19ನೇ ವಾರ್ಡ್ ಆಗಿ ರಚನೆಗೊಂಡರುವ ಮಿಲಿಟ್ರಿ ಗ್ರೌಂಡ್‌ಗೆ ಚರಂಡಿ, ರಸ್ತೆ ಸಮಸ್ಯೆಗಿಂತ ವಾಸಸ್ಥಳಕ್ಕೆ ಹಕ್ಕಿಲ್ಲದ್ದೆ ಚಿಂತೆಯಾಗಿದೆ. ಹೊಸ ವಾರ್ಡ್ ರೂಪುಗೊಂಡ ತರಹ, ಹೊಸದಾಗಿ ಹಕ್ಕುಪತ್ರ ಕೈ ಸೇರಬೇಕು ಎನ್ನುವ ಬೇಡಿಕೆ ಕೂಡ ಇಲ್ಲಿನವರದ್ದು.
Advertisement
ಸೌಲಭ್ಯವೂ ಸಿಗುತ್ತಿಲ್ಲಇಲ್ಲಿನ 236 ಮನೆಗಳಲ್ಲಿ ನವರು ವಾಸಿಸುತ್ತಿರುವ ಈ ಪ್ರದೇಶ ದೇಶದ ರಕ್ಷಣಾ ಇಲಾಖೆಯ ಮಿಲಿಟರಿ ಚಟು ವಟಿಕೆಗೆ ಕಾದಿರಿಸಿದ ಸ್ಥಳ ಎಂದು ಕಂದಾಯ ಇಲಾಖೆಯ ದಾಖಲೆಯೊಂದು ಹಕ್ಕುಪತ್ರ ಸಿಗುವಲ್ಲಿನ ಅಡ್ಡಿಗೆ ಕಾರಣವಾಗಿದೆ. ಹಕ್ಕುಪತ್ರಕ್ಕೆ ಹೋರಾಟ ಸಾಗಿದೆ. ಜನಪ್ರತಿ ನಿಧಿಗಳಿಂದ ಹಿಡಿದು ಉನ್ನತ ಅಧಿಕಾರಿಗಳ ತನಕ ಸಾಲು ಸಾಲು ಪತ್ರ ಸಲ್ಲಿಕೆ, ಭೇಟಿ ಯಾಗಿ ಚರ್ಚೆಯೂ ಆಗಿದೆ.
ಅದರಂತೆ ಮುಖ್ಯ ಕಾರ್ಯದರ್ಶಿಯವರು ಜಿಲ್ಲಾಧಿ ಕಾರಿಗಳು, ಸಹಾಯಕ ಕಮಿಷನರ್ ಅವರ ಮುಖಾಂತರ ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸಲು ಸೂಚಿಸಿ ಆ ಪ್ರಕ್ರಿಯೆ ನಡೆದಿದೆ. ತಾಲೂಕು ಕಂದಾಯ ಇಲಾಖೆ ಸ್ವಾಧೀನದಲ್ಲಿರುವ ಮನೆ ನಿವೇಶನದ ವಿಸ್ತೀರ್ಣ ಸರ್ವೆ ಕಾರ್ಯ ಪೂರ್ಣಗೊಂಡಿದೆ.
Related Articles
Advertisement
ಏನಿದು ಮಿಲಿಟ್ರಿ ಗ್ರೌಂಡ್?1939ರಲ್ಲಿ ಬ್ರಿಟಿಷ್ ಆಡಳಿತ ಕಾಲದಲ್ಲಿ ಮಿಲಿಟರಿ ಉದ್ದೇಶಕ್ಕಾಗಿ ಜಯನಗರದಲ್ಲಿ 76 ಎಕ್ರೆ ಸ್ಥಳ ಮೀಸಲಿರಿಸಲಾಗಿತ್ತು. ಆದರೆ ಆ ಜಾಗದಲ್ಲಿ ಸ್ವಾತಂತ್ರ್ಯ ಪೂರ್ವ ಅಥವಾ ಅನಂತರದಲ್ಲಾಗಲಿ ಮಿಲಿಟರಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆ ನಡೆದಿರುವ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲ ಎನ್ನುತ್ತಾರೆ ಸ್ಥಳೀಯರು. ಕಂದಾಯ ಇಲಾಖೆ ದಾಖಲೆಯಲ್ಲಿ ಮಿಲಿಟರಿ ಗ್ರೌಂಡ್ ಎನ್ನುವ ಕೈ ಬರೆಹದ ಪತ್ರ ಇದೆ. ಇದು ಮಿಲಿಟರಿ ಚಟುವಟಿಕೆಗೆ ಕಾದಿರಿಸಿರುವುದಕ್ಕೆ ಇರುವ ಏಕೈಕ ಆಧಾರವಷ್ಟೆ. ಈಗಿನ ಪಹಣಿಯಲ್ಲಿ ದಾಖಲಾತಿ 38.61 ಎಕ್ರೆ ಎಂದಿದೆ. 1939ರಲ್ಲಿ 76 ಎಕ್ರೆ ಮಿಲಿಟರಿ ಗ್ರೌಂಡ್ ಎಂದು ದಾಖಲೆಗಳಿತ್ತು. 1994-95ರಲ್ಲಿ ನಡೆಸಿದ ಸರ್ವೆ ಪ್ರಕಾರ 43 ಎಕ್ರೆ ಜಾಗವಿರುವುದಾಗಿ ದಾಖಲೆಗಳು ಹೇಳುತ್ತವೆ. ಅದರಲ್ಲಿ ಕಟ್ಟಡ, ದಾರಿ, ರಸ್ತೆ 16 ಎಕ್ರೆ. ಮನೆ ನಿವೇಶನ 11 ಎಕ್ರೆ, ಹೌಸಿಂಗ್ ಕಾರ್ಪೊರೇಶನ್ 2 ಎಕ್ರೆ, ಬಂಜರು ಬೆಟ್ಟ ಪ್ರದೇಶ 5.60 ಎಕ್ರೆ ಇದೆ. ಇತ್ತೀಚೆಗೆ ಮಾಡಿದ ಸರ್ವೆ ಪ್ರಕಾರ ಒಟ್ಟು 38.61 ಎಕ್ರೆ ಸ್ಥಳ ಕಂಡು ಬಂದಿದೆ. ಕಿರಣ್ ಪ್ರಸಾದ್ ಕುಂಡಡ್ಕ