Advertisement
ಪೌರತ್ವ ಕಾಯ್ದೆ ಕುರಿತು ವಿವಿಧ ದೇಶಗಳಿಂದ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ. ಸಿಎಎ ವಿರುದ್ಧ ಐರೋಪ್ಯ ಒಕ್ಕೂಟದ ಸಂಸತ್‌ನಲ್ಲಿ ನಿರ್ಣಯ ಮಂಡಿಸಿರುವ ಕುರಿತು ಶಿವಸೇನೆ ಸಂಸದ ಅನಿಲ್ ದೇಸಾಯಿ ಪ್ರಸ್ತಾಪಿಸಿದ್ದಕ್ಕೆ ಪ್ರತಿಯಾಗಿ ಸಭಾಧ್ಯಕ್ಷ ನಾಯ್ಡು ಈ ಸ್ಪಷೆ° ನೀಡಿದ್ದಾರೆ. ನಮ್ಮ ಆಂತರಿಕ ವಿಚಾರವನ್ನು ಸಂಸತ್‌ನಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಹೊರಗಿನ ದೇಶಗಳು ಅದರಲ್ಲಿ ಮೂಗು ತೂರಿಸಬಾರದು. ಆಯಾಯ ದೇಶಗಳು ತಮ್ಮ ಕೆಲಸ ಏನಿದೆಯೋ ಅದನ್ನು ನೋಡಿಕೊಳ್ಳಲಿ ಎಂದು ನಾಯ್ಡು ಖಡಕ್ಕಾಗಿ ನುಡಿದಿದ್ದಾರೆ.
ಈ ನಡುವೆಯೇ, ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಿಡಿಕಾರಿದ್ದು, “ಪೌರತ್ವ ಕಾಯ್ದೆ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿಯು ದೇಶದ ಸಾಮಾಜಿಕ ಆಶಯವನ್ನೇ ಧ್ವಂಸ ಮಾಡುತ್ತಿದೆ. ಸಂವಿಧಾನವು ಅಪಾಯದಲ್ಲಿದೆ’ ಎಂದು ಆರೋಪಿಸಿದವು. ಇದೇ ವೇಳೆ, ಸರ್ಕಾರವು ತರಲುದ್ದೇಶಿಸಿದ ಸಿಎಎ, ಎನ್‌ಆರ್‌ಸಿಯಂಥ ಕುಟಿಲ ನೀತಿಯನ್ನು ಜನರೇ ವಿಫಲಗೊಳಿಸಿದರು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಹೇಳಿದ್ದಾರೆ. ಇನ್ನು ಎನ್‌ಸಿಪಿ, ಡಿಎಂಕೆ, ಟಿಡಿಪಿ ಹಾಗೂ ಆರ್‌ಜೆಡಿ ಸದಸ್ಯರು ಜಮ್ಮು-ಕಾಶ್ಮೀರದಲ್ಲಿ ಎನ್‌ಸಿ ನಾಯಕ ಫಾರೂಕ್ ಅಬ್ದುಲ್ಲಾರನ್ನು ಗೃಹಬಂಧನದಲ್ಲಿ ಇಟ್ಟಿರುವುದನ್ನು ಖಂಡಿಸಿದರು.
Related Articles
2011ರ ಗಣತಿ ಪ್ರಕಾರ, ದೇಶದಲ್ಲಿ ಸುಮಾರು 10.38 ಕೋಟಿ ಹಿರಿಯ ನಾಗರಿಕರಿದ್ದಾರೆ. ತಮ್ಮ ತಮ್ಮ ಮನೆಗಳಲ್ಲಿ ಏಕಾಂಗಿಯಾಗಿ ಜೀವಿಸುತ್ತಿರುವ ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಎನ್‌ಜಿಒಗಳಿಗೆ ವಹಿಸುವಂತೆ ಹೊಸ ಯೋಜನೆಯೊಂದನ್ನು ಸರ್ಕಾರ ಜಾರಿ ಮಾಡಲು ಚಿಂತನೆ ನಡೆಸಿದೆ. ಜತೆಗೆ, ಅವರಿಗಾಗಿ ಡೇ ಕೇರ್ ವ್ಯವಸ್ಥೆ ಕಲ್ಪಿಸಲೂ ಯೋಜಿಸಿದ್ದೇವೆ ಎಂದು ಸಚಿವ ಥಾವರ್‌ಚಂದ್ ಗೆಹೊÉàಟ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
Advertisement
ಪ್ರಮುಖ ಬಂದರು: ಸಂಪುಟ ಅಸ್ತುಮಹಾರಾಷ್ಟ್ರದ ವಧವಾನ್‌ನಲ್ಲಿ ಹೊಸದಾದ ಬೃಹತ್ ಬಂದರು ನಿರ್ಮಾಣಕ್ಕೆ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. 65,544 ಕೋಟಿ ರೂ. ವೆಚ್ಚದಲ್ಲಿ ಈ ಬಂದರು ನಿರ್ಮಿಸಲು ಯೋಜಿಸಲಾಗಿದೆ. ಇದೇ ವೇಳೆ, ಬ್ಯಾಂಕಿಂಗ್ ನಿಬಂಧನೆ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ. ಠೇವಣಿದಾರರ ಹಿತಾಸಕ್ತಿ ಕಾಪಾಡುವ, ಸಹಕಾರಿ ಬ್ಯಾಂಕುಗಳನ್ನು ಬಲಿಷ್ಠಗೊಳಿಸುವ ಹಾಗೂ ಪಿಎಂಸಿಯಂಥ ಬಿಕ್ಕಟ್ಟಿನಿಂದ ಗ್ರಾಹಕರನ್ನು ರಕ್ಷಿಸುವ ಉದ್ದೇಶದಿಂದ ತಿದ್ದುಪಡಿ ತರಲಾಗಿದೆ.