ಹುಮನಾಬಾದ್: ವೀರಶೈವ ಜಂಗಮರ ಬೇಡಿಕೆಗಳು ಸರ್ಕಾರದ ನಿಯಮ ಅನುಸಾರ ಸ್ಪಂದಿಸುವಂತೆ ರಾಜ್ಯದ 80 ಶಾಸಕರು, ಸಂಸದರು ಪತ್ರ ನೀಡಿದ್ದಾರೆ ಆದರೆ, ಸ್ಥಳೀಯ ಶಾಸಕರ ವಿರುದ್ದ ಉದ್ದೇಶ ಪೂರ್ವಕವಾಗಿ ಪ್ರತಿಭಟನೆ ನಡೆಸುವುದು ಸೂಕ್ತ ಅಲ್ಲ ಎಂದು ದಲಿತ ಮುಖಂಡ ರಮೇಶ ಡಾಕುಳಗಿ ಹೇಳಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪರಿಶಿಷ್ಟ ಜಾತಿಗಳ ಒಕ್ಕೂಟ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಮಾತಮಾಡಿ ಅವರು, ಪ್ರತಿಭಟನೆ, ಬಂದ್ ಮಾಡಿಸುವುದರ ಹಿಂದೆ ಬಿಜೆಪಿ, ಆರ್ ಎಸ್ಎಸ್ ಕೈವಾಡ ಇರುವುದು ಗೊತ್ತಾಗುತ್ತಿದ್ದು, ದಲಿತ ಶಾಸಕರು ಕೂಡ ವೀರಶೈವ ಜಂಗಮರ ಪರ ಪತ್ರ ನೀಡಿದ್ದಾರೆ ಎಂಬುವುದು ಎಲ್ಲರೂ ತಿಳಿದುಕೊಳ್ಳಬೇಕು. ಪರಿಶಿಷ್ಟ ಜಾತಿಗೆ ಯಾವುದೇ ಬೇರೆ ಸಮುದಾಯದವರನ್ನು, ಜಾತಿಯವರನ್ನು ಸೇರಿಸಬಾರದು ಎಂದುವುದು ನಮ್ಮ ಒತ್ತಾಯಕೂಡ ಮಾಡುತ್ತೇವೆ ಎಂದರು.
ವೀರಶೈವ ಜಂಗಮ ಹಾಗೂ ಬೇಡ ಜಂಗಮರ ಮಧ್ಯೆ ವ್ಯತ್ಯಾಸ ಇದೆ. ವೀರಶೈವ ಜಂಗಮರು ಬೇಡ ಜಗಮರು ಅಲ್ಲ, ಅವರನ್ನು ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿಗೆ ಸೇರಿಸದಂತೆ ನಾವುಗಳು ಕೂಡ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸುತ್ತಿದ್ದೇನೆ ಎಂದ ಅವರು, ಶುಕ್ರವಾರ ವಿವಿಧ ದಲಿತ ಸಂಘಟನೆಗಳ ಮುಖಂಡರು ಸುದ್ದಿಗೋಷ್ಟಿ ನಡೆಸಿ ಸೆಪ್ಟೆಂಬರ್ 20 ರಂದು ಹುಮನಾಬಾದ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಹೇಳಿದ ಮುಖಂಡರ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ಅಲ್ಲದೆ, ಭಾನುವಾರ ತಾಲೂಕಿನ ವಿವಿಧ ಗ್ರಾಮಗಳ ದಲಿತ ಮುಖಂಡರ ಸಮುಖದಲ್ಲಿ ಸಭೆಯೊಂದು ನಡೆಯುತ್ತಿದ್ದು, ಎಲ್ಲಾ ವಿಷಯಗಳ ಕುರಿತು ಸೂಕ್ತವಾಗಿ ಚರ್ಚೆಮಾಡಿ ಮಾತುಕತೆ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗ್ಗೆ ಹರಿಸುವ ಕೆಲಸ ಮಾಡಲಾಗುವುದು. ಒಂದು ವೇಳೆ ಮಾತುಕತೆ ಮೂಲಕ ಬಗೆಹರಿಯದಿದ್ದರೆ ಮುಂದಿನ ನಡೆ ಕುರಿತು ತಿರ್ಮಾನಿಸಲಾಗುವುದು. ಬಂದ್ ಮಾಡುವುದಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಸುದ್ದಿಗೊಷ್ಟಿಯಲ್ಲಿ ದಲಿತ ಮುಖಂಡರಾದ ವಿಜಯಕುಮಾರ ನಾತೆ, ಮಲ್ಲಿಕಾರ್ಜುನ ಶರ್ಮಾ, ಪ್ರಭುರಾವ ತಾಳಮಡಗಿ, ನರಸಪ್ಪ ಪಸನೂರ್, ಮಲ್ಲಿಕಾರ್ಜುನ ಮಹೇಂದ್ರಕರ್, ಹುಲೆಪ್ಪ, ವೀರಪ್ಪ ಧುಮನಸೂರ್, ಸುರೇಶ ಘಾಂಗ್ರೆ, ದೇವೆಂದ್ರ ಹಳ್ಳಿಖೇಡ(ಕೆ) ಸೇರಿದಂತೆ ಅನೇಕ ಮುಖಂಡರು ಇದ್ದರು.