Advertisement

ವಿದೇಶಿ ವಕೀಲರ ಬಗ್ಗೆ ಭಯ ಬೇಕಿಲ್ಲ: ಸಿಜೆಐ ಖೇಹರ್‌

04:00 AM Jul 09, 2017 | Harsha Rao |

ಹೊಸದಿಲ್ಲಿ: ವಿದೇಶಿ ವಕೀಲರಿಗೆ ಭಾರತದ ಕಾನೂನು ಕ್ಷೇತ್ರದಲ್ಲಿ ಅವಕಾಶ ನೀಡಬೇಕು. ಆಗ ನಮ್ಮ ಕಾನೂನು ವ್ಯವಸ್ಥೆಯಲ್ಲಿ ಸುಧಾರಣೆ ಆಗುತ್ತದೆ. ವಿದೇಶಿ ವಕೀಲರ ಬಗ್ಗೆ ಭಾರತೀಯ ನ್ಯಾಯವಾದಿಗಳು ಭಯ ಪಡಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಹೇಳಿದ್ದಾರೆ. ವಿದೇಶಿ ವಕೀಲರು ಭಾರತಕ್ಕೆ ಬಂದು ಅಭ್ಯಾಸ ಮಾಡುವುದನ್ನು ದೇಶದ ಬಹುತೇಕ ವಕೀಲರು ವಿರೋಧಿಸುತ್ತಿರುವ ಕಾರಣ, ಸುಮಾರು 20 ವರ್ಷಗಳಿಂದ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿಲ್ಲ. ಆದರೆ, ನಮ್ಮ ವಕೀಲರು ಜಗತ್ತಿನ ಯಾರಿಗೂ ಕಮ್ಮಿಯಿಲ್ಲ.

Advertisement

ಹಾಗಾಗಿ, ಯಾರೋ ಬಂದು ನಮ್ಮ ಉದ್ಯೋಗ ಕಸಿಯು ತ್ತಾರೆ ಎಂಬ ಭಯ ಬೇಕಾಗಿಲ್ಲ ಎಂದೂ ಹೇಳಿದ್ದಾರೆ ಸಿಜೆಐ. ವಿದೇಶಿ ವಕೀಲರಿಗೆ ಭಾರತದಲ್ಲಿ ಅವಕಾಶ ನೀಡಲೇ ಬಾರದು ಎಂದು ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ ಈ ಮೊದಲು ಸುಪ್ರೀಂಕೋರ್ಟ್‌ನಲ್ಲಿ ವಾದಿಸಿತ್ತು. ಬಳಿಕ ತನ್ನ ನಿಲುವನ್ನು ಬದಲಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next