Advertisement

ನಿಯಮ ಬಾಹಿರ ನಿವೇಶನ ಹಂಚಿಕೆ ಬೇಡ

09:28 PM Sep 01, 2022 | Team Udayavani |

ಶಹಾಪುರ: ನಗರ ಆಶ್ರಯ ಸಮಿತಿಯ ಅಧ್ಯಕ್ಷರು ಫಲಾನುಭವಿಗಳಿಂದ ಹಣ ಪಡೆದು, ಅರ್ಜಿ ಹಾಕಿಸಿ, ಪಟ್ಟಿ ತಯಾರಿಸಿದ್ದು, ಹಣ ನೀಡಿದವರ ಪಟ್ಟಿಯನ್ನೇ ಲಾಟರಿಯಲ್ಲಿ ಹಾಕಿ ಹಂಚಿಕೆ ಮಾಡುವ ಹುನ್ನಾರ ನಡೆಸಿದ್ದು ನಿಯಮ ಬಾಹಿರವಾಗಿದೆ. ಹೀಗಾಗಿ ನಿವೇಶನ ಹಂಚಿಕೆ ಮಾಡುವ ಕಾರ್ಯಕ್ರಮ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಬಿಜೆಪಿಯಿಂದ ನಗರಸಭೆ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಈ ವೇಳೆ ಮಾಜಿ ಶಾಸಕ ಗುರು ಪಾಟೀಲ್‌ ಶಿರವಾಳ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನಕ್ಕೆ ಅರ್ಜಿ ಕರೆದು ಒಂದು ವರ್ಷವಾಗಿದೆ. ಅಲ್ಲಿ ನಿವೇಶನ ಹಂಚಿಕೆ ಮಾಡುತ್ತಿರುವ ಜಾಗದಲ್ಲಿ ಯಾವುದೇ ಮೂಲ ಸೌಕರ್ಯಗಳು ಆಗಿಲ್ಲ. ಚರಂಡಿಯಾಗಲಿ, ರಸ್ತೆಯಾಗಲಿ, ವಿದ್ಯುತ್‌ ಕಂಬ, ನೀರಿನ ಸೌಲಭ್ಯ ಕನಿಷ್ಟ ಮೂಲ ಸೌಕರ್ಯಗಳು ಇಲ್ಲದ ಕಾರಣ, ತರಾತುರಿಯಾಗಿ ಹಂಚಿಕೆ ಮಾಡುವ ಅನಿವಾರ್ಯತೆ ಏನಿತ್ತು ಎಂದು ಪ್ರಶ್ನಿಸಿದರು.

2008ರಲ್ಲಿ ಬಸ್‌ ಡಿಪೋ ಹಿಂದುಗಡೆ 509 ಆಶ್ರಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಅದರಲ್ಲಿ 132 ಫಲಾನುಭವಿಗಳಿಗೆ ಖಾಲಿ ಹಕ್ಕು ಪತ್ರ ನೀಡಿ ನಿವೇಶನ ನೀಡಿರುವುದಿಲ್ಲ. ನಿವೇಶನ ನೀಡದೆ ಹಕ್ಕು ಪತ್ರ ಹೇಗೆ ನೀಡಿದರು ಎಂದು ಶಾಸಕರೆ ಇದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದರು.

ನಿಜವಾದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ನಮ್ಮದೇನು ತಕರಾರು ಇಲ್ಲ. ಆದರೆ ಸರಕಾರದ ನಿಯಮ ಗಾಳಿಗೆ ತೂರಿ ಏಕ ಪಕ್ಷಿಯವಾಗಿ ಸರ್ವಾಧಿಕಾರಿ ಧೋರಣೆಯಂತೆ ನಿವೇಶನ ನೀಡಲು ಮುಂದಾಗಿರುವುದಕ್ಕೆ ನಮ್ಮ ತಕರಾರು ಇದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next