Advertisement
ಬುಧವಾರ ದ.ಕ. ಜಿಲ್ಲೆಗೆ ಭೇಟಿ ನೀಡಿದ ಅವರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಬಂಟ್ವಾಳ ಮತ್ತು ಉಳ್ಳಾಲಕ್ಕೆತೆರಳಿ ಪರಿಸ್ಥಿತಿ ಅವಲೋಕಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
Related Articles
Advertisement
ಹಿಂಜಾವೇ ಮುಖಂಡ ಸತ್ಯಜಿತ್ ಸುರತ್ಕಲ್ ಅವರ ವಿರುದ್ಧ ಪ್ರಕರಣ ದಾಖಲಿಸಿರುವ ಬಗ್ಗೆ ಪ್ರಶ್ನಿಸಿದಾಗ ಪ್ರಕರಣ ದಾಖಲಿಸುವುದು ಮತ್ತು ಚಾರ್ಜ್ ಶೀಟ್ ಹಾಕುವುದು ಬೇರೆ ಬೇರೆ ಪ್ರಕ್ರಿಯೆಗಳಾಗಿವೆ. ಸೂಕ್ತ ಸಾಕ್ಷ್ಯಾಧಾರ ಲಭಿಸಿದರೆ ಮಾತ್ರ ಚಾರ್ಜ್ ಶೀಟ್ ಹಾಕಲಾಗುತ್ತದೆ. ಈ ಪ್ರಕರಣದಲ್ಲಿ ಜನರ ಹೇಳಿಕೆಗಳನ್ನು ಹಾಗೂ ಸತ್ಯಜಿತ್ ಅವರ ಹೇಳಿಕೆಗಳನ್ನೂ ಪಡೆದು ಮುಂದಿನ ಕ್ರಮ ಜರಗಿಸಲಾಗುವುದು. ಆದರೆ ಏನಿದ್ದರೂ ಅಮಾಯಕರ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಎಡಿಜಿಪಿ ತಿಳಿಸಿದರು.
ವಿವಿಧ ವಿದ್ಯಮಾನಗಳಿಗೆ ಸಂಬಂಧಿಸಿ ಸಾರ್ವಜನಿಕರು ಕೂಡ ಪೊಲೀಸರಿಗೆ ಮಾಹಿತಿ ನೀಡಬಹುದು. ಮಾಹಿತಿದಾರರ ಬಗ್ಗೆ ಗೌಪ್ಯತೆ ಕಾಪಾಡಲಾಗುವುದು ಎಂದು ತಿಳಿಸಿದರು.
ಕಲ್ಲು ತೂರಾಟ:6 ಕೇಸು ದಾಖಲು
ಶರತ್ ಶವಯಾತ್ರೆ ಸಂದರ್ಭ ದಲ್ಲಿ ಬಿ.ಸಿ.ರೋಡ್ ಕೈಕಂಬದಲ್ಲಿ ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿ ಒಟ್ಟು 6 ಪ್ರಕರಣ ಗಳನ್ನು ದಾಖಲಿಸಲಾಗಿದೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಇದುವರೆಗೆ ಒಟ್ಟು 17 ಜನರನ್ನು ಬಂಧಿಸಲಾಗಿದೆ. ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಸಿಸಿ ಟಿವಿ ಫೂಟೇಜ್‌ಗಳನ್ನು ಆಧರಿಸಿ ಜಿಲ್ಲಾ ಎಸ್‌ಪಿ ಮತ್ತು ಐಜಿಪಿ ಅವರು ದೃಢೀಕರಿಸಿದ ಬಳಿಕ ಬಂಧಿಸುವ ಪ್ರಕ್ರಿಯೆ ನಡೆದಿದೆ ಎಂದು ಐಜಿಪಿ ವಿವರಿಸಿದರು. ಡಾ| ಕಲ್ಲಡ್ಕ ಪ್ರಭಾಕರ ಭಟ್ ಬಂಧನಕ್ಕೆ ಸರಕಾರದಿಂದ ಯಾವುದೇ ಸೂಚನೆ ಬಂದಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ “ನಾವು ಕಾನೂನು ಪ್ರಕಾರ ನಡೆಯುತ್ತೇವೆ’ ಎಂದಷ್ಟೇ ಎಡಿಜಿಪಿ ತಿಳಿಸಿದರು.