ಉಡುಪಿ: ಕೊರೊನಾ ಮಹಾಮಾರಿಯನ್ನು ಮಣಿಸಲು ಕೊವಿಶೀಲ್ಡ್ ಲಸಿಕೆ ಪಡೆದವರಲ್ಲಿ ಪುರುಷತ್ವ ಹರಣವಾಗಲಿದೆ ಎಂಬುದು ಶುದ್ಧ ಸುಳ್ಳು ಎಂದು ಮಣಿಪಾಲ ಕೆಎಂಸಿ ವೈದ್ಯರ ತಂಡ ನಡೆಸಿದ ಸಂಶೋಧನೆಯಿಂದ ಸಾಬೀತಾಗಿದೆ.
ಇದನ್ನೂ ಓದಿ:ಪಂಜಾಬ್:ಆಮ್ ಆದ್ಮಿ ಪಕ್ಷದ 10 ಶಾಸಕರನ್ನು ಬಿಜೆಪಿ ಸಂಪರ್ಕಿಸಿ, ಆಫರ್ ನೀಡಿತ್ತು: ಕೇಜ್ರಿವಾಲ್
ಸಂಶೋಧನೆಗೆ 53 ಪುರುಷರ ವೀರ್ಯವನ್ನು ಬಳಸಲಾಗಿದೆ. ಅವರು ಕೊರೊನಾ ಲಸಿಕೆ ಪಡೆಯವ ಮೊದಲ ಹಾಗೂ 2 ಡೋಸ್ ಕೊವಿಶೀಲ್ಡ್ ಪಡೆದ ಅನಂತರದ ವೀರ್ಯವನ್ನು ಸಂಶೋಧನೆಗೆ ಬಳಸಲಾಗಿದ್ದು, ಯಾರೊಬ್ಬರಲ್ಲಿಯೂ ಪುರುಷತ್ವ ಫಲವತ್ತತೆಯ ಕೊರತೆ ಕಂಡುಬಂದಿಲ್ಲ.
ಹೀಗಾಗಿ ಕೊವಿಶೀಲ್ಡ್ ಲಸಿಕೆಯಿಂದ ಪುರುಷತ್ವದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ಸಂಶೋಧನ ತಂಡದ ಮುಖ್ಯಸ್ಥರಾದ ಕೆಎಂಸಿ ಭೂಣಶಾಸ್ತ್ರ ವಿಭಾಗದ ಪ್ರೊ| ಸತೀಶ್ ಅಡಿಗ ತಿಳಿಸಿದರು. ಮಾಹೆ ಕುಲಪತಿ ಲೆ| ಜ| ಡಾ|ಎಂ.ಡಿ. ವೆಂಕಟೇಶ್ ಪ್ರತಿಕ್ರಿಯಿಸಿ, ಈ ಸಂಶೋಧನೆಯಿಂದ ಕೊವಿಶೀಲ್ಡ್ ಲಸಿಕೆ ಬಗ್ಗೆ ಇದ್ದಂತಹ ಹಲವು ಊಹಾ ಪೋಹಕ್ಕೆ ಉತ್ತರ ಸಿಕ್ಕಿದೆ. ಲಸಿಕೆಯ ಸುರಕ್ಷೆಯ ಬಗ್ಗೆ ಇನ್ನಷ್ಟು ಭರವಸೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಕೆಎಂಸಿ ಡೀನ್ ಡಾ| ಶರತ್ ರಾವ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಹ್ಯುಡ್ರೊಮ್ ಯೈಫದಾ, ಶುಭಶ್ರೀ ಉಪ್ಪಂಗಳ, ವಾಣಿ ಲಕ್ಷ್ಮೀ ಹಾಗೂ ಗುರುಪ್ರಸಾದ್ ಕಳ್ತೂರು ಸಂಶೋಧನ ತಂಡದಲ್ಲಿದ್ದರು.