Advertisement

ಸೌಹಾರ್ದ ಸಹಕಾರಿ ಪ್ರಾಥಮಿಕ ಸೊಸೈಟಿಗೆ ಹಸ್ತಕ್ಷೇಪ‌ ಮಾಡಲ್ಲ: ಕೃಷ್ಣಾ‌ ರೆಡ್ಡಿ

12:39 PM Nov 09, 2021 | Team Udayavani |

ಶಿರಸಿ: ಯಾವುದೇ ಕಾರಣಕ್ಕೂ ಪ್ರಾಥಮಿಕ ಪತ್ತಿನ ಸೇವಾ ಸಹಕಾರಿ ಸಂಘಗಳ ವ್ಯಾಪ್ತಿಯಲ್ಲಿ ಸೌಹಾರ್ದ ಸಹಕಾರಿ ಹಸ್ತ ಕ್ಷೇಪ‌ ಮಾಡುವುದಿಲ್ಲ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ರಾಜ್ಯ ಅಧ್ಯಕ್ಷ ಬಿ.ಎಚ್.ಕೃಷ್ಣ ರೆಡ್ಡಿ ಹೇಳಿದರು.

Advertisement

ಮಂಗಳವಾರ ನಗರದ ಮಧು ವನದಲ್ಲಿ ‌ಸುದ್ದಿಗೋಷ್ಡಿ ನಡೆಸಿ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ಇರುವ ಆದಾಯ ತೆರಿಗೆ ವಿನಾಯಿತಿ ವ್ಯಾಪ್ತಿಗೆ ಮಾತ್ರ ಸೌಹಾರ್ದ ಸಹಕಾರಿ ಸೇರಿದೆ. ಉಳಿದಂತೆ ಅವುಗಳ ಕಾರ್ಯ, ನಮ್ಮ ಕಾರ್ಯಗಳೇ ಬೇರೆ. ಸಹಕಾರ ಭಾರತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವುದರಿಂದ ಪ್ರಾಥಮಿಕ ಸಹಕಾರಿ, ಮಾರ್ಕೇಟಿಂಗ್ ಸಹಕಾರಿಗಳ ಸಮಸ್ಯೆ‌ ಕೂಡ ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಅವರ ಬಳಿ‌ ಸಮಾಲೋಚನೆ ನಡೆಸುತ್ತೇವೆ. ಈಗಿರುವ ಗೊಂದಲ‌ ನಿವಾರಿಸಿ ಕೆಲಸ‌ ಮಾಡುವುದಾಗಿ ಹೇಳಿದರು.

ಪಂಜಾಬ್, ಮಹಾರಾಷ್ಟ್ರ ಸಹಕಾರ ಬ್ಯಾಂಕ್, ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ನಂತರ ರಾಜ್ಯದ ಸಹಕಾರ ಕ್ಷೇತ್ರದ ವಿಶ್ವಾಸದ ಕೊರತೆ ಎದುರಿಸುತ್ತಿದೆ. ಸಹಕಾರ ಕ್ಷೇತ್ರದ ವಿಶ್ವಾಸ ಮರು ಸ್ಥಾಪನೆ, ಠೇವಣಿದಾರರ ಹಿತರಕ್ಷಣೆಗೆ ಸೌಹಾರ್ದ ಸಹಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ವಿವರಿಸಿದ ಅವರು, ಸೌಹಾರ್ದ ಸಹಕಾರಿ ದೂರು ನೀಡಲು, ಹಾಗೂ ಹಣಕಾಸು ಅವ್ಯವಹಾರದಲ್ಲಿ ತೊಡಗಿದ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಜಾರಿಗೊಳಿಸಲು ಉನ್ನತ ಅಧಿಕಾರಿಗಳ ವಿಶೇಷ ಕಾರ್ಯಪಡೆ ಜಾರಿಗೆ ತರಲಾಗಿದೆ ಎಂದೂ ವಿವರಿಸಿದರು‌.

