Advertisement

Charmadi Ghat ಪ್ರವಾಸಿಗರ ಮೋಜುಮಸ್ತಿ: ರಜಾ ದಿನದ ಸಂಭ್ರಮ: ಅಪಾಯಕ್ಕೆ ಆಹ್ವಾನ

10:55 PM Jun 16, 2024 | Team Udayavani |

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಸೋಮನಕಾಡು, ಕಣಿವೆ ಪ್ರದೇಶದ ಬಂಡೆಯ ಮೇಲಿಂದ ಜಲಪಾತದಂತೆ ನೀರು ಸುರಿಯುವ ಸ್ಥಳದಲ್ಲಿ ಹಾಗೂ ಘಾಟಿಯ ಅಲ್ಲಲ್ಲಿ ನೀರಿನ ಝರಿ ಸ್ಥಳಗಳ ಅಕ್ಕಪಕ್ಕ ರಸ್ತೆಯ ಆಸುಪಾಸಿನಲ್ಲಿ ರವಿವಾರ ಪ್ರವಾಸಿಗರು ತುಂಬಿದ್ದರು. ಕೆಲವೆಡೆ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಿತ್ತು.

Advertisement

ಚಾರ್ಮಾಡಿ ಘಾಟಿಯಲ್ಲಿ ಮಳೆ ಸಹಿತ ಮಂಜು ಮುಸುಕಿದ ವಾತಾವರಣ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಇಲ್ಲಿನ ಹಲವಾರು ಸಣ್ಣಪುಟ್ಟ ಜಲಪಾತಗಳು ರಸ್ತೆಯಲ್ಲಿ ಕಣ್ಮನ ಸೆಳೆಯುತ್ತವೆ. ಆದರೆ 2019ರಲ್ಲಿ ಭೂಕುಸಿತದಿಂದ ತತ್ತರಿಸಿದ ಚಾರ್ಮಾಡಿ ಪ್ರದೇಶ ಪ್ರಸಕ್ತ ಹೇಳುವಷ್ಟು ಮಟ್ಟಿಗೆ ಸುರಕ್ಷಿತವಾಗಿಲ್ಲ. ಜತೆಗೆ ಕಾಡಾನೆಗಳು ಪ್ರತ್ಯಕ್ಷವಾಗುತ್ತಿರುವುದರಿಂದ ಅಪಾಯ ಸಾಕಷ್ಟಿದೆ. ಕೆಲವೆಡೆ ದಟ್ಟವಾಗಿ ಮಂಜು ಮುಸುಕಿದ ವಾತಾವರಣ ಇರುವುದರಿಂದ ಎದುರು ಬದಿಯ ವಾಹನ ಕಾಣುವುದೇ ಇಲ್ಲ. ಈ ಮಧ್ಯೆ ಪ್ರವಾಸಿಗರು ಮೋಜುಮಸ್ತಿ ನೆಪದಲ್ಲಿ ರಸ್ತೆ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸಿ ರಸ್ತೆಯಲ್ಲೇ ಅಡ್ಡಾಡುತ್ತಿರುವುದರಿಂದ ಅಪಾಯ ಎದುರಾಗುವ ಸಂಭವವಿದೆ.

ಶನಿವಾರ, ರವಿವಾರ ಹಾಗೂ ಸೋಮವಾರ ರಜೆಯಾದ್ದರಿಂದ ಬಹಳಷ್ಟು ಪ್ರವಾಸಿಗರು ಆಗಮಿಸುತ್ತಿ ದ್ದಾರೆ. ರವಿವಾರ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರಿಂದ ಚಾರ್ಮಾಡಿಯಲ್ಲಿ ರಸ್ತೆ ಅಕ್ಕಪಕ್ಕ ಅತೀ ಹೆಚ್ಚು ವಾಹನ ನಿಂತಿರುವುದು ಕಂಡುಬಂತು. ಪೊಲೀ ಸರು ಚಾರ್ಮಾಡಿ ಘಾಟಿಯಲ್ಲಿ ಗಸ್ತು ತಿರುಗಿ ಪ್ರವಾಸಿಗರನ್ನು ಹೆದರಿಸಿ ಚದುರಿಸಿದರೂ ಪೊಲೀಸರು ವಾಪಸಾಗುತ್ತಿದ್ದಂತೆ ಮತ್ತೆ ಇತರ ಪ್ರವಾಸಿಗರು ಹುಚ್ಚಾಟ ಮೆರೆಯು ತ್ತಾರೆ. ಫೋಟೋ ಶೂಟ್‌ ಮಾಡು ವುದು, ಸೆಲ್ಫಿ ತೆಗೆಯುವುದು ರೀಲ್ಸ್‌ ಮಾಡುವುದು ಸಹಿತ ನೀರಿನ ಝರಿಯಲ್ಲಿ ಇಳಿಯುವ ಪ್ರಯತ್ನ ಮಾಡುತ್ತಿರುವುದು ಅಪಾಯ ಕಾರಿಯಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ ಆದುದರಿಂದ ಸಾವಿರಾರು ಪ್ರವಾಸಿಗರು ಈ ರಸ್ತೆಯಲ್ಲಿ ಸಂಚರಿ ಸುತ್ತಾರೆ.

ಪ್ರವಾಸಿಗರಿಗೆ ಎಷ್ಟು ಎಚ್ಚರಿಕೆಯ ನಾಮಫಲಕ ಹಾಕಿದ್ದರೂ ನಿರ್ಲಕ್ಷ್ಯ ತೋರುತ್ತಿದ್ದು ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಪ್ರವಾಸಿಗರ ವಾಹನ ನಿಲುಗಡೆಗೊಳಿಸದಂತೆ ಕಟ್ಟುನಿಟ್ಟಿನ ಸೂಚನೆ ಅಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next