Advertisement

ಭಾರತದಲ್ಲೂ ಕೊರೊನಾ ಭೀತಿ, ನಡೆಯಬಹುದೇ ರಂಗಿನ ಐಪಿಎಲ್: ಬಿಸಿಸಿಐ ಹೇಳಿದ್ದೇನು?

09:41 AM Mar 07, 2020 | keerthan |

ನವದೆಹಲಿ: ಕೊರೊನಾ ಸೋಂಕಿತರ ಸಂಖ್ಯೆ ಭಾರತದಲ್ಲಿ 29ಕ್ಕೆ ಮುಟ್ಟಿದ್ದರೂ, ಬಿಸಿಸಿಐ ಮಾತ್ರ ಕೂಟವನ್ನು ಮಾ.29ರಿಂದಲೇ ನಿಗದಿಯಂತೆ ನಡೆಸುತ್ತೇನೆಂದು ಹೇಳಿದೆ.

Advertisement

ಜಗತ್ತಿನಲ್ಲಿ ಸ್ವತಃ ಒಲಿಂಪಿಕ್‌ ರದ್ದಾಗುವ ಭೀತಿಯೆದುರಾಗಿದ್ದರೂ, ಐಪಿಎಲ್‌ ಮಾತ್ರ ಯಾವುದೇ ಆತಂಕಗಳಿಲ್ಲದೇ ನಡೆಯಲಿದೆ. ಇದಕ್ಕೆ ಕಾರಣವೂ ಇದೆ.

ಜಗತ್ತಿನಲ್ಲಿ ಕ್ರಿಕೆಟ್‌ ಆಡುವ ರಾಷ್ಟ್ರಗಳ ಸಂಖ್ಯೆ ಕಡಿಮೆ. ಆದ್ದರಿಂದ ವಿದೇಶಗಳಿಂದ ಭಾರತಕ್ಕೆ ಬಂದು ಆಡುವ ವಿದೇಶೀಯರ ಸಂಖ್ಯೆ ಇನ್ನೂ ಕಡಿಮೆ. ಅಷ್ಟು ಮಾತ್ರವಲ್ಲ ಕ್ರಿಕೆಟ್‌ ಚೆನ್ನಾಗಿರುವ ರಾಷ್ಟ್ರಗಳಲ್ಲಿ ಕೊರೊನಾ ಕಾಟವೂ ಇಲ್ಲ.

ಆದ್ದರಿಂದ ಭಾರತಕ್ಕೆ ಬಂದು ಆಡಲು ಯಾವುದೇ ದೇಶಗಳ ಆಟಗಾರರು ತಕರಾರು ಎತ್ತುತ್ತಿಲ್ಲ! ಇದು ಐಪಿಎಲ್‌ ನಿಗದಿಯಂತೆ ನಡೆಯಲು ಸಹಾಯ ಮಾಡಲಿದೆ.

ಕಿವೀಸ್‌ ಕ್ರಿಕೆಟಿಗರ ಮೇಲೆ ಒತ್ತಡ
ವೇಗವಾಗಿ ಹಬ್ಬುತ್ತಿರುವ ಕೊರೊನಾ ಐಪಿಎಲ್‌ ಮೇಲೆ ಪರಿಣಾಮ ಬೀರುವ ಲಕ್ಷಣಗಳಿವೆ. ಭಾರತದಲ್ಲಿ 29 ಮಂದಿ ಸೋಂಕಿತರು ಪತ್ತೆಯಾದ ಕಾರಣ, ಈ ಬಾರಿಯ ಐಪಿಎಲ್‌ನಲ್ಲಿ ಆಡಲು ತನ್ನ ಆಟಗಾರರನ್ನು ಕಳುಹಿಸಬೇಕೇ, ಬೇಡವೇ ಎಂಬ ಜಿಜ್ಞಾಸೆಯಲ್ಲಿದೆ. ನ್ಯೂಜಿಲೆಂಡ್‌ನ‌ 6 ಆಟಗಾರರಾದ, ಜಿಮ್ಮಿ ನೀಶಮ್‌, ಲಾಕಿ ಫ‌ರ್ಗ್ಯುಸನ್‌, ಮಿಚೆಲ್‌ ಮೆಕ್ಲೆನಗನ್‌, ಟ್ರೆಂಟ್‌ ಬೌಲ್ಟ್, ಕೇನ್‌ ವಿಲಿಯಮ್ಸನ್‌, ಮಿಚೆಲ್‌ ಸ್ಯಾಂಟ್ನರ್‌ಗೆ ಅಲ್ಲಿನ ಏನು ಸೂಚನೆ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕು. ಆದರೆ ಬಿಸಿಸಿಐ ಐಪಿಎಲ್‌ ನಿಗದಿಯಂತೆ ನಡೆಯಲಿದೆ ಎಂದು ಈಗಾಗಲೇ ಖಚಿತಪಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next