Advertisement

Panaji: ಪಾರ್ಕಿಂಗ್ ಶುಲ್ಕದಲ್ಲಿ ಯಾವುದೇ ಹೆಚ್ಚಳ ಇಲ್ಲ… :ಮೇಯರ್ ರೋಹಿತ್ ಮೊನ್ಸೆರಾತ್

01:52 PM Jun 07, 2024 | Team Udayavani |

ಪಣಜಿ: ಪಣಜಿ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದಲ್ಲಿ ವಾಹನ ನಿಲುಗಡೆ ಶುಲ್ಕದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುವ ಗುತ್ತಿಗೆದಾರರಿಗೆ ಶುಲ್ಕವನ್ನು ತಿಳಿಸುವ ಸೂಚನಾ ಫಲಕವನ್ನು ಸ್ಥಾಪಿಸಲು ಸೂಚಿಸಲಾಗಿದೆ ಎಂದು ಪಣಜಿ ಮೇಯರ್ ರೋಹಿತ್ ಮೊನ್ಸೆರಾತ್ ಹೇಳಿದ್ದಾರೆ.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಪಣಜಿ ಮಹಾನಗರದ ವಿವಿಧೆಡೆ ಪಾರ್ಕಿಂಗ್ ಶುಲ್ಕದ ಮಾಹಿತಿ ಫಲಕಗಳು ಇಲ್ಲವಾಗಿದೆ. ಹಾಗಾಗಿ ವಾಹನ ನಿಲುಗಡೆಗೆ ಹೆಚ್ಚಿನ ಶುಲ್ಕವನ್ನು ಚಾಲಕರಿಂದ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಅಲ್ಲದೆ, ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲು ಗುತ್ತಿಗೆದಾರರು ಗೊತ್ತುಪಡಿಸಿದ ಕೆಲ ನೌಕರರು ಶುಲ್ಕ ವಸೂಲಿ ಮಾಡುವಾಗ ವಾಹನ ಸವಾರರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ಗುತ್ತಿಗೆದಾರರ ನೌಕರರ ಬಗ್ಗೆ ಪುರಸಭೆಗೆ ದೂರು ನೀಡಿದರೆ ಗುತ್ತಿಗೆದಾರರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ಮಾನ್ಸೆರಾತ್ ತಿಳಿಸಿದರು.

ನಗರದ ವಿವಿಧೆಡೆ ಅಳವಡಿಸಿರುವ ಪಾರ್ಕಿಂಗ್ ಶುಲ್ಕದ ಫಲಕಗಳು ದೋಷಪೂರಿತವಾಗಿರುವುದು ಕಂಡು ಬಂದಿದ್ದು, ನಗರದಲ್ಲಿ ಹೊಸ ಫಲಕಗಳನ್ನು ಹಾಕುವಂತೆ ಗುತ್ತಿಗೆದಾರರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಮಾನ್ಸೆರಾತ್ ತಿಳಿಸಿದರು.

ಇದನ್ನೂ ಓದಿ: Russia: ನದಿಯಲ್ಲಿ ಮುಳುಗಿ ಭಾರತೀಯ ಮೂಲದ ನಾಲ್ವರು ವಿದ್ಯಾರ್ಥಿಗಳ ದುರಂತ ಅಂತ್ಯ

Advertisement

Udayavani is now on Telegram. Click here to join our channel and stay updated with the latest news.

Next