Advertisement

ಗೋಮಾಳಕ್ಕೆ ಸರ್ಕಾರದ ಅನುಮತಿ ಇಲ್ಲ: ಶಾಸಕ ಮಂಜುನಾಥ್‌

06:00 PM Oct 21, 2022 | Team Udayavani |

ಹುಣಸೂರು: ಮುಂದಿನ ತಿಂಗಳು ನಡೆಯಲಿರುವ ಅಕ್ರಮ ಸಕ್ರಮ ಸಮಿತಿಗೆ ಕನಿಷ್ಠ ನೂರು ಅರ್ಜಿಗಳನ್ನು ಸಾಗುವಳಿ ಸಕ್ರಮಗೊಳಿಸಲು ಕಂದಾಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸು ವಂತೆ ಶಾಸಕ ಎಚ್‌.ಪಿ. ಮಂಜುನಾಥ್‌ ಸೂಚಿಸಿದರು.

Advertisement

ನಗರದ ಮಿನಿವಿಧಾನ ಸೌಧದ ಸಭಾಂಗಣದಲ್ಲಿ ಬುಧವಾರ ನಡೆದ ಅಕ್ರಮ-ಸಕ್ರಮ ಸಾಗುವಳಿ ಸಮಿತಿಯ ಸಭೆಯಲ್ಲಿ ಮಾತನಾಡಿ, ತಾಲೂಕಿನ ರೈತರು ಭೂಮಿ ಸಾಗುವಳಿಗಾಗಿ ನಿತ್ಯ ಅಲೆಯು ವುದನ್ನು ತಪ್ಪಿಸಲು ಈ ಹಿಂದೆ ನಮೂನೆ 53 ಮತ್ತು 57ರಲ್ಲಿ ಸಲ್ಲಿಸಿರುವ ಕನಿಷ್ಠ ನೂರು ಫೈಲ್‌ಗ‌ಳನ್ನು ಮುಂದಿನ ಸಭೆಯಲ್ಲಿ ಮಂಡನೆಯಾಗಬೇಕು.

ಈಗಾಗಲೆ ಅರ್ಜಿ ಸಲ್ಲಿಸಿರುವ ಕುಟುಂಬಗಳ ಸಣ್ಣಪುಟ್ಟ ತಕರಾರುಗಳನ್ನು ಗ್ರಾಮಗಳಿಗೆ ಬೇಟಿ ನೀಡಿ ಪರಮಾರ್ಶಿಸಿ ಅಲ್ಲಿಯೇ ಕುಟುಂಬಸ್ಥ ರೊಂದಿಗೆ ಚರ್ಚಿಸಿ ಬಗೆಹರಿಸಿ ರೈತರ ಸಮಸ್ಯೆಗಳಿಗೆ ಕಾನೂನಾತ್ಮಕವಾಗಿ ಸ್ಪಂದಿಸಬೇಕೆಂದು ಸೂಚಿಸಿದರು.

ಅನುಮತಿ ಇಲ್ಲ, ಮೋಸಹೋಗಬೇಡಿ: ಗೋಮಾಳ ಜಮೀನಿಗೆ ಅರ್ಜಿ ಸಲ್ಲಿಸಿರುವ ರೈತರು ಸಾಗುವಳಿಗಾಗಿ ಕಚೇರಿ ಅಲೆಯಬೇಡಿ. ಸರ್ಕಾರ ಗೋಮಾಳ ಭೂಮಿಗೆ ಸಾಗುವಳಿ ನೀಡಲು ಅನುಮತಿ ನೀಡಿರುವುದಿಲ್ಲವೆಂದು ತಿಳಿಸಿ ಗೋಮಾಳ ಸಾಗುವಳಿಗಾಗಿ ನಿತ್ಯ ತಾಲೂಕು ಕಚೇರಿ ಹಾಗೂ ಮಧ್ಯವರ್ತಿಗಳ ಮೊರೆ ಹೋಗಿ ಮೋಸ ಹೋಗಬೇಡಿ ಎಂದು ಸಲಹೆ ನೀಡಿದರು.

