Advertisement

ವೈದ್ಯ ಪಿಜಿಗೆ ಇನ್ನು ಪ್ರತ್ಯೇಕ ಪ್ರವೇಶ ಪರೀಕ್ಷೆ ಬೇಡ?

01:46 AM Jul 15, 2019 | Team Udayavani |

ಹೊಸದಿಲ್ಲಿ: ವೈದ್ಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಬಯಸುವವರು ಇನ್ನು ಮುಂದೆ ನೀಟ್‌- ಪಿ.ಜಿ. ಪರೀಕ್ಷೆ ಬರೆಯುವ ಸಾಧ್ಯತೆ ಕಡಿಮೆಯಾಗಬಹುದು.

Advertisement

ಎಂ.ಡಿ. ಅಥವಾ ಎಂ.ಎಸ್‌. ಕೋರ್ಸ್‌ಗಳಿಗೆ ಎಂಬಿಬಿಎಸ್‌ ಅಂತಿಮ ವರ್ಷದ ಪರೀಕ್ಷೆಯ ಮೂಲಕವೇ ಪ್ರವೇಶ ಪಡೆಯುವಂತೆ ಮಾಡುವ ವ್ಯವಸ್ಥೆ ಜಾರಿ ಮಾಡುವ ಬಗ್ಗೆ ಪರಿಷ್ಕೃತ ಗೊಳಿಸಲಾದ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಕರಡು ವಿಧೇಯಕದಲ್ಲಿ ಸೇರಿಸಲಾಗಿದೆ. ಕೇಂದ್ರ ಸಂಪುಟದ ಮುಂದೆ ಈ ವಿಚಾರ ಚರ್ಚೆಗೆ ಬರಲಿದ್ದು, ಅಂಗೀಕಾರಗೊಳ್ಳುವ ಸಾಧ್ಯತೆ ಇದೆ.

ದೇಶದಲ್ಲಿ ಏಕವ್ಯಾಪಿಯಾಗಿ ನಡೆಯುವ ನ್ಯಾಷನಲ್‌ ಎಕ್ಸಿಟ್‌ ಟೆಸ್ಟ್‌ (ನೆಕ್ಸ್ಟ್) ಮೂಲಕ ನಡೆಯುವ ಪರೀಕ್ಷೆ ಮೂಲಕ ಎಂಬಿ ಬಿಎಸ್‌ ಪದವೀಧರರು ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಹುದು. ಜತೆಗೆ ವೈದ್ಯ ಪ್ರಾಕ್ಟೀಸ್‌ ಮಾಡಲು ಪರವಾನಗಿ ಪಡೆದಿರುವುದರಿಂದ ಪ್ರತ್ಯೇಕ ಪರೀಕ್ಷೆ ಬರೆಯಬೇಕಾಗಿಲ್ಲ ಎಂದು ತಿದ್ದುಪಡಿಯಲ್ಲಿ ಸೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next