Advertisement
ಪಟ್ಟಣದ ಶಾಸಕ ನಾಗನಗೌಡ ಕಂದಕೂರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅಭಿವೃದ್ಧಿ ಕೆಲಸಗಳು ಹಾಗು ಶರಣು ಗೌಡ ಕಂದಕೂರ ಅವರ ಕ್ಷೇತ್ರದ ಮೇಲೆ ಇರುವ ಕಾಳಜಿಯಿಂದ ಜನರು ಮತ್ತು ಯುವಕರು ಜೆಡಿಎಸ್ ಪರ ವಾಗಿದ್ದರೆ ಎಂಬುದಕ್ಕೆ ಯರಗೋಳ ಗ್ರಾಮದಲ್ಲಿ ಜರುಗಿದ ಐತಿಹಾಸಿಕ ಪಂಚರತ್ನ ಯಾತ್ರೆ ಆಯೋಜನೆ ನಿದರ್ಶನವಾಗಿದೆ ಎಂದರು.
Related Articles
Advertisement
ಇದನ್ನೂ ಓದಿ:ಏಜೆನ್ಸಿಗಳ ದುರುಪಯೋಗ: ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ 14 ವಿರೋಧ ಪಕ್ಷಗಳು
ಸರಕಾರ ಜಾಹೀರಾತುಗಳಲ್ಲಿ ರಾಜ್ಯದ ಅಭಿವೃದ್ಧಿ ಕುರಿತು ಬಿಂಬಿಸುತ್ತಿದೆ ಜಾಹೀರಾತುಗಳಿಗೆ ನೀಡುವ ಆದ್ಯತೆ ಜನತೆ ಮೇಲೆ ಮತ್ತು ರಾಜ್ಯದ ಅಭಿವೃದ್ಧಿ ಪರ ತೋರಿಸ ಬೇಕಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಒಬ್ಬ ಇಲಾಖೆ ಅಧಿಕಾರಿ ಮತ್ತು ಶಾಸಕರು ಮಾಡಬೇಕಾದ ಶಂಕು ಸ್ಥಾಪನೆಗಳು ಚುನಾವಣೆ ಹಿನ್ನಲೆಯಲ್ಲಿ ಅಮಿತ್ ಶಾ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಉದ್ಘಾಟನೆ ಮಾಡುತ್ತಿರುವುದು ಚುನಾವಣೆ ಪ್ರಚಾರದ ಹೊಸ ದಾರಿಗೆ ನಾಂದಿ ಹಾಡಿದ್ದಾರೆ. ಬಿಜೆಪಿ ಡಬಲ್ ಇಂಜಿನ್ ಸರಕಾರ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದು ಅವರು ಅಭಿವೃದ್ಧಿ ಕಡೆಗಣಿಸಿರುವ ಕಾರಣಕ್ಕಾಗಿ ಸ್ಥಳೀಯ ನಾಯಕರ ಮೇಲೆ ಭರವಸೆ ಇಲ್ಲದ ಕಾರಣ ಪ್ರತಿಯೊಂದು ಕಾಮಗಾರಿ ಅಸಂಪೂರ್ಣ ವಾಗಿದ್ದರು ಕೇಂದ್ರದಿಂದ ಸಚಿವರು ಮತ್ತು ಪ್ರಧಾನಿಗಳು ಬರುತ್ತಿರುವುದು ಅವರು ಹತಾಶೆಗೆ ಒಳಗಾಗಿದ್ದಾರೆ ಅನ್ನಿಸುತ್ತದೆ ಮತ್ತು ಹಾಸ್ಯಸ್ಪದವಾಗಿದೆ ಎಂದು ಬಿಜೆಪಿ ಕುರಿತು ಲೇವಡಿ ಮಾಡಿದರು.
ಮೋದಿ ಎಲ್ಲ ಕಾರ್ಯಕ್ರಮಗಳು ಮತ್ತು ಶಂಕು ಸ್ಥಾಪನೆಗಳು ಮುಗಿದ ಮೇಲೆ ಅವರು ಹೇಳಿದ ದಿನಾಂಕಕ್ಕೆ ಚುನಾವಣೆ ಆಯೋಗ ಚುನಾವಣೆ ದಿನಾಂಕದ ಮುಹೂರ್ತ ಫಿಕ್ಸ್ ಮಾಡುತ್ತಾರೆ ಮೋದಿ ಹೇಳುವ ತನಕ ಚುನಾವಣೆ ಮುಹೂರ್ತ ಫಿಕ್ಸ್ ಮಾಡುವುದಿಲ್ಲ ಎಂದು ಅವರು ಆರೋಪಿಸಿದರು.
ಜೆಡಿಎಸ್ ಪಕ್ಷವು ಯುವಕರಿಗೆ ಹೆಚ್ಚಿನ ಟಿಕೆಟ್ ನೀಡಿ ಹೊಸ ರಾಜಕೀಯಕ್ಕೆ ಹೊಸ ಆದ್ಯತೆ ನೀಡುತ್ತಿದ್ದೇನೆ. ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಲು ಕಾರಣ ಏನು ಮತ್ತು ಇಂದು ಬಾದಾಮಿ ಯಲ್ಲಿ ಪ್ರಚಾರ ಮಾಡುತ್ತಿರುವ ಕುರಿತು ಅವರಿಗೆ ಸುದ್ದಿಗಾರರು ಪ್ರಶ್ನೆಸಿದಾಗ ರಾಜಕೀಯದಲ್ಲಿ ಸೋಲು ಗೆಲವು ಸಾಮಾನ್ಯ. ಆದರೆ ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲುವುದಿಲ್ಲ ಎಂಬುದು ಗಿಮಿಕ್ ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿಯುವುದಿಲ್ಲ ಎಂದರು.
ಬೀದರ್ ಶಾಸಕ ಬಂಡೆಪ್ಪ ಕಾಶಂಪೂರ್, ಶಾಸಕ ನಾಗನಗೌಡ ಕಂದಕೂರ, ಜೆಡಿಎಸ್ ನಿಯೋಜಿತ ಅಭ್ಯರ್ಥಿ ಶರಣು ಗೌಡ ಕಂದಕೂರ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ್ ನಿರಿಟಿ, ಹಿರಿಯ ಮುಖಂಡರಾದ ಜಿ.ತಮ್ಮಣ್ಣ ಇದ್ದರು