Advertisement

ಕಸ್‌ಗಂಜ್‌: ಹೊಸ ಹಿಂಸೆ ಇಲ್ಲ; ಇಬ್ಬರು ಆರೋಪಿಗಳಿಗಾಗಿ ಶೋಧ

03:21 PM Feb 01, 2018 | Team Udayavani |

ಕಸ್‌ಗಂಜ್‌: ಕಸ್‌ಗಂಜ್‌ನಲ್ಲಿ ನಿನ್ನೆ ಬುಧವಾರ ರಾತ್ರಿಯಿಂದೀಚೆಗೆ ಹೊಸದಾಗಿ ಯಾವುದೇ ಹಿಂಸೆ ನಡೆದಿಲ್ಲ;  ಇಡಿಯ ಪಟ್ಟಣದಲ್ಲೀಗ ಗನ್‌ಧಾರಿ ಭದ್ರತಾ ಸಿಬಂದಿಗಳು ಎಲ್ಲೆಡೆ ಎಂಬಂತೆ ಠಳಾಯಿಸುತ್ತಿರುವುದು ಕಂಡು ಬರುತ್ತಿದೆ.

Advertisement

ಇದೇ ವೇಳೆ ಇಬ್ಬರು ಆರೋಪಿಗಳಾದ ನಸೀಮ್‌ ಮತ್ತು ವಸೀಮ್‌ ಎಂಬವರಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವರು ಸಲೀಂ ನ ಸಹೋದರರಾಗಿದ್ದು ಚಂದನ್‌ ಗುಪ್ತಾ ಹತ್ಯೆಯ ಮುಖ್ಯ ಆರೋಪಿಗಳಾಗಿದ್ದಾರೆ. 

30ರ ಹರೆಯದ ಸಲೀಮ್‌ ಮತ್ತು ಆತನ ಸಹೋದರರು 22ರ ಹರೆಯದ ಕಾಲೇಜು ವಿದ್ಯಾರ್ಥಿಯನ್ನು ಹತ್ಯೆಗೈದ ಆರೋಪಿಗಳಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next