ಬೆಂಗಳೂರು : ಹಿಂದೂ ಎಂಬ ಕಾರಣಕ್ಕೆ ಅಂತರಾಷ್ಟ್ರೀಯ ಲಾಬಿಗಳು ಹರ್ಷಗೆ ಬೆಂಬಲ ಸೂಚಿಸಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೋಮವಾರ ಟ್ವೀಟ್ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿ ಮೂಲಭೂತವಾದಿ ಶಕ್ತಿಗಳಿಂದ ಹರ್ಷ ಹತ್ಯೆಗೀಡಾಗಿದ್ದಾನೆ. ಅವನಿಗೆ ಶತ್ರು ಇಲ್ಲ. ಅಂತರಾಷ್ಟ್ರೀಯ ಲಾಬಿಯಿಂದ ಅವನಿಗೆ ಯಾವುದೇ ಮುಖಪುಟದ ಬೆಂಬಲ ಅಥವಾ ಗೌರವವಿಲ್ಲ. ಅವನು ಹಿಂದೂ ಆಗಿದ್ದ ಮತ್ತು ರಾಷ್ಟ್ರೀಯವಾದಿಯಾಗಿದ್ದ. ಅವನ ಕುಟುಂಬದ ಪರವಾಗಿ ನಿಲ್ಲೋಣ. ಕಾರಣಕ್ಕಾಗಿ ನಿಲ್ಲೋಣ ಎಂದು ಟ್ವೀಟ್ ಮಾಡಿದ್ದಾರೆ.
ಭಾನುವಾರ ತಡರಾತ್ರಿ ಶಿವಮೊಗ್ಗದ ಭಾರತಿ ಕಾಲೋನಿಯ ರವಿವರ್ಮ ಲೇನ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಹರ್ಷ ಕೊಲೆ ಮಾಡಿದ್ದರು. ಸೋಮವಾರ ಅಂತ್ಯಕ್ರಿಯೆ ನಡೆಸಲಾಗಿದ್ದು, ಶವಯಾತ್ರೆಯ ವೇಳೆ ಅಹಿತಕರ ಘಟನೆಗಳು ನಡೆದಿವೆ. ಶಿವಮೊಗ್ಗದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.