Advertisement

ಪಠ್ಯ ಪರಿಷ್ಕರಣೆಯಿಂದ ಆರ್ಥಿಕ ನಷ್ಟವಾಗಿಲ್ಲ: ಶಿಕ್ಷಣ ಸಚಿವ ನಾಗೇಶ್‌

11:13 PM Jun 12, 2022 | Team Udayavani |

ಹಾಸನ: ಪಠ್ಯಪುಸ್ತಕ ಪರಿಷ್ಕರಣೆ ಮುಗಿದಿದ್ದು, ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಪರಿಷ್ಕರಣೆ ಯಿಂದ ಸರಕಾರಕ್ಕೆ ಯಾವುದೇ ಆರ್ಥಿಕ ನಷ್ಟ ಉಂಟಾಗಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣಪುಟ್ಟ ದೋಷಗಳಿದ್ದರೆ ಸರಿಪಡಿಸಲಾಗುವುದು. ಬಸವಣ್ಣನವರ ವಿಷಯ ಕೈಬಿಟ್ಟಿದ್ದರೆ ಅದನ್ನು ಸೇರ್ಪಡೆ ಮಾಡಲಾಗುವುದು.

ಹಿಂದೂ ಸಮಾಜ ಒಡೆಯಲು ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ವಿವಾದವನ್ನಾಗಿಸಿದರು. ಹಿಂದಿನಿಂದಲೂ ಹಿಂದೂ ಸಮಾಜ ಒಡೆದು ಒಂದು ಸಮುದಾಯ ಒಲೈಕೆ ಮಾಡುವ ಪ್ರಯತ್ನವನ್ನು ಕೆಲವು ಶಕ್ತಿಗಳು ಮಾಡುತ್ತಲೇ ಬಂದಿವೆ. ಅದರಲ್ಲಿ ಎಡಪಂಥೀಯರು ಮತ್ತು ಇತರರೂ ಇದ್ದಾರೆ ಎಂದರು.

ಇದನ್ನೂ ಓದಿ:ಲಾಡ್ಜ್ ಮೇಲೆ ದಾಳಿ : ಮತದಾರರಿಗೆ ಹಂಚಲು ತಂದಿದ್ದ ನಗದು, ಪ್ರಚಾರ ಸಾಮಗ್ರಿ ವಶ

ಮಹಾರಾಜರ ಅಧ್ಯಾಯ ತೆಗೆದಿದ್ಯಾರು?
ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪಠ್ಯಪುಸ್ತಕ ಪರಿಷ್ಕರಣೆ ಸಮಯದಲ್ಲಿ ಉನ್ನಿಕೃಷ್ಣನ್‌, ಮೈಸೂರು ಮಹರಾಜರು, ಕೆಂಪೇಗೌಡರು, ಕುವೆಂಪು ಅವರ ವಿಷಯಗಳ ಅಧ್ಯಾಯ ತೆಗೆದಿದ್ದಾರೆ. ಇದಕ್ಕೆ ಕಾಂಗ್ರೆಸ್‌ನಲ್ಲಿ ಉತ್ತರ ಇಲ್ಲ. ಕಾಂಗ್ರೆಸ್‌ಗೆ ಟಿಪ್ಪು ಸುಲ್ತಾನ್‌ ತೆಗೆದಿದ್ದು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಈ ರೀತಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next