Advertisement
ಜೆಡಿಯು ಎರಡು ಸಚಿವ ಸ್ಥಾನ ನೀಡುವಂತೆ ಕೇಳಿತ್ತು. ಆದರೆ ಬಿಜೆಪಿ ಕೇವಲ ಒಂದು ಸಚಿವ ಸ್ಥಾನ ನೀಡಲು ನಿರ್ಧರಿಸಿತ್ತು. ಕೊನೆಯ ಕ್ಷಣದವರೆಗೂ ಬಿಜೆಪಿ ಮುಖಂಡರು ಹಾಗೂ ನಿತೀಶ್ ಕುಮಾರ್ ಜೊತೆಗೆ ಮಾತುಕತೆ ನಡೆದಿದೆ. ಆದರೆ ಮಾತುಕತೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ ತನ್ನ ಇಬ್ಬರು ಆಪ್ತರಿಗೆ ಸಚಿವ ಸ್ಥಾನ ಕೊಡಿಸಲು ನಿತೀಶ್ ನಿರ್ಧರಿಸಿದ್ದರು. ಆದರೆ ಬಿಜೆಪಿ ಎಲ್ಲ ಮಿತೃಪಕ್ಷಗಳಿಗೂ ಒಂದೇ ಸಚಿವ ಸ್ಥಾನ ನೀಡಲು ತೀರ್ಮಾನಿಸಿತ್ತು. ಆದರೆ ಒಬ್ಬ ಆಪ್ತರಿಗೆ ಮಾತ್ರವೇ ಸಚಿವ ಸ್ಥಾನ ಕೊಡಿಸಿದರೆ, ಪಕ್ಷದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು ಎಂಬ ಕಾರಣಕ್ಕೆ ನಿತೀಶ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. Advertisement
ಸರಕಾರದಲ್ಲಿ ಜೆಡಿಯು ಇಲ್ಲ!
02:25 AM May 31, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.