ಇದನ್ನೂ ಓದಿ: ಬೆಳ್ತಂಗಡಿ: ಹಳ್ಳ ದಾಟುವ ವೇಳೆ ಕಾಲು ಜಾರಿ ನೀರಲ್ಲಿ ಮುಳುಗಿ ವ್ಯಕ್ತಿ ಸಾವು

ಆರಂಭಿಕ ಹಂತದಲ್ಲೇ ಸಹಕಾರಿ ಅವ್ಯವಹಾರ ತಡೆಗಟ್ಟಲು ಆರಂಭದಲ್ಲೇ ಪ್ರಯತ್ನ ಮಾಡಲಾಗುತ್ತದೆ. ಅದಕ್ಕಾಗಿ ಈ ವಿಶೇಷ ಟಾಸ್ಕ್ ಫೊರ್ಸ್ ಎಂದ ಅವರು, ಬೆಂಗಳೂರಿನ‌ ಕೇಂದ್ರ ಕಛೇರಿ‌ ಕಟ್ಟಡವನ್ನು ಕೇಂದ್ರ ಸಚಿವ ಅಮಿತ್ ಶಾ ಉದ್ಘಾಟಿಸಲು ಡಿಸೆಂಬರ್ ಗೆ ಬರಲಿದ್ದಾರೆ. ಕಲಬುರ್ಗಿ, ಬೆಳಗಾವಿಯಲ್ಲಿ ಸ್ವಂತ ಕಟ್ಟಡ ಆಗಿದ್ದು, ಮೈಸೂರಿನಲ್ಲೂ ಶೀಘ್ರ ಆಗಲಿದೆ ಎಂದರು.

Advertisement

ರಾಜ್ಯದಲ್ಲಿ 5300ಕ್ಕೂ ಹೆಚ್ಚು ಸೌಹಾರ್ದ ಸಹಕಾರಿ ಸಂಘಗಳು ಕೆಲಸ‌ ಮಾಡುತ್ತಿವೆ. 50 ಲಕ್ಷಕ್ಕೂ ಅಧಿಕ ಸದಸ್ಯರು ಇದ್ದಾರೆ‌. 60 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಸಿಕ್ಕಿದೆ. 750 ಕೋಟಿ ರೂ.ಗಳ ಪಾಲು ಬಂಡವಾಳ, 15000 ಕೋಟಿ ರೂ. ಠೇವಣಿ, 100 ಕೋ.ರೂ.ನಿಧಿ, 230 ಕೋಟಿ ರೂ ಲಾಭ ಆಗಿದೆ‌. 1300ಕ್ಕೂ ಅಧಿಕ ಕೇಂದ್ರ ಗಳಲ್ಲಿ ಇ ಸ್ಟಾಂಪಿಂಗ್ ಸೇವೆ ಇದೆ ಎಂದರು.

ಈ ವೇಳೆ ರಾಜ್ಯ‌ ನಿರ್ದೇಶಕಿ ಸರಸ್ವತಿ ಎನ್.ರವಿ, ಸಹಕಾರ ಭಾರತಿ ರಾಜ್ಯ‌ ನಿರ್ದೇಶಕ ಶಂಭುಲಿಂಗ ಹೆಗಡೆ, ಸೌಹಾರ್ದ ಫೆಡರಲ್ ಜಿಲ್ಲಾ ಅಧ್ಯಕ್ಷ ‌ಪ್ರಮೋದ ಹೆಗಡೆ, ಕಾರ್ಯದರ್ಶಿ ಕೆ.ವಿ.ನಾಯ್ಕ ಇತರರು ಇದ್ದರು.

ಸಹಕಾರಿ ಭಾರತಿ, ಸೌಹಾರ್ದ ಸಹಕಾರಿ ಎರಡೂ ಬೇರೆ. ಇಲ್ಲಿ ಸಮ್ಮಿಶ್ರ‌ ಮಾಡುವುದಿಲ್ಲ. ಸಹಕಾರಿ ಭಾರತಿ‌ ಕೂಡ ರಾಜಕೀಯೇತರ ಸಂಸ್ಥೆ. -ಕೃಷ್ಣಾ ರೆಡ್ಡಿ,‌ ಅಧ್ಯಕ್ಷರು ಸೌಹಾರ್ದ ಸಹಕಾರಿ

Advertisement

Udayavani is now on Telegram. Click here to join our channel and stay updated with the latest news.

Next