53 ಅರ್ಜಿಗಳ ಪರಿಶೀಲನೆ: ಇಂದಿನ ಸಭೆಯಲ್ಲಿ ಒಟ್ಟು 53 ಅರ್ಜಿಗಳನ್ನು ಪರಿಶೀಲನೆ ನಡೆಸಲಾಗಿದ್ದು ನಮೂನೆ 57ರಲ್ಲಿ ಸಲ್ಲಿಕೆಯಾಗಿದ್ದ 43 ಅರ್ಜಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಿಂದ ಬಂದ 10 ಅರ್ಜಿಗಳು ಪರಿಶೀಲನೆ ನಡೆಸಿ, ಈ ಪೈಕಿ 27 ಅರ್ಜಿಗಳನ್ನು ಸಕ್ರಮಗೊಳಿಸಿ ನೋಟಿಸ್‌ ಹೊರಡಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

Advertisement

ನೂರಕ್ಕೂ ಹೆಚ್ಚು ಮಂದಿಯಿಂದ ಅಹವಾಲು:ಗೋಮಾಳ ಮತ್ತಿತರ ಸಣ್ಣಪುಟ್ಟ ಸಮಸ್ಯೆಗಳಿರುವ ನೂರಕ್ಕೂ ಹೆಚ್ಚು ಅರ್ಜಿದಾರರನ್ನು ಸಮಿತಿ ಸಭೆಗೆ ಕರೆಸಿ, ಆರ್‌.ಐ,ವಿ.ಎ. ತಹಶೀಲ್ದಾರ್‌ ಹಾಗೂ ಸಮಿತಿ ಸದಸ್ಯರ ಸಮ್ಮಖದಲ್ಲೇ ವಿಚಾರಣೆ ನಡೆಸಿ ಕೆಲವಕ್ಕು 57ರಡಿಯಲ್ಲಿ ಅರ್ಜಿಸಲ್ಲಿಸಲು ಹಾಗೂ ಗೋಮಾಳ ಮಂಜೂರಾತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಮಸ್ಯೆಗಳನ್ನು ಇತ್ಯರ್ಥಪಡಿಸಿ, ರೈತರು ಮಧ್ಯವರ್ತಿಗಳಿಗೆ ಹಣ ನೀಡಿದ್ದೇವೆಂದು ಹೇಳುವುದು ಅಧಿಕಾರಿಗಳ ವಿರುದ್ಧ ಚಾಡಿ ಹೇಳುವುದು ತರವಲ್ಲ ಹಣ ನೀಡುವುದು ಸಹ ಅಪರಾಧ, ಹೀಗಾಗಿ ಯಾರಿಗೂ ಲಂಚ ನೀಡದೆ, ಮಧ್ಯವರ್ತಿಗಳ ಗಾಳಕ್ಕೆ ಸಿಲುಕದೆ ಸಮಸ್ಯೆಗಳಿದ್ದಲ್ಲಿ ಮುಂದಿನ ಸಭೆಯಲ್ಲಿ ನೇರವಾಗಿ ಸಮಿತಿ ಮುಂದೆ ಬಂದು ಚರ್ಚಿಸಿರೆಂದು ಮನವಿ ಮಾಡಿದರು.

ಸಮಿತಿ ಸದಸ್ಯ ನಾಗರಾಜ್‌ ಮಾತನಾಡಿ, ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಧಿಕಾರಿಗಳ ಹಂತದಲ್ಲಿ ಬಾಕಿ ಉಳಿಸಿಕೊಂಡಿರುವ ಅರ್ಜಿಗಳನ್ನು ಸಮಿತಿ ಮುಂದೆ ಹಾಜರುಪಡಿಸಿದಲ್ಲಿ ಬಡ ರೈತರಿಗೆ ಸಾಗುವಳಿ ಕೊಡಲು ನೆರವಾಗಲಿದ್ದು, ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚಿಸಿದರು. ಸಮಿತಿಯ ಕಾರ್ಯದರ್ಶಿ ಹಾಗೂ ತಹಶೀಲ್ದಾರ್‌ ಲೆಫ್ಟಿನೆಂಟ್‌ ಕರ್ನಲ್‌ ಡಾ.ಅಶೋಕ್‌, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ನಾಗರಾಜ ಮಲ್ಲಾಡಿ, ವೆಂಕಟಮ್ಮ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next