇಶಿ ಕ್ರಿಕೆಟಿಗರಿಂದ ಇದರ ಆಕರ್ಷಣೆ ಹೆಚ್ಚಲಿದೆ’ ಎಂದು ವೆಂಕಿ ಹೇಳಿದರು.