Advertisement
ಈ ಬಾರಿಯ ಬಜೆಟ್ ನಲ್ಲಿ ರಾಜಕೀಯ ಪಕ್ಷಗಳಿಗೆ ಬಿಗ್ ಶಾಕ್ ಕೊಡಲಾಗಿದೆ. ಯಾವುದೇ ರಾಜಕೀಯ ಪಕ್ಷಗಳಿಗೆ ಒಬ್ಬ ವ್ಯಕ್ತಿ 2 ಸಾವಿರ ರೂಪಾಯಿಗಿಂತ ಹೆಚ್ಚು ದೇಣಿಗೆ ನೀಡಿದರೆ ಆತನ ವಿವರ ಕೊಡುವುದು ಕಡ್ಡಾಯ ಎಂದು ಹೇಳಿದೆ.
2017ರ ಸಾಲಿನ ಬಜೆಟ್ ನಲ್ಲಿಯೂ ಕೇಂದ್ರ ಸರ್ಕಾರ ಆದಾಯ ತೆರಿಗೆ ಮಿತಿ ಏರಿಕೆ ಮಾಡಿಲ್ಲ. 2.5 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. .ಆದರೆ ಆದಾಯ ತೆರಿಗೆ ದರ ಶೇ.10ರಿಂದ ಶೇ.5ಕ್ಕೆ ಇಳಿಸಿದೆ. 2.5ಲಕ್ಷದಿಂದ 5 ಲಕ್ಷದವರೆಗೆ ಶೇ.5ರಷ್ಟು ತೆರಿಗೆ, 5 ಲಕ್ಷದಿಂದ ಶೇ.10ಲಕ್ಷದವರೆಗೆ ಶೇ.20ರಷ್ಟು ತೆರಿಗೆ. ಹಿರಿಯ ನಾಗರಿಕರಿಗೆ 3ಲಕ್ಷದಿಂದ 3.5ಲಕ್ಷದವರೆಗೆ ಆದಾಯ ತೆರಿಗೆ ಮಿತಿ ಏರಿಕೆ ಮಾಡಲಾಗಿದೆ.